ಹೆಣ್ಮಕ್ಕಳು ಜೆರಾಕ್ಸ್‌ ತೋರ್ಸಿದ್ರೆ ಸುಮ್ನಿರ್ತಿಯಾ, ನಂಗ್ಯಾಕೆ ರೇಗಾಡ್ತೀಯಾ? ಬಸ್‌ ಪಾಸ್‌ ವಿಚಾರಕ್ಕೆ ಪೊಲೀಸ್ ಮೇಲೆ ಹಲ್ಲೆ

By Sathish Kumar KH  |  First Published Jun 14, 2023, 3:10 PM IST

ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಬಸ್‌ ಪಾಸ್‌ ತೋರಿಸುವ ವಿಚಾರದಲ್ಲಿ ಗೊಂದಲ ಮಾಡಿಕೊಂಡು ಪೊಲೀಸ್‌ ಠಾಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್‌ ಮೇಲೆ ಹಲ್ಲೆ ಮಾಡಿದ್ದಾನೆ. 


ಬೆಂಗಳೂರು (ಜೂ.14): ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಯುವಕ ಬಸ್‌ಪಾಸ್‌ನ ಜೆರಾಕ್ಸ್‌ ತೋರಿಸಿದ್ದಾನೆ. ಆದರೆ, ಕಂಡಕ್ಟರ್‌ ಮೂಲ ಪ್ರತಿ ತೋರಿಸುವಂತೆ ಹೇಳಿದ್ದಕ್ಕೆ, ಯುವಕ ನಿರ್ವಾಹಕನ ಮೇಲೆಯೇ ಹಲ್ಲೆ ಮಾಡಿದ್ದಾನೆ. ಶಕ್ತಿ ಯೋಜನೆಯಡಿ ಮಹಿಳೆಯರಿ ಆಧಾರ್‌ಕಾರ್ಡ್‌, ಓಟಿನ ಕಾರ್ಡ್‌ ಜೆರಾಕ್ಸ್‌ ತೋರ್ಸಿದ್ರೂ ಸುಮ್ಮನಿರ್ತೀಯಾ ನನ್ಮೇಲೆ ಮಾತ್ರ ರೇಗಾಡ್ತಿಯಾ ಎಂದು ಗುದ್ದಿದ್ದಾನೆ. ಹಲ್ಲೆ ಮಾಡಿದ್ದಕ್ಕೆ ಪೊಲೀಸ್‌ ಠಾಣೆಗೆ ಕರೆದೊಯ್ದರೆ ಅಲ್ಲಿಯೂ ಪಿಎಸ್‌ಐ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಮೊದಲ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆ ಜಾರಿಗೊಂಡ ನಂತರ ಮಹಿಳಯರು ಸರ್ಕಾರ ನೀಡಿರುವ ಯಾವುದಾದರೂ ಮೂಲ ದಾಖಲಾತಿ ಅಥವಾ ಜೆರಾಕ್ಸ್‌ ಪ್ರತಿ ನೋಡಿದರೂ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಇಲ್ಲೊಬ್ಬ ಯುವಕ ಸಾರಿಗೆ ಇಲಾಖೆ ನೀಡಿದ್ದ ಬಸ್‌ಪಾಸ್‌ನ ಜೆರಾಕ್ಸ್‌ ಪ್ರತಿ ತೋರಿಸಿದ್ದಾನೆ. ಆದರೆ, ಸರ್ಕಾರದ ನಿಯಮದಂತೆ ಮೂಲ ಪ್ರತಿಯನ್ನು ತೋರಿಸಲು ಮಾತ್ರ ಅವಕಾಶವಿದೆ. ಯುವಕನಿಗೆ ಬಸ್‌ಪಾಸ್‌ನ ಮೂಲ ಪ್ರತಿ ತೋರಿಸುವಂತೆ ತಾಕೀತು ಮಾಡಿದ್ದಾರೆ. ಆಗ ಯುವಕ ಶಕ್ತಿ ಯೋಜನೆಯಡಿ ಮಹಿಳೆಯರಿ ಆಧಾರ್‌ಕಾರ್ಡ್‌, ಓಟಿನ ಕಾರ್ಡ್‌ ಜೆರಾಕ್ಸ್‌ ತೋರ್ಸಿದ್ರೂ ಸುಮ್ಮನಿರ್ತೀಯಾ ನನ್ಮೇಲೆ ಮಾತ್ರ ರೇಗಾಡ್ತಿಯಾ ಎಂದು ಕಂಡಕ್ಟರ್‌ ಮೇಲೆಯೇ ಹಲ್ಲೆ ಮಾಡಿದ್ದಾನೆ. 

Latest Videos

undefined

ಕರ್ನಾಟಕ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ

ಹಲ್ಲೆ ಮಾಡಿದ ಯುವಕನನ್ನು ಮೌನೇಶ್‌ ಎಂದು ಗುರುತಿಸಲಾಗಿದೆ. ಪೀಣ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಕರ್ತವ್ಯನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ್ದರಿಂದ ಯುವಕನನ್ನು ಹತ್ತಿರದ ಪೊಲೀಸ್‌ ಠಾಣೆಗೆ ಕರೆತರಲಾಗುತ್ತು. ಆದರೆ, ಪೊಲೀಸ್‌ ಠಾಣೆಯಲ್ಲೂ ವಾದ ಮಾಡುತ್ತಿದ್ದ ಯುವಕನಿಗೆ ಪೊಲೀಸರು ಒಂದೆರಡು ಏಟು ಒದೆ ನೀಡಿ ಸುಮ್ಮನೆ ಕೂರಿಸಿದ್ದಾರೆ. ಈ ವೇಳೆ ಏಕಾಏಕಿ ಬಂದು ತನಗೆ ಹೊಡೆದ ಪೊಲೀಸರ ಮೇಲೆ ಕೆನ್ನೆ ಹಾಗೂ ಮರ್ಮಾಂಗಕ್ಕೆ ಒದ್ದಿದ್ದಾನೆ ಎಂದು ತಿಳಿದುಬಂದಿದೆ. 

ಮೌನೇಶ್‌ ಅಣ್ಣನಿಂದಲೂ ಪೊಲೀಸರ ಮೇಲೆ ಹಲ್ಲೆ: ಪೊಲೀಸ್‌ ಠಾಣೆಯಲ್ಲಿ ಯುವಕ ಮೌನೇಶ್‌ನನ್ನು ಕೂರಿಸಿದ್ದ ವೇಳೆ ಮನೆಗೆ ಕರೆ ಮಾಡಿ ಅಳುತ್ತಾ ಮಾತನಾಡಿದ್ದಾನೆ. ಇದರಿಂದ ಕೋಪಗೊಂಡು ಠಾಣೆಗೆ ಬಂದ ಅವರ ಸಹೋದರ ಕೂಡ ಪೊಲೀಸ್‌ ಪೇದೆಗಳ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದಾನೆ. ಇನ್ನು ಗಾಯಗೊಂಡ ಪೀಣ್ಯಾ ಸಬ್ ಇನ್ಸ್‌ಪೆಕ್ಟರ್ ಸಿದ್ದು ಹೂಗಾರ  ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳು ಪೀಣ್ಯಾ ಠಾಣೆಗೆ ದೌಡಾಯಿಸಿದ್ದಾರೆ. ಸಬ್ ಇನ್ಸ್ಪೆಕ್ಟರ್‌ ದವಡೆಗೆ ಪಂಚ್ ಮಾಡಿ , ಮರ್ಮಾಂಗಕ್ಕೆ ಒದ್ದು ಹಲ್ಲೆ ಮಾಡಿದ್ದ ಯುವಕ ಮೌನೇಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮೌನೇಶ್‌ನ ತಪ್ಪಿಲ್ಲ, ಪೊಲೀಸರು ಸುಳ್ಳು ಕಥೆ ಕಟ್ಟುತ್ತಿದ್ದಾರೆ:  ಈ ಕುರಿತು ಮಾತನಾಡಿದ ಯುವಕ ಮೌನೇಶ್‌ ಅವರ ತಂದೆ ರಾಜಣ್ಣ ಅವರು,  ರಾತ್ರಿ ನೀಟ್ ಎಕ್ಸಾಮ್ ರಿಸಲ್ಟ್ ಬಂದಿತ್ತು. ಹೀಗಾಗಿ ಮಗ ಸ್ವಲ್ಪ ಬೇಸರದಿಂದ ಇದ್ದನು. ಇಂದು ಬೆಳಗ್ಗೆ ಡ್ಯಾಡಿ ನನ್ನ ಕಾಲೇಜಿಗೆ ಡ್ರಾಪ್ ಮಾಡು ಎಂದಾಗ ನಾನು, ಗಂಗಮ್ಮ ಸರ್ಕಲ್ ತನಕ ಡ್ರಾಪ್ ಮಾಡಿ ಬಿಎಂಟಿಸಿ ಬಸ್ ಹತ್ತಿಸಿದ್ದೆನು. ನಂತರ ನನಗೆ ಪೀಣ್ಯ ಪೊಲೀಸ್ ಠಾಣೆಯಿಂದ ಮಗ ಕರೆ ಮಾಡಿ, ಅಳುತ್ತಾ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ ಎಂದು ಹೇಳಿದ್ದನು. ಇಲ್ಲಿ ಬಂದಮೇಲೆ ಸಬ್ ಇನ್ಸ್ ಪೆಕ್ಟರ್ ನನ್ನ ಮೊದಲ ಮಗನಿಗೆ ಹಲ್ಲೆ ಮಾಡಿದರು. ನಾನು ಆ ಸಂದರ್ಭದಲ್ಲಿ ಇಲ್ಲೇ ಇದ್ದೆ. ನನ್ನ ಮಗನನ್ನ ತಡೆದು ನಾನು ಹೊರಗಡೆ ಕರೆದುಕೊಂಡು ಬಂದೆನು.

ಬೈಕ್‌ನಲ್ಲಿ ಜಾಲಿರೈಡ್‌ ಹೋದ ಸ್ನೇಹಿತರು ಪೀಸ್‌ ಪೀಸ್: ದೇಹದ ತುಂಡುಗಳನ್ನು ಎತ್ತಿಕೊಂಡು ಹೋದ ಪೊಲೀಸರು

ಅಂಗಲಾಚಿದ್ರೂ ಬಿಡದೇ ಮಗನ ಮೇಲೆ ಹಲ್ಲೆ ಮಾಡಿದ್ರು: ಪೊಲೀಸ್‌ ಠಾಣೆಯ ಬಾಗಿಲ ಬಳಿ ನಿಂತುಕೊಂಡು ಸಬ್ ಇನ್ಸ್ ಪೆಕ್ಟರ್ ತನ್ನಮೇಲೆ ಹಲ್ಲೆ ಮಾಡಿದ ಬಗ್ಗೆ ನನ್ನ ಮಗ ಮೌನೇಶ್‌ ಹೇಳುತ್ತಿದ್ದನು. ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಗಿ ಹೇಳಿದನು. ಈ ವೇಳೆ ಮತ್ತೊಮ್ಮೆ ಪೊಲೀಸರೆಲ್ಲರೂ ಸೇರಿ ಮೌನೇಶ್ ಮೇಲೆ ಹಲ್ಲೆ ಮಾಡಿದರು. ನಾನು ಮಗನ ಮೇಲೆ ಮಲಗಿ ಅಂಗಲಾಚಿದರೂ ಬಿಡಲಿಲ್ಲ. ಈಗ ಪೊಲೀಸರ ಮೇಲೆಯೇ ಹಲ್ಲೆಯಾಗಿದೆ ಅಂತಿದ್ದಾರೆ. ಏನು ಮಾಡೋದು ಗೊತ್ತಿಲ್ಲ. ಮಗ ಎಂಬಿಬಿಎಸ್ ಮಾಡ್ತಿದ್ದಾನೆ ಅವನ ಭವಿಷ್ಯ ಹಾಳಾಗುತ್ತದೆ. ಕುವೆಂಪು ನಗರದಲ್ಲಿ ರಾಜಣ್ಣ ಮಕ್ಕಳು ಅಂದ್ರೆ ಹೇಗೆ ಅಂತಾ ಕೇಳಿ ಸರ್. ಮಕ್ಕಳನ್ನ ನಾನು ಹೊರಗಡೆ ಕಳಿಸೋದೆ ಇಲ್ಲ. ನನ್ನ ಮಗ ಹಾಗೆ ಮಾಡಿಲ್ಲ ಎಂದು ಮೌನೇಶ್‌ ತಂದೆ ಮಾಧ್ಯಮಗಳ ಮುಂದೆ ಅವಲತ್ತುಕೊಂಡಿದ್ದಾರೆ.

click me!