ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಒಂದಕ್ಕೆ ಪೇಂಟಿಂಗ್ ಮಾಡುವಾಗ ತಾನು ಕಟ್ಟಿಕೊಟ್ಟಿಂಡಿದ್ದ ಹಗ್ಗ ತುಂಡಾಗಿ ಮೂರನೇ ಮಹಡಿಯಿಂದ ಪೇಂಟರ್ ಬಿದ್ದು ಸಾಔನ್ನಪ್ಪಿದ ದುರ್ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ.
ಬೆಂಗಳೂರು (ಮೇ 12): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಒಂದಕ್ಕೆ ಪೇಂಟಿಂಗ್ ಮಾಡುವಾಗ ತಾನು ಕಟ್ಟಿಕೊಟ್ಟಿಂಡಿದ್ದ ಹಗ್ಗ ತುಂಡಾಗಿ ಮೂರನೇ ಮಹಡಿಯಿಂದ ಪೇಂಟರ್ ಬಿದ್ದು ಸಾಔನ್ನಪ್ಪಿದ ದುರ್ಘಟನೆ ಜೆ.ಪಿ. ನಗರದಲ್ಲಿ ನಡೆದಿದೆ.
ನಗರದಲ್ಲಿ ಅಪಾರ್ಟ್‌ಮೆಂಟ್ ಸೇರಿ ಬಹುತೇಕ ಕಟ್ಟಡಗಳಿಗೆ ಮಳೆಗಾಲಕ್ಕೂ ಮುನ್ನ ಪೇಂಟಿಂಗ್ ಸೇರಿ ಇತರೆ ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತದೆ. ಮಳೆಗಾಲಯನ್ನೂ ಮುನ್ನಾ ತಿಂಗಳಾದ ಏಪ್ರಿಲ್ ಹಾಗೂ ಮೇ ತಿಂಗಳು ಮನೆಗಳು ಹಾಗೂ ಕಟ್ಟಡಗಳು ದುರಸ್ತಿಗೆ ಸುಸಂದರ್ಭವಾಗಿದೆ. ಅದೇ ರೀತಿ ಬೆಂಗಳೂರಿನ ಜೆ.ಪಿ. ನಗರದ ಮಹಾರಾಜ ಪ್ಯಾಲೇಸ್ ಫೇಸ್ ನಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಪೇಂಟಿಂಗ್ ಕಾರ್ಯವನ್ನು ಮಾಡಲಾಗುತ್ತಿದೆ. ಇನ್ನು ಪೇಂಟಿಂಗ್ ಮಾಡುವವರು ಸುರಕ್ಷತೆಗಾಗಿ ರೋಪ್, ಹೆಲ್ಮೆಟ್ ಸೇರಿದಂತೆ ಹಲವು ಸುರಕ್ಷತಾ ಸಾಧನಗಳನ್ನು ಬಳಸಬೇಕು. ಆದರೆ, ಇಲ್ಲಿ ಸುರಕ್ಷತೆಗಾಗಿ ಬಳಕೆ ಮಾಡಲಾದ ಹಗ್ಗವೇ ಕಳಪೆಯಾಗಿದ್ದ, ಪೇಂಟಿಂಗ್ ಮಾಡುತ್ತಿರುವಾಗಲೇ ಪೇಂಟರ್ ಕಟ್ಟಿಕೊಂಡಿದ್ದ ಹಗ್ಗವು ತುಂಡಾಗಿ 3 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ.
Mandya: ಪತ್ನಿ ಜೊತೆ ಮೊಬೈಲ್‌ನಲ್ಲಿ ಪ್ರೀತಿಯ ಮಾತು: ಛೇ.. ಸಿಡಿಲು ಬಡಿದು ಪ್ರಾಣ ಹೋಯ್ತು!
ಮಹಾರಾಜ ಪ್ಯಾಲೇಸ್ ಫೇಸ್ ನಲ್ಲಿರುವ ಅಪಾರ್ಟ್ಮೆಂಟ್ 3ನೇ ಮಹಡಿಯಲ್ಲಿ ಇಂದು ಬೆಳಗ್ಗೆ ಪೇಂಟಿಂಗ್ ಮಾಡಲು ಮುಂದಾದ ನರಸಿಂಹ (50) ಮೇಲಿಂದ ಬಿದ್ದು ಸಾವನ್ನಪ್ಪಿದ ದುರ್ದೈವಿ ಆಗಿದ್ದಾನೆ. ಅಪಾರ್ಟ್‌ಮೆಂಟ್ ಮೂರನೇ ಮಹಡಿಯ ಮನೆಗೆ ಪೇಂಟ್ ಮಾಡುವಾಗ ಸುರಕ್ಷತೆಗಾಗಿ ದೇಹಕ್ಕೆ ಕಟ್ಟಿಕೊಂಡಿದ್ದ ಹಗ್ಗ ತುಂಡಾಗಿದೆ. ಹೀಗಾಗಿ, ಮೇಲಿಂದ ಕೆಳಗೆ ಬಿದ್ದಿದ್ದಾರೆ. ಇನ್ನು ತಲೆಗೆ ಹೆಲ್ಮೆಟ್ ಧರಿಸಿದ್ದರೂ ಕೂಡ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಪೇಂಟರ್ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇನ್ನು ದೇಹಕ್ಕೆ ಕೇವಲ ಹಗ್ಗ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದು, ಬೇರೆ ಯಾವುದೇ ಸುರಕ್ಷತಾ ಸಾಧನಗಳನ್ನು ಬಳಕೆ ಮಾಡುತ್ತಿರಲಿಲ್ಲ. ಈ ಘಟನೆ ಕುರಿತಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಪತ್ನಿ ಜೊತೆ ಮೊಬೈಲ್‌ನಲ್ಲಿ ಪ್ರೀತಿಯ ಮಾತು: ಛೇ.. ಸಿಡಿಲು ಬಡಿದು ಪ್ರಾಣ ಹೋಯ್ತು!
ಮಂಡ್ಯ: ನವ ವಿವಾಹಿತನೊಬ್ಬ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು, ವಾಪಸ್ ಬೈಕ್‌ನಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಊರಿಗೆ ಹೋಗುವಾಗ ಸಿಡಿಲು ಬಡಿದು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ರಾಜ್ಯದ ವಿವಿಧೆಡೆ ಭರ್ಜರಿ ಮಳೆಯಾಗುತ್ತಿದೆ. ಇಂದು ಮಧ್ಯಾಹ್ನದಿಂದಲೇ ಮಂಡ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇನ್ನು ನಿನ್ನೆ ಮತದಾನ ಮಾಡಿ ಪತ್ನಿಯನ್ನು ತವರು ಮನೆಗೆ ನಿಟ್ಟು ಬರಲು ಹೋಗಿದ್ದ ನವವಿವಾಹಿತನೊಬ್ಬ, ಸಣ್ಣದಾಗಿ ಸುರಿಯುತ್ತಿದ್ದ ಮಳೆಯ ನಡುವೆಯೇ ತಮ್ಮ ಊರಿಗೆ ಮರಳಿ ಹೋಗಲು ಮುಂದಾಗಿದ್ದಾನೆ. ಬೈಕ್‌ನಲ್ಲಿ ಹೋಗುವಾಗ ಪತ್ನಿಯೊಂದಿಗೆ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾರೆ, ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
Bengaluru: ಡ್ಯೂಟಿಯಲ್ಲಿದ್ದ ಕಂಡಕ್ಟರ್‌ಗೆ ಗುದ್ದಿದ ಬಿಎಂಟಿಸಿ ಬಸ್: ಗೋಡೆಗೆ ಅಪ್ಪಚ್ಚಿ
ಮದ್ದೂರಿನ ವೈದ್ಯನಾಥಪುರ ನಿವಾಸಿ: ಸಿಡಿಲು ಬಡಿದು ಸಾವನ್ನಪ್ಪಿದ ನವ ವಿವಾಹಿತ ವ್ಯಕ್ತಿಯನ್ನು ಮಧು (35) ಎಂದು ಗುರುತಿಸಲಾಗಿದೆ. ಮದ್ದೂರಿನ ವೈದ್ಯನಾಥಪುರ ಗ್ರಾಮದ ನಿವಾಸಿಯಾಗಿದ್ದನು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹರಳಹಳ್ಳಿ ಸರ್ಕಲ್ ಬಳಿ ಬೈಕ್‌ನಕಲ್ಲಿ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇನ್ನು ಈ ನವ ವಿವಾಹಿತ ಮಧು, ಪತ್ನಿಯನ್ನ ತವರಿಗೆ ಬಿಟ್ಟು ಹುಟ್ಟೂರಿಗೆ ವಾಪಸ್ಸಾಗುತ್ತಿದ್ದರು. ಮಳೆ ಜೋರಾದ ಹಿನ್ನಲೆ ಬೈಕ್ ಅನ್ನು ಹರಳಹಳ್ಳಿ ಸರ್ಕಲ್ ಬಳಿ ಮರದಡಿಯಲ್ಲಿ ನಿಲ್ಲಿಸಿ ತಾನೂ ನಿಂತುಕೊಂಡಿದ್ದನು. ಹೆಲ್ಮೆಟ್ ಧರಿಸಿ, ಪೋನ್ ನಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಗ, ಈ ವೇಳೆ ಯಮನಾಗಿ ಬಂದ ಸಿಡಿಲು ಮಧು ಪ್ರಾಣವನ್ನು ಹೊತ್ತೊಯ್ದಿದೆ.