
ಬೆಂಗಳೂರು (ಆ.07): ಬೆಂಗಳೂರಿನಲ್ಲಿ ಬೈಕ್ ಕದಿಯೋಕೆ ಕಳ್ಳರು ಹೊಸ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಅದೇನೆಂದರೆ, ಬೆಂಗಳೂರಿನಲ್ಲಿ ಬೈಕ್ ಮಾರಾಟಕ್ಕಿಟ್ಟ ಮಾಲೀಕರನ್ನು ಯಾಮಾರಿಸಲು ಹೊಸ ಮಾರ್ಗ ಹುಡುಕಿಕೊಂಡ ಖದೀಮರು ರ್ಯಾಪಿಡೋ ಬೈಕ್‌ಗಳನ್ನು ಬುಕ್ ಮಾಡಿಕೊಂಡು ಬಂದು, ಅವರನ್ನು ಅಲ್ಲಿಯೇ ನಿಲ್ಲಿಸಿ ಬೈಕ್ ಕದ್ದು ಪರಾರಿ ಆಗುತ್ತಾರೆ. ನೀವೂ ಈ ಬಗ್ಗೆ ಎಚ್ಚರವಹಿಸದಿದ್ದರೆ ನಿಮ್ಮ ಬೈಕ್ ಕೂಡ ಖದೀಮರ ಪಾಲಾಗಬಹುದು.
ಹೌದು, ಬೈಕ್ ಕದಿಯೋದಕ್ಕೂ ಖದೀಮರು ಹೊಸ ಫ್ಲಾನ್ ಮಾಡಿಕೊಂಡಿದ್ದಾರೆ. ರ್ಯಾಪಿಡೋ ಬೈಕ್, ಟೆಸ್ಟ್ ಡ್ರೈವ್ ರೀತಿಯಲ್ಲಿ ಬಂದು ಮಾಲೀಕನಿಗೆ ಟೋಪಿ ಹಾಕುತ್ತಾರೆ. ರ್ಯಾಪಿಡೋ ಬೈಕ್ ನಲ್ಲಿ ಬಂದು ಬೈಕ್ ಟೆಸ್ಟ್ ಡ್ರೈವ್ ನೆಪದಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಬೆಂಗಳೂರಿನ ಯುವಕನೊಬ್ಬ ಓಎಲ್ ಎಕ್ಸ್ ನಲ್ಲಿ ಯಮಹಾ RX 135 ಬೈಕ್ ಫೋಸ್ಟ್ ಹಾಕಿದ್ದನು. ಈ ಫೋಸ್ಟ್ ನೋಡಿದ ಖದೀಮ ಬೈಕ್ ತೆಗೆದುಕೊಳ್ಳೋದಾಗಿ ಕಾಲ್ ಮಾಡಿದ್ದನು. ಬೈಕ್ ಕೊಳ್ಳಲು ನಂದಿನಿ ಲೇ ಔಟ್ ಸಮೀಪ ಬರುವುದಾಗಿ ಹೇಳಿದ್ದನು.
ಇತಿಹಾಸದಲ್ಲೇ ಮೊದಲು ತುಳುನಾಡಿನ ಕಂಬಳ ಬೆಂಗಳೂರಿನಲ್ಲಿ... ರೈಲಲ್ಲಿ ಬರಲಿವೆ ಕೋಣಗಳು
ರ್ಯಾಪಿಡೋ ಬೈಕ್ ಚಾಲಕ ತನ್ನ ಸ್ನೇಹಿತನೆಂದು ನಿಲ್ಲಿಸಿ ಹೋದ: ಬೈಕ್ ಖರೀದಿ ಮಾಡಿದ ನಂತರ ಕೈತುಂಬಾ ಹಣ ಸಿಗುತ್ತದೆ ಎಂದು ನಂಬಿಕೊಂಡಿದ್ದ ಬೈಕ್ ಮಾಲೀಕನಿಗೆ ಇಲ್ಲಿ ಮಹಾಮೋಸ ನಡೆಯುವುದರ ಸುಳಿವೂ ಸಿಕ್ಕಿರಲಿಲ್ಲ. ಬೈಕ್ ಖರೀದಿ ಮಾಡುವುದಾಗಿ ಹೇಳಿಕೊಂಡು ರ್ಯಾಪಿಡೋ ಬೈಕ್‌ನಲ್ಲಿ ಬಂದ ಖದೀಮ, ಬೈಕ್ ಇಳಿದು ನೀವು ಇಲ್ಲಿಯೇ ಇರಿ ನಾನು ಮೆಜೆಸ್ಟಿಕ್‌ಗೆ ಹೋಗಬೇಕು ವೇಟಿಂಗ್ ಚಾರ್ಜ್ ಕೊಡುತ್ತೇನೆ ಎಂದು ಹೇಳಿದ್ದಾನೆ. ಇನ್ನು ಬೈಕ್ ಮಾಲೀಕನ ಬಳಿ ಹೋಗಿ ರ್ಯಾಪಿಡೋ ಬೈಕ್ ಮಾಲೀಕ ತನ್ನ ಸ್ನೇಹಿತನೆಂದು ತಿಳಿಸಿ, ನಾನು ನಿಮ್ಮ ಬೈಕ್ ಟೆಸ್ಟ್ ರೈಡ್ ಮಾಡುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾರೆ. ಹೀಗೆ, ಬೈಕ್ ತೆಗೆದುಕೊಂಡು ಹೋದವನು ಪರಾರಿ ಆಗಿದ್ದಾನೆ.
ಇನ್ನು ಬೈಕ್ ತೆಗೆದುಕೊಂಡ ಹೋದ ವ್ಯಕ್ತಿಗಾಗಿ ಮಾಲೀಕ ಮತ್ತು ರ್ಯಾಪಿಡೋ ಚಾಲಕ ಇಬ್ಬರೂ ಕಾಯುತ್ತಾ ನಿಂತಿದ್ದಾರೆ. ತುಂಬಾ ಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಕರೆ ಮಾಡಿದ್ದಾರೆ. ಆದರೆ, ಆ ವ್ಯಕ್ತಿ ಫೋನ್ ಸ್ವಿff ಆಫ್ ಮಾಡಿಕೊಂಡು ಪರಾರಿ ಆಗಿದ್ದಾನೆ. ಆಗ, ರ್ಯಾಪಿಡೋ ಬೈಕ್ ಚಾಲಕನಿಗೆ ನಿಮ್ಮ ಸ್ನೇಹಿತ ಎಲ್ಲಿ ಎಂದು ಬೈಕ್ ಮಾಲೀಕ ಕೇಳಿದಾಗ, ತಾನು ರ್ಯಾಪಿಡೋ ಚಾಲಕ. ತನಗೂ ಆ ವ್ಯಕ್ತಿಗೂ ಸಂಬಂಧವಿಲ್ಲ. ತನಗೂ ಆತ ಹಣ ಕೊಡಬೇಕು, ಮುಂದೆ ಮೆಜೆಸ್ಟಿಕ್‌ಗೆ ಹೋಗಬೇಕು ಎಂದು ಹೇಳಿ ನಿಲ್ಲಿಸಿ ಹೋಗಿದ್ದು, ಈಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿದ್ದಾರೆ.
ಹೊಳಲ್ಕೆರೆ ಶಾಸಕ ಚಂದ್ರಪ್ಪನ ಹೆಸರು ಬರೆದಿಟ್ಟು ಗ್ರಾ.ಪಂ. ಅಧಿಕಾರಿ ಆತ್ಮಹತ್ಯೆ
ಬೈಕ್ ಕೊಟ್ಟ ಮಾಲೀಕನಿಗೆ ಬರುತ್ತಿವೆ ನಿಯಮ ಉಲ್ಲಂಘನೆಯ ದಂಡ ಪಾವತಿ ಸಂದೇಶ: ಬೈಕ್ ಕೊಟ್ಟ ಮಾಲೀಕ ಹಾಗೂ ರ್ಯಾಪಿಡೋ ಚಾಲಕ ಇಬ್ಬರೂ ಮೋಸ ಹೋಗಿರವುದು ತಿಳಿದಾದ ತಕ್ಷಣ ನಂದಿನಿ ಲೇ ಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಗ ರ್ಯಾಪಿಡೋ ಚಾಲಕನ್ನ ನಂದಿನಿ ಲೇ ಔಟ್ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ, ಈ ವೇಳೆ ರ್ಯಾಪಿಡೋ ಚಾಲಕನಿಗೆ ಖದೀಮನ ಪರಿಚಯವೂ ಇಲ್ಲ ಎನ್ನುವುದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಬೈಕ್ ತೆಗೆದುಕೊಂಡು ಹೋದ ನಂತರ ಎಲ್ಲೆಂದರಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ನಲ್ಲಿ ಸಂಚಾರ ಮಾಡುತ್ತಿದ್ದಾನೆ. ಬೈಕ್ ಕದ್ದ ಖದೀಮನ ಬೇಕಾಬಿಟ್ಟಿ ನಿಯಮ ಉಲ್ಲಂಘನೆಯ ಸಂಚಾರದಿಂದ ಬೈಕ್ ಕೊಟ್ಟ ಮಾಲೀಕನಿಗೆ ದಂಡ ಕಟ್ಟುವಂತೆ ಪೊಲೀಸ್ ಇಲಾಖೆಯಿಂದ ಸಂದೇಶಗಳನ್ನು ಕಳಿಸಲಾಗುತ್ತಿದೆ. ಇನ್ನು ಪೊಲೀಸರು ಬೈಕ್ ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ