
ಬೀದರ್ (ಸೆ.5): ಬೀದರ್ ಜಿಲ್ಲೆಯ ಹುಮನಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಗಣಿತ ಶಿಕ್ಷಕ ರಯೀಸ್ ಎಂಬಾತನಿಂದ ಅತ್ಯಾ೧ಚಾರ ನಡೆದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹುಮನಾಬಾದ್ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಘಟನೆಯ ವಿವರ:
ಆರೋಪಿ ಶಿಕ್ಷಕ ರಯೀಸ್, ವಿದ್ಯಾರ್ಥಿನಿಯ ತಂದೆ ಕರೆ ಮಾಡಿದ್ದಾರೆಂದು ಕಾರಣ ಹೇಳಿ, ಇತರ ವಿದ್ಯಾರ್ಥಿಗಳನ್ನು ಶಾಲೆಯ ಆವರಣದಲ್ಲಿ ಆಡುತ್ತಿರುವ ಬಾಲಕಿಯನ್ನು ಕ್ಲಾಸ್ ರೂಮ್‌ನಲ್ಲಿ ಒಂಟಿಯಾಗಿ ಕರೆದಿದ್ದಾನೆ. ಬಳಿಕ ಆಕೆಗೆ ಲೈಂ೧ಗಿಕ ಕಿರುಕುಳ ನೀಡಿದ್ದು, ಸಹಕರಿಸದಿದ್ದರೆ ತಂದೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ, ಮೊಬೈಲ್ನಿಂದ ಬಾಲಕಿಯ ಬೆತ್ತಲೆ ಫೋಟೋ ಸೆರೆಹಿಡಿದ ಆರೋಪಿಯು, ಆ ಫೋಟೋಗಳನ್ನು ಇಟ್ಟುಕೊಂಡು ಪದೇ ಪದೇ ಬೆದರಿಸಿ, ಶಾಲೆಯ ಕ್ಲಾಸ್ ರೂಮ್‌ನಲ್ಲಿಯೇ ಅತ್ಯಾ೧ಚಾರ ಮಾಡಿದ್ದಾನೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ತಂದೆಯನ್ನ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಶಿಕ್ಷಕ. ಇದರಿಂದ ಬೆದರಿದ ಬಾಲಕಿಯು ಘಟನೆಯನ್ನು ಮುಚ್ಚಿಟ್ಟಿದ್ದಳು. ಆದರೆ, ಆಕೆ ಶಾಲೆಗೆ ಹೋಗಲು ನಿರಾಕರಿಸಿದಾಗ, ಈ ಬಗ್ಗೆ ಮಗಳನ್ನು ವಿಚಾರಿಸಿದಾಗ ಘಟನೆ ತಂದೆಯ ಗಮನಕ್ಕೆ ಬಂದಿದೆ. ಆಗಷ್ಟ 28, 2025ರಂದು ಬಾಲಕಿಯ ತಂದೆ ದೂರು ದಾಖಲಿಸಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಪೊಕ್ಸೊ ಪ್ರಕರಣ ದಾಖಲು: ಹುಮನಾಬಾದ್ ಪೊಲೀಸರು ಆರೋಪಿ ಶಿಕ್ಷಕ ರಯೀಸ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯಿಂದ ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಾಲೆಯ ಆಡಳಿತದ ವಿರುದ್ಧವೂ ಪ್ರಶ್ನೆಗಳು ಎದ್ದಿವೆ. ಬಾಲಕಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸೂಕ್ತ ಚಿಕಿತ್ಸೆ ಮತ್ತು ಬೆಂಬಲ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ