
ಮುಂಬೈ(ಜ. 19) ಕಿರಾತಕರು ಯಾವ ಯಾವ ಆಧಾರದಲ್ಲಿ ಹಣ ಮಾಡುತ್ತಾರೆಯೋ ಗೊತ್ತಿಲ್ಲ. ಪ್ರೇಮಿಗಳ ದಿನವನ್ನು ಅವರ ಬಂಡವಾಳ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಾಲೈಂಟೈನ್ಸ್ ಡೇ ದಿನ ಪ್ರೇಮಿಗಳಿಗೆ ಉಚಿತ ಆತಿಥ್ಯ ನೀಡುತ್ತೇವೆ ಎಂದು ಹೋಟೆಲ್ ತಾಜ್ ಘೋಷಣೆ ಮಾಡಿದೆ! ಇದು ಸುಳ್ಳು ಸುದ್ದಿ ಎಂಬುದು ಗೊತ್ತಾಗಲು ಜಾಸ್ತಿ ಸಮಯ ಬೇಕಾಗಲಿಲ್ಲ.
ಮುಂಬೈ; ನಟಿ ಬಾತ್ ರೂಂಗೆ ನುಗ್ಗಿ ಆಕೆ ಎದುರೆ ಹಸ್ತಮೈಥುನ ಮಾಡಿಕೊಂಡ!
ತಾಜ್ ನಲ್ಲಿ ನನಗೆ ಏಳು ದಿನಗಳ ಉಚಿತ ಆತಿಥ್ಯ ಸಿಕ್ಕಿದೆ ಎಂಬ ಮೆಸೇಜ್ ಕ್ಷಣ ಮಾತ್ರದಲ್ಲಿ ವೈರಲ್ ಆಗಿದ್ದು ಹೋಟೆಲ್ ತಾಜ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ನನಗೆ ಆಫರ್ ಸಿಕ್ಕಿದೆ ಎಂಬ ಸಂದೇಶದ ಜತೆ ಲಿಂಕ್ ಒಂದು ಅಡಗಿ ಕುಳಿತುಕೊಂಡಿತ್ತು. ಹೆಚ್ಚಿನ ಮಾಹಿತಿ ಎಂದು ಕ್ಲಿಕ್ ಮಾಡಿದರೆ ಅವರ ಡೇಟಾ ಕದಿಯುವ ಉದ್ದೇಶ ಕಿರಾತಕರದ್ದಾಗಿತ್ತು ಎಂದು ಮುಂಬೈ ಸೈಬರ್ ಪೊಲೀಸರು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿದ್ದಾರೆ.
ದೀಪಾವಳಿ ಸಂದರ್ಭದಲ್ಲಿಯೂ ಇದೇ ತೆರನಾದ ಪೇಕ್ ಲಿಂಕ್ ಗಳನ್ನು ಹರಿಯಬಿಡಲಾಗಿತ್ತು. ಆಫರ್ ಆಸೆಗೆ ನಂಬಿ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಡೇಟಾಗಳು ಕಿತಾರಕರ ಪಾಲಾಗುವುದು ಖಚಿತ ಎಚ್ಚರ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ