ನಟ ದುನಿಯಾ ವಿಜಯ್ ಅಭಿನಯದ 'ಭೀಮ' ಸಿನಿಮಾ ವೀಕ್ಷಣೆಗೆ ಊರ್ವಶಿ ಥಿಯೇಟರ್‌ಗೆ ಬಂದಿದ್ದು, ಶೌಚಗೃಹಕ್ಕೆ ಹೋದ ಯುವತಿಯ ವಿಡಿಯೋ ಸೆರೆಹಿಡಿದ ಘಟನೆ ನಡೆದಿದೆ.
ಬೆಂಗಳೂರು (ಆ.15): ನಗರದ ಊರ್ವಶಿ ಥಿಯೇಟರ್‌ನಲ್ಲಿ ಭೀಮ ಸಿನಿಮಾ ನೋಡಲು ಹೋದಾಗ ಕಾಮುಕನೊಬ್ಬ ಶೌಚಾಲಯದ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡುತ್ತಿದ್ದ ಪ್ರಸಂಗ ನಡೆದಿದೆ. ಈ ಕುರಿತು ಸಂತ್ರಸ್ತ ಯುವತಿ ಪೊಲೀಸ್ ಠಾಣೆಗ ದೂರು ನೀಡಿದ್ದಾಳೆ.
ಕನ್ನಡ ಚಿತ್ರರಂಗದಲ್ಲಿ ಸದರಿ ವರ್ಷದಲ್ಲಿ ಸಕ್ಸಸ್ ಸಿನಿಮಾಗಳೇ ಇಲ್ಲ ಎಂದು ಹೇಳಲಾಗುತ್ತಿದೆ. ಇಂಥದ್ದರಲ್ಲಿ ರಾಜ್ಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಭೀಮ ಸಿನಿಮಾ ವೀಕ್ಷಣೆಗೆ ಊರ್ವಶಿ ಥಿಯೇಟರ್‌ಗೆ ಹೋದ ಯುವತಿ, ಶೌಚಾಲಯಕ್ಕೆ ಹೋದಾಗ ಕಾಮುಕನೊಬ್ಬ ಕಿಟಕಿಯಲ್ಲಿ ಮೊಬೈಲ್ ಮೂಲಕ ವಿಡಿಯೋ ಮಾಡಲು ಮುಂದಾಗಿ ಕಾಟ ಕೊಟ್ಟಿರುವ ಪ್ರಸಂಗ ನಡೆದಿದೆ. ಇನ್ನು ಎಲ್ಲ ವರ್ಗದ ಜನರು ಮಾಲ್‌ಗಳಲ್ಲಿ, ಪಿವಿಆರ್‌ಗಳಲ್ಲಿ ನೋಡಲು ಸಾಧ್ಯವಿಲ್ಲವೆಂದು ಥಿಯೇಟರ್‌ಗೆ ಬಂದರೆ ಅಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲವೆಂದು 23 ವರ್ಷದ ಯುವತಿ ಅಳಲು ತೋಡಿಕೊಂಡಿದ್ದಾಳೆ.
ಬೆಂಗಳೂರು ನಜ್ಮಾ ಕೌಸರ್: ಮಿಸ್ಡ್ ಕಾಲ್ ಕೊಟ್ಟು ಪಟಾಯಿಸ್ತಾಳೆ, ಮಂಚಕ್ಕೆ ಕರೆದು ಹನಿಟ್ರ್ಯಾಪ್ ಮಾಡ್ತಾಳೆ
ಈ ಘಟನೆ ಆ.10ರಂದು ರಾತ್ರಿ 9.30ರ ವೇಳೆಗೆ ನಡೆದಿದೆ. ಊರ್ವಶಿ ಥಿಯೇಟರ್‌ಗೆ ಭೀಮ ಸಿನಿಮಾ ನೋಡಲು ಬಂದಿದ್ದ ಯುವತಿ ಇಂಟರ್‌ವೆಲ್‌ನಲ್ಲಿ ಮಹಿಳಾ ಶೌಚಾಲಯಕ್ಕೆ ಹೋಗಿದ್ದಾರೆ. ಆದರೆ, ಮಹಿಳಾ ಶೌಚಾಲಯದ ಕಿಟಕಿಯಲ್ಲಿ ಕಾಮುಕನೊಬ್ಬ ಮೊಬೈಲ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೇನು ಶೌಚಾಲಯ ಬಳಸಬೇಕು ಎನ್ನುವಾಗ ಒಂದು ಕೈ ಬೆರಳಿನ ನೆರಳು ಬಿದ್ದಿದೆ. ಎಲ್ಲಿಂದ ನೆರಳು ಬರುತ್ತಿದೆ ಎಂದು ಕಿಟಕಿ ಕಡೆಗೆ ನೋಡಿದರೆ ಅಲ್ಲಿ ಯಾರೋ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿರುವುದು ಕಂಡುವಬಂದಿದೆ.
ನಾನು ನಂದಿನಿ ಡೆಲ್ಲಿಗೆ ಹೊಂಟೀನಿ; ದೆಹಲಿ ಸರ್ಕಾರದಿಂದ 1 ಲಕ್ಷ ಲೀಟರ್ ನಂದಿನಿ ಹಾಲಿಗೆ ಡಿಮ್ಯಾಂಡ್!
ಕೂಡಲೇ ಶೌಚಗೃಹದಿಂದ ಹೊರಗೆ ಓಡಿಬಂದ ಯುವತಿ ಕೂಗಾಡುತ್ತಾ ಆತನನ್ನು ಹಿಡಿದುಕೊಳ್ಳಲು ಯತ್ನಿಸಿದ್ದಾಳೆ. ಅಷ್ಟರಲ್ಲಾಗಲೇ ವಿಡಿಯೋ ಮಾಡುತ್ತಿದ್ದ ಕಾಮುಕ ಅಲ್ಲಿಂದ ಓಡಿ ಹೋಗಿ ಪರಾರಿ ಆಗಿದ್ದಾನೆ. ಇನ್ನು ಕಾಮಾಕ್ಷಿಪಾಳ್ಯ ನಿವಾಸಿ ಆಗಿರುವ ಯುವತಿ ಸ್ಥಳೀಯ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಯುವತಿ ದೂರಿನನ್ವಯ ಪೊಲೀಸರು ಅಪ್ರಾಪ್ತ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.