Bengaluru: ಕಾರು-ಬೈಕ್ ನಡುವೆ‌ ಭೀಕರ‌ ರಸ್ತೆ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!

Published : May 11, 2023, 10:18 PM IST
Bengaluru: ಕಾರು-ಬೈಕ್ ನಡುವೆ‌ ಭೀಕರ‌ ರಸ್ತೆ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು!

ಸಾರಾಂಶ

ಕಾರು ಹಾಗೂ ಬೈಕ್ ನಡುವೆ‌ ಭೀಕರ‌ ರಸ್ತೆ ಅಪಘಾತವಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  

ಬೆಂಗಳೂರು (ಮೇ.11): ಕಾರು ಹಾಗೂ ಬೈಕ್ ನಡುವೆ‌ ಭೀಕರ‌ ರಸ್ತೆ ಅಪಘಾತವಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.  ಯಲಹಂಕ ಬಳಿ ರಾಜಾನುಕುಂಟೆ ಕಾಕೋಳು ರಸ್ತೆಯ ಚಲ್ಲಹಳ್ಳಿ ಬಳಿ ಘಟನೆ ನಡೆದಿತ್ತು, ಅಪಘಾತದ ರಭಸಕ್ಕೆ ಬೈಕ್ ಮತ್ತು ಕಾರಿನ ಮುಂಭಾಗ ಜಖಂ ಆಗಿದೆ. ಯಲಹಂಕ ತಾಲೂಕಿನ  ಚಲ್ಲಹಳ್ಳಿ ಗ್ರಾಮದ ರಾಮಯ್ಯ ( 39 ) ನಾಗರಾಜ್  ( 42 ) ಮೃತ ದುರ್ದೈವಿಗಳು. ಅಪಘಾತದ ರಭಸಕ್ಕೆ ರಸ್ತೆಯಿಂದ ನೂರು ಮೀಟರ್ ದೂರದಲ್ಲಿ ಬೈಕ್ ಬಿದ್ದಿದೆ. ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಾಡುಹಗಲೇ ಬಸ್‌ ಕಂಡಕ್ಟರ್‌ ಬರ್ಬರ ಕೊಲೆ
ಕಲಬುರಗಿ: ನಗರದ ಸೂಪರ್‌ ಮಾರ್ಕೆಟ್‌ನ ಸಿಟಿ ಬಸ್‌ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಕಂಡಕ್ಟರ್‌ ಒಬ್ಬರನ್ನು ಮಚ್ಚಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕೊಲೆಯಾದ ಬಸ್‌ ಕಂಡಕ್ಟರ್‌ನನ್ನು ಸ್ವಾಮಿ (45) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಹಾಡುಹಗಲೇ ನಡೆದ ಈ ಭೀಕರ ಕೊಲೆಯಿಂದ ಸಿಟಿ ಬಸ್‌ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಸಹೋದರರ ನಡುವಿನ ವೈಷಮ್ಯವೇ ಕೊಲೆಗೆ ಕಾರಣವೆನ್ನಲಾಗುತ್ತಿದೆ. ಸುದ್ದಿ ತಿಳಿದು ಬ್ರಹ್ಮುಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉತ್ತರಕನ್ನಡದಲ್ಲಿ 2 ಪ್ರತ್ಯೇಕ ಪ್ರಕರಣ: ಆಸ್ತಿಗಾಗಿ ಮಚ್ಚಿನಿಂದ ಕೊಚ್ಚಿ ಕೊಲೆ, ಬಾವಿಗೆ ಬಿದ್ದು

ಸಹೋದರರ ನಡುವೆ ಜಗಳ ಕೊಲೆಯಲ್ಲಿ ಅಂತ್ಯ
ರಾಯಚೂರು: ಕ್ಷುಲ್ಲಕ ಕಾರಣಕ್ಕೆ ಸದರರ ನಡುವೆ ನಡೆದ ಜಗಳದಲ್ಲಿ ಉಮೇಶ (40) ಕೊಲೆಯಾದ ಘಟನೆ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

MANDYA: ಪತ್ನಿ ಜೊತೆ ಮೊಬೈಲ್‌ನಲ್ಲಿ ಪ್ರೀತಿಯ ಮಾತು: ಛೇ.. ಸಿಡಿಲು ಬಡಿದು ಪ್ರಾಣ ಹೋಯ್ತು!

ಹೊಲದಲ್ಲಿ ಹಾಕಲಾಗಿದ್ದ ಮೆಣಸಿನಕಾಯಿ ರಾಶಿ ಸಂಬಂಧಿಸಿದಂತೆ ಸಾವಿಗೀಡಾದ ಉಮೇಶ ಮತ್ತು ಆರೋಪಿ ಮಲ್ಲೇಶನ ನಡುವೆ ಜಗಳ ನಡೆದಿತ್ತು. ರಾತ್ರಿ ಹೊಲದಲ್ಲಿ ಮಲಗಿದ್ದ ಉಮೇಶನಿಗೆ ಮಲ್ಲೇಶನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ಸಿರವಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!