QR Code Scam: ಸೈನಿಕರ ಹೆಸರಲ್ಲಿ ವಿಜಯಪುರ ವ್ಯಾಪಾರಿಗಳಿಗೆ ವಂಚನೆ ಜಾಲ.. ಹುಷಾರ್!

Published : Mar 31, 2022, 06:36 PM ISTUpdated : Mar 31, 2022, 06:38 PM IST
QR Code Scam: ಸೈನಿಕರ ಹೆಸರಲ್ಲಿ ವಿಜಯಪುರ ವ್ಯಾಪಾರಿಗಳಿಗೆ ವಂಚನೆ ಜಾಲ.. ಹುಷಾರ್!

ಸಾರಾಂಶ

⦁ ವ್ಯಾಪಾರಸ್ಥರೇ ಎಚ್ಚರ.. ಎಚ್ಚರ.. ಕಟ್ಟೆಚ್ಚರ..‌! ⦁ ಸೈನ್ಯದ ಹೆಸ್ರಲ್ಲಿ  ವಂಚನೆಗೆ ನಡೆಯುತ್ತಿದೆ ಸಂಚು..! ⦁ ಟ್ರೆಡರ್ಸ್‌ ಕಂಪನಿ, ದೊಡ್ಡ ವ್ಯಾಪಾರಸ್ಥರೆ ಇವ್ರ ಟಾರ್ಗೆಟ್..! ⦁ ಖರೀದಿ ನಡೆಸೋ ನೆಪದಲ್ಲಿ ಹಾಕ್ತಾರೆ ಮಕ್ಮಲ್‌ ಟೋಪಿ..! ⦁ QR ಕೋಡ್‌ ಸ್ಕ್ಯಾನ್‌ ಮಾಡಿದ್ರೆ ನಿಮ್ಮ ಅಕೌಂಟೆ ಖಾಲಿಯಾಗುತ್ತೆ ಹುಷಾರ್..!  

* ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ (ಮಾ. 31)  ಟೆಕ್ನಾಲಜಿ ಬೆಳೆದಂತೆಲ್ಲ ಜಮಾನಾ ಸ್ಪೀಡ್‌ ಆಗಿ ಸಾಗ್ತಿದೆ. ಪೋನ್‌ ಪೇ (PhonePay), ಗೂಗಲ್‌ ಪೇ (GoolePay) ಸೇರಿದಂತೆ ಆನ್‌ ಲೈನ್‌ (Online) ವ್ಯವಹಾರಗಳಿಂದ ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲ ಕೂಡ ಆಗಿದೆ. ಆದ್ರೆ ಇದೆ ಟೆಕ್ನಾಲಾಜಿ ಬಳಸಿಕೊಂಡು ಖದೀಮರು ಈಗ ವ್ಯಾಪಾರಸ್ಥರಿಗೆ ಉಂಡೆನಾಮ ತಿಕ್ಕುತ್ತಿದ್ದಾರೆ. ದೊಡ್ಡ ದೊಡ್ಡ ಟ್ರೇಡರ್ಸ್‌, ಹೋಲ್‌ ಸೇಲ್‌ ವ್ಯಾಪಾರಿಗಳನ್ನ (Wholesale Merchant) ಟಾರ್ಗೆಟ್‌ ಮಾಡಿರೋ ಈ ಖತರ್ನಾಕ್‌ ಖದೀಮರು ಸೈನಿಕರ (Soldier) ಹೆಸ್ರಲ್ಲಿ ವಂಚಿಸೋಕೆ ಶುರು ಮಾಡಿದ್ದಾರೆ. ಇವ್ರ ವಂಚನೆಯ ಜಾಲದ ಬಗ್ಗೆ ಅರಿತರೇ ನೀವು ಕೂಡ ಶಾಕ್‌ ಆಗ್ತೀರಿ..!

ವಿಜಯಪುರದಲ್ಲಿ ಸೈನಿಕರ ಹೆಸ್ರಲ್ಲಿ ವಂಚನೆಗೆ ಸ್ಕೇಚ್..! ಟೆಕ್ನಾಲಜಿ ಅಭಿವೃದ್ಧಿಯಾದಂತೆ ವ್ಯವಹಾರಕ್ಕೆ ಅದೇಷ್ಟು ಅನುಕೂಲವಾಗಿದೆಯೋ, ಅಷ್ಟೇ ಅನಾನುಕೂಲ ಹಾಗೂ ಡೆಂಜುರಸ್‌ ಕೂಡ ಆಗಿದೆ. ಕೊಂಚ ಮೈ ಮರೆತರೇ ಸಾಕು ಕಣ್ಮುಚ್ಚಿ ಕಣ್ಣು ಬಿಡೋದ್ರಲ್ಲಿ ಖದೀಮರು ಹಣ ದೋಚಿ ಬೀಡ್ತಾರೆ. ಈ ವರೆಗೆ ಗಣ್ಯ ವ್ಯಕ್ತಿಗಳ ನಕಲಿ ಫೇಸ್ಬುಕ್‌ (Fake Facebook Account) ತೆರೆದು ಹಣಕ್ಕೆ ಬೇಡಿಕೆ ಇಟ್ಟು ಯಾಮಾರಿಸುತ್ತಿದ್ದ ಕ್ರಿಮಿನಲ್ಸ್‌ ಗಳು (Criminal) ಈಗ ಹೊಸ ಆಟ ಹೂಡಿದ್ದಾರೆ. ವಂಚನೆಗೆಂದೆ ಸೈನಿಕರ ಹೆಸ್ರನ್ನ ಬಳಿಸಿಕೊಳ್ತಿದ್ದಾರೆ. ಭಾರತೀಯ ಸೈನಿಕರು ಅಂದ್ರೆ ಜನರಲ್ಲಿ ಒಂದು ಅಪ್ಪಟ ನಂಬಿಕೆ (Faith) , ಅಚಲ ವಿಶ್ವಾಸವಿದೆ. ಇದನ್ನೆ ದುರುಪಯೋಗ ಮಾಡಿಕೊಂಡು ಹಣ ಮಾಡೋಕೆ ಮುಂದಾಗಿದ್ದಾರೆ ಖದೀಮರು..

ಹೋಲ್‌ಸೇಲ್‌ ವ್ಯಾಪಾರಸ್ಥರು, ದೊಡ್ಡ ಟ್ರೆಡರ್ಸ್‌ಗಳೇ ಇವ್ರ ಟಾರ್ಗೆಟ್..!  ಯಸ್‌, ಹಣ ಮಾಡೋಕೆ ಸೈನಿಕರ ಹೆಸ್ರು ಬಳಿಸಿಕೊಳ್ಳುವ ನಯವಂಚಕರು ಹೋಲ್ ಸೇಲ್‌ ವ್ಯಾಪಾರಿಗಳನ್ನ, ದೊಡ್ಡ ಟ್ರೆಡರ್ಸ್‌ ಕಂಪನಿಗಳನ್ನ ಟಾರ್ಗೆಟ್‌ (Target) ಮಾಡಿಕೊಂಡಿದ್ದಾರೆ. ಯಾಕಂದ್ರೆ ಇಂಥ ಹೊಲ್‌ ಸೇಲ್‌ ವ್ಯಾಪಾರಿಗಳು, ಟ್ರೆಡರ್ಸ್‌ ಮಾಲಿಕರ ಅಕೌಂಟ್‌ ನಲ್ಲಿ ಲಕ್ಷಾಂತರ ರು. ಇದ್ದೆ ಇರುತ್ತೆ. ಈ ಹಣವನ್ನ (Money) ಸಲೀಸಾಗಿ ಹೊಡೆದು ಬಿಡೋಕೆ ಖದೀಮರು ಸ್ಕೆಚ್‌ ಹಾಕಿದ್ದಾರೆ. ವ್ಯಾಪಾರಸ್ಥರನ್ನ, ಟ್ರಡರ್ಸ್‌ ಕಂಪನಿಗಳ ಮಾಲಿಕರ ಸಂಪರ್ಕಿಸಿ ತಾವು ಸೈನಿಕರು ತಮಗೆ ಹೋಲ್‌ ಸೇಲ್‌ ದರದಲ್ಲಿ ಸಾಮಾನುಗಳು ಬೇಕು.. ಹಣವನ್ನ ಪೋನ್‌ ಪೇ (PhonePay) ಮೂಲಕ ಫೇ ಮಾಡ್ತೀವಿ ಎಂದು ಹೇಳಿ ವಂಚನೆ ಮಾಡ್ತಿದ್ದಾರೆ..!

ಶ್ರೀನಂದಿ ಟ್ರೇಡರ್ಸ್‌ ಮಾಲಿಕನಿಗು ವಂಚನೆಗೆ ಯತ್ನ..!: ವಿಜಯಪುರ ನಗರದ ಶಾಪೇಟೆಯಲ್ಲಿರೋ ಶ್ರೀನಂದಿ ಟ್ರೇಡರ್ಸ್‌ (Shri Nandi Traders Vijayapur) ಮಾಲಿಕ ಶಶಿ ಮೆಳ್ಳಿ ವಂಚನೆಗೆ ಯತ್ನ ನಡೆದಿದೆ. ನಿನ್ನೆ ವಿಜಯಪುರ ಸೈನಿಕ ಶಾಲೆಯ (Sainik School) ಸೈನಿಕ ಅನಿಲ್‌ ಕುಮಾರ್ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬ 7200 ರು ಮೌಲ್ಯದ ಕೇರಳ ಕೊಬ್ಬರಿ ಎಣ್ಣೆ (Coconut Oil) ಬೇಕು ಎಂದಿದ್ದಾನೆ. ಎಣ್ಣೆಯನ್ನ ಅಥಣಿ ರಸ್ತೆಯ (Athani Road vijayapur) ಸೈನಿಕ ಶಾಲೆ ಎದುರು ತರೋಕೆ ಹೇಳಿದ್ದಾನೆ. ಜೊತೆಗೆ ಪೋನ್‌ ಮೂಲಕ ಹಣ ಹಾಕ್ತಿವಿ ನಡೆಯುತ್ತಾ ಎಂದಿದ್ದಾರೆ. ಶಶಿ ಓಕೆ ಎಂದಾಗ ವಾಟ್ಸಾಪ್‌ ಗೆ ARMY CHECK 1 ಹೆಸ್ರಲ್ಲಿರೋ ಒಂದು QR CODE ಕಳಿಸಿದ್ದಾರೆ. ಇದನ್ನ ಸ್ಕ್ಯಾನ್‌ (Scan) ಮಾಡಿ 1 Rupee ಕಳುಹಿಸಿ, ಅದೆ ಅಕೌಂಟ್‌ ಗೆ 7200 ರು, ಹಾಕ್ತೀವಿ ಎಂದಿದ್ದಾರೆ. ಆದ್ರೆ ಶಶಿ ಇದಕ್ಕೆ ಒಪ್ಪಿಲ್ಲ. ನೀವೆಲ್ಲಿದ್ದೀರಿ ಹೇಳಿ ಅಲ್ಲೆ ಬಂದು ಕೊಬ್ಬರಿ ಎಣ್ಣೆ ತಲುಪಿಸ್ತೀನಿ ಎಂದಿದ್ದಾನೆ. ಜೊತೆಗೆ ಸೈನಿಕ ಶಾಲೆ ಹತ್ತಿರವಿದ್ದ ಸೈನಿಕ ಶಾಲೆಯ ಸಿಬ್ಬಂದಿ ಬಳಿ ಅನಿಲ್‌ ಕುಮಾರ್‌ ಹೆಸ್ರಿನ ಸೈನಿಕ ಇದ್ದಾರಾ ವಿಚಾರಿಸಿದಾಗ ಆ ರೀತಿ ಯಾರು ಇಲ್ಲ, ಕೊಬ್ಬರಿ ಎಣ್ಣೆಯನ್ನು ಹೇಳಿಲ್ಲ ಎಂದಾಗ ಸಲಿಯತ್ತು ಬಯಲಾಗಿದೆ..!#

Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!

QR ಕೋಡ್‌ ಸ್ಕ್ಯಾನ್‌ ಮಾಡಿದ್ರೆ ನಿಮ್ಮ ಅಕೌಂಟೆ ಖಾಲಿ..!: ಇನ್ನು ನಿಮ್ಮ ಬಳಿ ಇರುವ ಹಣವನ್ನ ಸಲೀಸಾಗಿ ಅಬೇಸ್‌ ಮಾಡೊಕೆ ಖದೀಮರು ಪೋನ್‌ ಪೇ, ಗೂಗಲ್‌ ಪೇ ಗಳನ್ನ ಬಳಸಿಕೊಳ್ತಿದ್ದಾರೆ. ಅಂಗಡಿ ಮಾಲಿಕರಿಗೆ (Shop Owner) ನಿಮ್ಮ ಪೋನ್‌ ಪೇ ಗೆ ಹಣ ಹಾಕ್ತೀವಿ ಅದಕ್ಕು ಮೊದಲು ಕನ್ಪರ್ಮೆಶನ್‌ ಗಾಗಿ ಒಂದು ರೂಪಾಯಿ ನೀವೆ ನಮಗೆ ಹಾಕಿ ಎಂದು QR ಕೋಡ್‌ ಕಳಿಸ್ತಾರೆ.  ಖದೀಮರು ಕಳುಹಿಸುವ QR ಕೋಡ್‌ ಸ್ಕ್ಯಾನ್‌ ಮಾಡಿ, ಜಸ್ಟ್‌ ಒಂದು ರೂಪಾಯಿ ಹಾಕಿದ್ರು ಸಾಕು ನಿಮ್ಮ ಅಕೌಂಟಲ್ಲಿರೋ ಹಣವೆಲ್ಲ ಖಾಲಿಯಾಗುತ್ತೆ.. ಅದ್ರಲ್ಲು QR ಕೋಡ್‌ ಮೇಲೆ ARMY CHECK 1 ಅಂತ ಇರೋದ್ರಿಂದ ಸೈನಿಕದೆ ಈ QR ಕೋಡ್‌ ಇರಬೇಕು ಅಂತಾ ವ್ಯಾಪಾರಸ್ಥರು ಯಾಮಾರ್ತಿದ್ದಾರೆ.. ವಿಜಯಪುರ ನಗರದ ಹಲವು ವ್ಯಾಪಾರಿಗಳನ್ನ ವಂಚಿಸೋಕೆ ಯತ್ನ ನಡೆದಿವೆ..

ವಂಚನೆಯಿಂದ ತಪ್ಪಿಸಿಕೊಳ್ಳಲು ಏನ್‌ ಮಾಡಬೇಕು..!?: ಹಣ ಮಾಡೋಕೆ ಟೆಕ್ನಾಲಜಿಯನ್ನ (Technology) ಮನಬಂದಂತೆ ಬಳಸಿಕೊಳ್ತಿರೋ ಕ್ರಿಮಿನಲ್ಸ್‌ ಗಳು (Criminal) ಏನು ಅರಿಯದ ಜನರಿಗೆ ಮೋಸ (Cheating) ಮಾಡ್ತಿದ್ದಾರೆ. ಸೈನಿಕರ ಹೆಸ್ರಲ್ಲಿ ವಂಚನೆಗೆ ಯತ್ನಿಸುತ್ತಿದ್ದಾರೆ. ಬಹುತೇಕ ವ್ಯಾಪಾರಸ್ಥರು ವ್ಯವಹಾರಗಳ ಅನುಕೂಲಕ್ಕಾಗಿ ಆನ್‌ ಲೈನ್‌ ಮನಿಟ್ರಾನ್ಸಪರ್‌ (Online Money Transfer) ಆಫ್‌ ಗಳಾದ ಪೋನ್‌ ಪೇ, ಪೇಟಿಯಂ (Paytm) ಗೂಗಲ್‌, ಅಮೇಜಾನ್‌ ಫೇ (Amazon Pay) ಗಳನ್ನ ಬಳಕೆ ಮಾಡ್ತಿದ್ದಾರೆ.  ಹೀಗಾಗಿ ಎಲ್ಲ ವ್ಯಾಪಾರಸ್ಥರು ಎಚ್ಚೆತ್ತುಕೊಳ್ಳಬೇಕಿದೆ. ಯಾರೇ ಪೋನ್‌ ಮೂಲಕ ಖರೀದಿ (Purchase) ಮಾಡಿದ್ರು ಹಣ ಹಾಕಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ಆದ್ರೆ ಅನಗತ್ಯವಾಗಿ ಕ್ಯೂ ಆರ್‌ ಕೋಡ ಕಳಿಸಿ ನಿಮ್ಮಿಂದಲೇ 1 ರು, 5 ರು, ಕೇಳಿದ್ರೆ ಯಾವುದೇ ಕಾರಣಕ್ಕು ಹಾಕಬೇಡಿ.. OTP ಗಳನ್ನ ಶೇರ್‌ ಮಾಡಬೇಡಿ.. ಅವರ ವ್ಯವಹಾರ ಸ್ವಲ್ಪ ಅನುಮಾನ ರೀತಿಯಲ್ಲು ಕಂಡರು ಸ್ಥಳೀಯ ಪೊಲೀಸರ (Police) ಗಮನಕ್ಕೆ ತನ್ನಿ. ಆದಷ್ಟು ಯಾರ ಜೊತೆಗೆ ವ್ಯವಹಾರ ಮಾಡಿದ್ರು ಎದುರು-ಬದುರು ವ್ಯವಹಾರ ಮಾಡೋದು ಉತ್ತಮ..! 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!