ಯುಬಿ ಸಿಟಿ ಹಲ್ಲೆ ಪ್ರಕರಣ; ವಿಜಯಾನಂದ ಕಾಶಪ್ಪನವರ್ ಖುಲಾಸೆ

By Suvarna NewsFirst Published Apr 15, 2021, 4:42 PM IST
Highlights

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ರೌಡಿಶೀಟರ್ ಸೋಮಶೇಖರ್ ಖುಲಾಸೆ/ ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣ/ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಿರ್ದೋಷಿ/ ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯದ ತೀರ್ಪು

ಬೆಂಗಳೂರು(ಏ. 15)   ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣದಲ್ಲಿ  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ರೌಡಿಶೀಟರ್ ಸೋಮಶೇಖರ್ ಖುಲಾಸೆಗೊಂಡಿದ್ದಾರೆ.

 ಬೆಂಗಳೂರು ಯುಬಿ ಸಿಟಿಯ ಸ್ಕೈ ಬಾರ್ ಹಲ್ಲೆ ಪ್ರಕರಣದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಿರ್ದೋಷಿ ಎಂದು ನ್ಯಾಯಾಲಯ  ತೀರ್ಪು ನೀಡಿದೆ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆ ಮಾಡಲಾಗಿದೆ. ಜನಪ್ರತಿನಿಧಿಗಳ‌ ವಿಶೇಷ ನ್ಯಾಯಾಲಯದ ನ್ಯಾ. ತ್ಯಾಗರಾಜ್ ಎನ್.ಇನವಳ್ಳಿ ತೀರ್ಪು ನೀಡಿದ್ದಾರೆ. 

'ವಿಜಯೇಂದ್ರ ಎಲ್ಲಿ ಮಲಗುತ್ತಾರೆ ಎನ್ನುವುದು ನಮಗೆ ಗೊತ್ತು'

ಏನಿದು ಪ್ರಕರಣ :  2014 ರ ಜುಲೈ 1 ರ ರಾತ್ರಿ ನಡೆದಿದ್ದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು.  ಹುಟ್ಟುಹಬ್ಬ ಆಚರಣೆ ವೇಳೆ ಪೊಲೀಸರ ಮೇಲೆ‌ ವಿಜಯಾನಂದ  ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.  ಕಾನ್ಸ್‌ಟೇಬಲ್ ಗಳಾದ ಕಿರಣ್ ಹಾಗೂ ಪ್ರಶಾಂತ್ ನಾಯಕ್‌ ಮೇಲೆ‌ ಹಲ್ಲೆ ಆರೋಪವಿತ್ತು.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಂತರ ಸಿಸಿಬಿ ತನಿಖೆ‌ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿತ್ತು... ವಾದ ಪ್ರತಿವಾದ ಆಲಿಸಿ ಇಂದು ತೀರ್ಪು ಪ್ರಕಟಿಸಲಾಗಿದೆ.

click me!