
ಬೆಂಗಳೂರು (ಮಾ.4): ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಜೀವನ ಸಂಗಾತಿ ಹುಡುಕುವವರೇ ಎಚ್ಚರ. ಸೈಬರ್ ವಂಚಕರು ವಧು-ವರರ ಸೋಗಿನಲ್ಲಿ ವಂಚನೆಗೆ ಇಳಿದಿದ್ದಾರೆ!
ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಬಾಳ ಸಂಗಾತಿಗಾಗಿ ಹುಡುಕುತ್ತಿದ್ದ ಕೆಪಿಟಿಸಿಎಲ್ ಇಂಜಿನಿಯರೊಬ್ಬರಿಗೆ ಪರಿಚಿತಳಾಗಿದ್ದ ಮಹಿಳೆ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಹೇಳಿಕೊಡುವುದಾಗಿ ಹೂಡಿಕೆ ನೆಪದಲ್ಲಿ ₹5 ಲಕ್ಷ ಪಡೆದು ಟೋಪಿ ಹಾಕಿದ್ದಾಳೆ. ಹಣ ಕಳೆದುಕೊಂಡ ಎಂಜಿನಿಯರ್ ತಮಗಾದ ವಂಚನೆ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಎಂಜಿನಿಯರ್ ಕಿರಣ್ (ಹೆಸರು ಬದಲಿಸಲಾಗಿದೆ) 3 ವರ್ಷದ ಹಿಂದೆ ಸಮುದಾಯವೊಂದರ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನೋಂದಣಿಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ಅಪರಿಚಿತ ಮಹಿಳೆಯಿಂದ ಮದುವೆ ಪ್ರಸ್ತಾವನೆ ಬಂದಿದೆ. ಡಿಸೆಂಬರ್‌ನಲ್ಲಿ ಕಿರಣ್ ಆ ಪ್ರಸ್ತಾವನೆ ಸ್ವೀಕರಿಸಿದ್ದಾರೆ. ಬಳಿಕ ಇಬ್ಬರ ಮೊಬೈಲ್ ಸಂಖ್ಯೆಗಳು ವಿನಿಮಯವಾಗಿದ್ದು, ಮಾತುಕತೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಸಿಬಿಐ ಅಧಿಕಾರಿ ಸೋಗಿನಲ್ಲಿ ವಂಚನೆ: ವೃದ್ಧೆಗೆ ಕರೆ ಮಾಡಿ ₹42.85 ಲಕ್ಷ ಪಂಗನಾಮ! ನಿಮಗೂ ಇಂಥ ಕಾಲ್ ಬರಬಹುದು ಎಚ್ಚರ!
ಹೂಡಿಕೆ ನೆಪದಲ್ಲಿ ಉಂಡೇನಾಮ!
ಈ ವೇಳೆ ಆ ಮಹಿಳೆ ತಾನು ಯುಕೆ ಬೆಲ್ಟ್ ಫಾಸ್ಟ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಫೆಬ್ರವರಿಯಲ್ಲಿ ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾಳೆ.ಬಳಿಕ ಇಬ್ಬರು 1 ತಿಂಗಳ ಕಾಲ ವಾಟ್ಸಾಪ್ ಚಾಟಿಂಗ್‌ನಲ್ಲಿ ತೊಡಗಿದ್ದು, ಆಕೆ ಷೇರು ಮಾರುಕಟ್ಟೆ ವ್ಯವಹಾರದ ಬಗ್ಗೆ ಹೇಳಿಕೊಡುತ್ತೇನೆ ಎಂದಿದ್ದಾಳೆ. ಇದಕ್ಕೆ ಕಿರಣ್ ಒಪ್ಪಿಗೆ ಸೂಚಿಸಿದ್ದಾರೆ. ಹೂಡಿಕೆ ನೆಪದಲ್ಲಿ ಕಿರಣ್‌ನಿಂದ ವಿವಿಧ ಹಂತಗಳಲ್ಲಿ ₹5 ಲಕ್ಷ ಪಡೆದಿದ್ದಾಳೆ.
ಇದನ್ನೂ ಓದಿ: ಮೂರು ಪಟ್ಟು ಹೆಚ್ಚು ಹಣದ ಆಮಿಷ: ಇಬ್ಬರು ಮಹಿಳೆಯರಿಂದ ಬರೋಬ್ಬರಿ 246 ಜನರಿಗೆ ಮೋಸ!
ಬಳಿಕ ಏಕಾಏಕಿ ಸಂಪರ್ಕ ಕಡಿದುಕೊಂಡಿದ್ದಾಳೆ. ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗಾಗಿ ಕಿರಣ್ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.
ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ