ಕಾಲೇಜು ಯುವತಿ ನಗ್ನ ಫೋಟೊ ತೋರಿಸಿ ಬ್ಲಾಕ್-ಮೇಲ್ ಮಾಡ್ತಿದ್ದ ಆಸಾಮಿಗಳು/ ಬೆಂಗಳೂರಿನ ಅಮೃತಹಳ್ಳಿಯಲ್ಲಿ ಘಟನೆ/ ಪಿಯುಸಿ ಕಾಲೇಜು ಯುವತಿಗೆ ಬ್ಲಾಕ್‌ಮೇಲ್ ಸಂತ್ರಸ್ತೆಯ ಕ್ಲಾಸ್ ಮೇಟ್ ಗಳಿಂದಲೇ ನೀಚ ಕೆಲಸ
ಬೆಂಗಳೂರು( ಜ. 20) ಕಾಲೇಜು ಯುವತಿಗೆ ನಗ್ನ ಫೋಟೊ ತೋರಿಸಿ ಬ್ಲಾಕ್-ಮೇಲ್ ಮಾಡ್ತಿದ್ದ ಆಸಾಮಿಗಳ ಪತ್ತೆಗೆ ಬಲೆ ಬೀಸಲಾಗಿದ. ಬೆಂಗಳೂರಿನ ಅಮೃತಹಳ್ಳಿಯ ಪ್ರಕರಣ ಬೆಳಕಿಗೆ ಬಂದಿದೆ.
19 ವರ್ಷದ ಪಿಯುಸಿ ಯುವತಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದರು ಸಂತ್ರಸ್ತೆಯ ಕ್ಲಾಸ್ ಮೇಟ್ ಗಳೆ ಈ ನೀಚ ಕೆಲಸ ಮಾಡುತ್ತಿದ್ದವರು.
ರಾಜನಿಗೆ ಕಳಿಸಬೇಕಾದ ಪ್ರೇಯಸಿಯ ನ್ಯೂಡ್ ಪೋಟೋಗಳು ಲೀಕ್
ಖಾಸಗಿ ಹಾಗೂ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕೋದಾಗಿ ಬೆದರಿಕೆ ಹಾಕುತ್ತಿದ್ದರು. ಬೆದರಿದ ಯುವತಿ ಆಗ 218 ಗ್ರಾಂ ಚಿನ್ನಾಭರಣ,ಸಂಬಂಧಿಯೊಬ್ಬರ ಮಾಂಗಲ್ಯ ಸರ ಹಾಗೂ 75 ಸಾವಿರ ಹಣ ನೀಡಿದ್ದಳು. ಇದಾದ ಬಳಿಕವೂ ಮತ್ತೆ ಹಣ,ಚಿನ್ನಾಭರಣಕ್ಕೆ ಆರೋಪಿಗಳು ಬೇಡಿಕೆ ಇಟ್ಟಿದ್ದಾರೆ.
ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.