
ಪಿರಿಯಾಪಟ್ಟಣ (ಡಿ.28) : ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚಚ್‌ರ್ ಒಳ ನುಗ್ಗಿ ಆವರಣದಲ್ಲಿನ ಬಾಲ ಯೇಸುವಿನ ಪ್ರತಿಮೆ ಹಾಗೂ ಪೀಠೋಪಕರಣ ದ್ವಂಸಗೊಳಿಸಿ ಮೈಕ್ ಹಾಗೂ ಹುಂಡಿ ಕಳವು ಮಾಡಿರುವ ಘಟನೆ ಜರುಗಿದೆ.
ಮಂಗಳವಾರ ಬೆಳಗಿನ ಪೂಜೆಯ ನಂತರ ಚರ್ಚ್‌ನ ಫಾದರ್ ಜಾನ್ ಪೌಲ್(john paul) ಕರ್ತವ್ಯ ನಿಮಿತ್ತ ಮೈಸೂರಿಗೆ ತೆರಳಿದ್ದರು. ಚಚ್‌ರ್‍ನಲ್ಲಿ ಕೆಲಸಕ್ಕೆ ಇದ್ದ ಮಹಿಳೆಯು ಸಹ ರಜೆ ನಿಮಿತ್ತ ಮನೆಗೆ ತೆರಳಿದ್ದರು. ಸಂಜೆ 6 ಸಮಯದಲ್ಲಿ ಚಚ್‌ರ್‍ನ ಸಿಬ್ಬಂದಿ ರಾಜಣ್ಣ ಎಂಬುವವರು ಚಚ್‌ರ್‍ಗೆ ಲೈಟ್ ಹಾಕಲು ಬಂದಾಗ ಚಚ್‌ರ್ ಹಿಂಭಾಗದ ಬಾಗಿಲು ತೆರೆದಿರುವುದು ಹಾಗೂ ಹೂ ಕುಂಡ ಒಡೆದು ಹಾಕಿರುವುದು ಗಮನಕ್ಕೆ ಬಂದಿದೆ. ಆತಂಕಗೊಂಡ ರಾಜಣ್ಣ ಕೂಡಲೇ ಚಚ್‌ರ್‍ನ ಲೈಟ್ ಹಾಕಿ ಗಮನಿಸಿದಾಗ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚಚ್‌ರ್ ನ ಒಳಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಬಾಲ ಯೇಸುವಿನ ತೊಟ್ಟಿಲು ಮತ್ತು ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ ಬಾಲಯೇಸುವಿನ ತೊಟ್ಟಿಲನ್ನು ವೇದಿಕೆಯ ಮೇಲಿಂದ ಮುಂಭಾಗಕ್ಕೆ ಬಿಸಾಕಿರುವುದು ಕಂಡುಬಂದಿದೆ.
ಚರ್ಚ್ ಮೇಲೆ ಉಗ್ರರ ದಾಳಿ: ಕಂಬನಿ ಮಿಡಿದ ಕ್ರಿಕೆಟಿಗರು
ಬಾಲ ಯೇಸುವಿನ ಪ್ರತಿಮೆಯೊಂದಿಗೆ ಅಲಂಕಾರಕ್ಕೆ ಜೋಡಿಸಲ್ಪಟ್ಟಿದ್ದ ಗಾಜಿನ ಪದಾರ್ಥಗಳನ್ನು ಸಹ ಎಲ್ಲೆಂದರಲ್ಲಿ ಎಸೆದು ಹೋಗಿದ್ದಾರೆ. ಕಿಡಿಗೇಡಿಗಳು ಚಚ್‌ರ್ ನ ಹೊರಭಾಗದಲ್ಲಿ ನಿರ್ಮಿಸಲಾಗಿರುವ ಬಾಲ ಯೇಸುವಿನ ಪ್ರತಿಮೆ ಮುಂಭಾಗದಲ್ಲಿದ್ದ ಹೂ ಕುಂಡಗಳನ್ನು ಒಡೆದು ಹಾಕಿ ಸಮೀಪದಲ್ಲಿಯೇ ಇದ್ದ ಹಣದ 3 ಹುಂಡಿಯನ್ನು ಕದ್ದೊಯ್ದಿದ್ದಾರೆ, ಚಚ್‌ರ್‍ನ ಮತ್ತೊಂದು ಬದಿಯ ಬಾಗಿಲನ್ನು ತೆರೆಯಲು ಪ್ರಯತ್ನಿಸಿರುವ ದುಷ್ಕರ್ಮಿಗಳು ದೊಡ್ಡ ಇಟ್ಟಿಗೆಯಿಂದ ಬಾಗಿಲನ್ನು ಒಡೆಯುವ ಪ್ರಯತ್ನ ಮಾಡಿರುವುದು ಕಂಡು ಬಂದಿದೆ.
ಘಟನೆ ಸಂಭಂದ ಚಚ್‌ರ್ ಫಾರ್ದ ಜಾನ್ ಪೌಲ್ ಅವರು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಘಟನಾ ಸ್ಥಳಕ್ಕೆ ಇನ್ಸ್‌ಪೆಕ್ಟರ್ ಶ್ರೀಧರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಾರ್ಥನೆಗಾಗಿ ಚರ್ಚ್‌ಗೆ ಹೊರಟ ಯುವಕ ಮಸಣ ಸೇರಿದ: ಫುಟ್‌ಪಾತ್ ಗೋಡೆಗೆ ಬೈಕ್ ಗುದ್ದಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ