ಡಿಜಿಟಲ್ ಇಂಡಿಯಾ ಕ್ರಾಂತಿಯಿಂದ ನಗದು ವ್ಯವಾಹರ ವಿರಳವಾಗಿದೆ. ಏನಿದ್ದರೂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲಾಗುತ್ತದೆ. 10 ರೂಪಾಯಿ ಆಗಿರಲಿ, ಲಕ್ಷ ರೂಪಾಯಿ ಆಗಿರಲಿ, ಕ್ಯೂಆರ್ ಕೋಡ್ ಬಳಕೆ ಹೆಚ್ಚು. ಆದರೆ ಇದೀಗ ಕ್ಯೂರ್ ಕೋಡ್ ಸ್ಕ್ಯಾನ್ ವೇಳೆ ಅತೀವ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಹೈಟೆಕ್ ಜಾಲವೊಂದು ಕ್ಯೂಆರ್ ಕೋಡ್ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು(ಡಿ.27) ಭಾರತದಲ್ಲೇ ಡಿಜಿಟಲ್ ಪಾವತಿ ಅತೀ ಸುಲಭವಾಗಿದೆ. 1 ರೂಪಾಯಿ ಖರೀದಿ ಇರಬಹುದು ಅಥವಾ ಲಕ್ಷ ರೂಪಾಯಿಯೇ ಇರಬಹುದು ಸುಲಭವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸುಲಭವಾಗಿ ಪಾವತಿಸಬಹುದು. ಡಿಜಿಟಲ್ ಪಾವತಿಯಿಂದ ದೇಶದಲ್ಲಿನ ಖೋಟಾ ನೋಟು ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳಿಗೆ ಬ್ರೇಕ್ ಬಿದ್ದಿದೆ. ಆದರೆ ಡಿಜಿಟಲ್ ಪಾವತಿಯಿಂದ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದೆ. ಕಳ್ಳರು ಹೈಟೆಕ್ ತಂತ್ರಜ್ಞಾನ ಬಳಸಿ ಖಾತೆಯಿಂದ ದುಡ್ಡು ಎಗರಿಸುತ್ತಿರುವುದು ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನಲ್ಲಿ ಕ್ಯೂಆರ್ ಕೋಡ್ ವಂಚನೆಯೊಂದು ಬಯಲಾಗಿದೆ. ಸ್ಕ್ಯಾನ್ ಮಾಡಿದ ಮರುಕ್ಷಣದಲ್ಲೇ ನಿಮ್ಮ ಖಾತೆಯಿಂದ ಹಣ ಎಗರಿಸುವ ಜಾಲವೊಂದು ಪತ್ತೆಯಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಪ್ರೊಫೆಸರ್ ಈ ವಂಚನೆ ಜಾಲಕ್ಕೆ ಸಿಲುಕಿ 63,000 ರೂಪಾಯಿ ಕಳೆದುಕೊಂಡಿದ್ದಾರೆ. ಪ್ರೊಫೆಸರ್ ತಮ್ಮ ವಾಷಿಂಗ್ ಮಶಿನ್ ಮಾರಾಟ ಮಾಡಲು ಮುಂದಾಗಿದ್ದಾರೆ. ಆನ್‌ಲೈನ್ ಮೂಲಕ ಮಾರಾಟಕ್ಕಿಟ್ಟಿದ್ದಾರೆ. ವಾಶಿಂಗ್ ಮಶಿನ್ ಖರೀದಿಸುವುದಾಗಿ ವ್ಯಕ್ತಿಯೊಬ್ಬರು ಸಂದೇಶ ಕಳುಹಿಸಿದ್ದಾರೆ.ಉತ್ಪನ್ನ ಖರೀದಿಸುವ ವ್ಯಕ್ತಿಗೆ ಮಾರಾಟ ಮಾಡುವ ವ್ಯಕ್ತಿ ಕ್ಯೂಆರ್ ಕೋಡ್ ಕಳುಹಿಸುತ್ತಾರೆ. ಈ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡುತ್ತಾರೆ.
undefined
ಹೊಸ ವರ್ಷಕ್ಕೆ ಟ್ರಿಪ್ ಹೊರಟವರಿಗೆ ಪೊಲೀಸ್ ಎಚ್ಚರ, ಕೆಮಿಕಲ್‌ನಿಂದ ಕಾರಿನ ಗಾಜು ಒಡೆದು ಕಳ್ಳತನ!
ಆದರೆ ಇಲ್ಲಿ ಖರೀದಿಸಲು ಇಚ್ಚಿಸಿದ ವ್ಯಕ್ತಿ ಕ್ಯೂಆರ್ ಕೋಡ್‌ನ್ನು ಪ್ರೊಫೆಸರ್‌ಗೆ ಕಳುಹಿಸಿದ್ದಾನೆ. ಬಳಿಕ ಈ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಖಾತೆಗೆ ನೇರವಾಗಿ ಹಣ ಜಮೆ ಆಗಲಿದೆ ಎಂದಿದ್ದಾನೆ. ಇತ್ತ ಪ್ರೊಫೆಸರ್ ಯಪಿಐ ಪೇಮೆಂಟ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ದಾರೆ. ಈ ಕೋಡ್ ಸ್ಕ್ಯಾನ್ ಆದ ಬೆನ್ನಲ್ಲೇ ಬ್ರೌಸಿಂಗ್ ಸಮಯ ತೆಗೆದುಕೊಂಡಿದೆ. ಕೆಲ ನಿಮಿಷಗಳ ಕಾಲ ಬ್ರೌಸಿಂಗ್ ಆಗುತ್ತಲೇ ಇತ್ತು. ಇದರ ನಡುವೆ ಎರಡು ಸಂದೇಶ ಬಂದಿದೆ.
ಆದರೆ ಪ್ರೊಫೆಸರ್ ಕ್ಯೂಆರ್ ಕೋಡ್ ಸಂಪೂರ್ಣವಾದ ಬಳಿಕ ಸಂದೇಶ ನೋಡಲು ನಿರ್ಧರಿಸಿದ್ದಾರೆ. ಆದರೆ ಕೆಲ ಹೊತ್ತಾದರೂ ಕ್ಯೂಆರ್ ಕೋಡ್ ಸ್ಕ್ಯಾನ್ ಪೂರ್ಣಗೊಂಡಿಲ್ಲ. ಹೀಗಾಗಿ ಬ್ಯಾಕ್ ಬಟನ್ ಪ್ರೆಸ್ ಮಾಡಿ ಮತ್ತೊಮ್ಮೆ ಸ್ಕ್ಯಾನ್ ಮಾಡಲು ಮುಂದಾಗಿದ್ದಾರೆ. ಇದರ ನಡುವೆ ಪ್ರೊಫೆಸರ್‌ಗೆ ಅಚ್ಚರಿಯಾಗಿದೆ. ಕಾರಣ ಖಾತೆಯಲ್ಲಿದ್ದ 63,000 ರೂಪಾಯಿ ಖಾಲಿ ಅನ್ನೋ ಸಂದೇಶ ಬಂದಿದೆ.
ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೊದಲು ಸೋರ್ಸ್ ಆಫ್ ಕೋಡ್ ಪರೀಶಿಲನೆ ಮಾಡಿಕೊಳ್ಳಿ. ಈ ಕೋಡ್ ವೆರಿಫೈಡ್ ಖಾತೆ ಅನ್ನೋದು ಖಚಿತಪಡಿಸಿಕೊಂಡು ಪಾವತಿ ಮಾಡಿ. ಫಿಶಿಂಗ್ ಅಥವಾ ನಕಲಿ ಕ್ಯೂರ್ ಆರ್ ಕೋಡ್ ಬೇರೆ ಸೈಟ್‌ಗೆ ಅಥವಾ ಇತರ ಸ್ಕ್ಯಾನಿಂಗ್ ಟ್ಯಾಬ್ ಒಪನ್ ಮಾಡಲಿದೆ. ಹೀಗಾಗಿ ಹಣ ಕಳೆದುಕೊಳ್ಳುವ ಮೊದಲೇ ಎಚ್ಚೆತ್ತುಕೊಳ್ಳಿ.
ಮಂಗಳೂರು: ಹಣ ದ್ವಿಗುಣಗೊಳಿಸುವ ಆ್ಯಪ್‌ನಿಂದ 21 ಲಕ್ಷ ರೂ. ಕಳೆದುಕೊಂಡ ಮಹಿಳೆ ಆತ್ಮಹತ್ಯೆಗೆ ಶರಣು!
ಸ್ಕ್ಯಾನ್ ಮಾಡಿ 10 ರೂಪಾಯಿ ಅಥವಾ ನಿಗದಿತ ರೂಪಾಯಿ ಪಾವತಿಸಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಿ, ಲಕ್ಷ ರೂಪಾಯಿ ಬಹುಮಾನ ಗೆಲ್ಲಿ ಅನ್ನೋ ರೀತಿಯ ಹಲವು ವಂಚನೆಗಳು ನಡೆಯುತ್ತಲೇ ಇದೆ. ಹೀಗಾಗಿ ಅನಗತ್ಯ ಸ್ಕ್ಯಾನ್ ಮಾಡುವುದು ಉಚಿತವಲ್ಲ, ನಿಮ್ಮ ಅಗತ್ಯದ ಪಾವತಿಯನ್ನು ಮಾತ್ರ ಮಾಡಿದರೆ ವಂಚನೆಯಿಂದ ದೂರ ಇರಬಹುದು.