ನವ ವಿವಾಹಿತನೊಬ್ಬ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು, ವಾಪಸ್ ಬೈಕ್‌ನಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಊರಿಗೆ ಹೋಗುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.
ಮಂಡ್ಯ (ಮೇ 11): ನವ ವಿವಾಹಿತನೊಬ್ಬ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು, ವಾಪಸ್ ಬೈಕ್‌ನಲ್ಲಿ ಪತ್ನಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ಊರಿಗೆ ಹೋಗುವಾಗ ಸಿಡಿಲು ಬಡಿದು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ರಾಜ್ಯದ ವಿವಿಧೆಡೆ ಭರ್ಜರಿ ಮಳೆಯಾಗುತ್ತಿದೆ. ಇಂದು ಮಧ್ಯಾಹ್ನದಿಂದಲೇ ಮಂಡ್ಯದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇನ್ನು ನಿನ್ನೆ ಮತದಾನ ಮಾಡಿ ಪತ್ನಿಯನ್ನು ತವರು ಮನೆಗೆ ನಿಟ್ಟು ಬರಲು ಹೋಗಿದ್ದ ನವವಿವಾಹಿತನೊಬ್ಬ, ಸಣ್ಣದಾಗಿ ಸುರಿಯುತ್ತಿದ್ದ ಮಳೆಯ ನಡುವೆಯೇ ತಮ್ಮ ಊರಿಗೆ ಮರಳಿ ಹೋಗಲು ಮುಂದಾಗಿದ್ದಾನೆ. ಬೈಕ್‌ನಲ್ಲಿ ಹೋಗುವಾಗ ಪತ್ನಿಯೊಂದಿಗೆ ಮಾತನಾಡುತ್ತಾ ರಸ್ತೆಯಲ್ಲಿ ಹೋಗುತ್ತಿದ್ದಾರೆ, ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
Shivamogga: ಖಾಸಗಿ ಬಸ್‌ಗಳ ನಡುವೆ ಭೀಕರ ಅಪಘಾತ: 10ಕ್ಕೂ ಅಧಿಕ ಸಾವು, 70 ಮಂದಿಗೆ ಗಾಯ!
ಮದ್ದೂರಿನ ವೈದ್ಯನಾಥಪುರ ನಿವಾಸಿ: ಸಿಡಿಲು ಬಡಿದು ಸಾವನ್ನಪ್ಪಿದ ನವ ವಿವಾಹಿತ ವ್ಯಕ್ತಿಯನ್ನು ಮಧು (35) ಎಂದು ಗುರುತಿಸಲಾಗಿದೆ. ಮದ್ದೂರಿನ ವೈದ್ಯನಾಥಪುರ ಗ್ರಾಮದ ನಿವಾಸಿಯಾಗಿದ್ದನು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹರಳಹಳ್ಳಿ ಸರ್ಕಲ್ ಬಳಿ ಬೈಕ್‌ನಕಲ್ಲಿ ಹೋಗುವಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಇನ್ನು ಈ ನವ ವಿವಾಹಿತ ಮಧು, ಪತ್ನಿಯನ್ನ ತವರಿಗೆ ಬಿಟ್ಟು ಹುಟ್ಟೂರಿಗೆ ವಾಪಸ್ಸಾಗುತ್ತಿದ್ದರು. ಮಳೆ ಜೋರಾದ ಹಿನ್ನಲೆ ಬೈಕ್ ಅನ್ನು ಹರಳಹಳ್ಳಿ ಸರ್ಕಲ್ ಬಳಿ ಮರದಡಿಯಲ್ಲಿ ನಿಲ್ಲಿಸಿ ತಾನೂ ನಿಂತುಕೊಂಡಿದ್ದನು. ಹೆಲ್ಮೆಟ್ ಧರಿಸಿ, ಪೋನ್ ನಲ್ಲಿ ಹೆಂಡತಿಯೊಂದಿಗೆ ಮಾತನಾಡುತ್ತಿದ್ದಾಗ, ಈ ವೇಳೆ ಯಮನಾಗಿ ಬಂದ ಸಿಡಿಲು ಮಧು ಪ್ರಾಣವನ್ನು ಹೊತ್ತೊಯ್ದಿದೆ.
ಉಡುಪಿಯಲ್ಲಿ ಮಳೆಗೆ ಮರ ಬಿದ್ದು ಇಬ್ಬರ ಸಾವು: ರಾಜ್ಯದಲ್ಲಿ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲಿ ಇಂದು ಸಂಜೆ ಏಕಾಏಕಿ ಆರಂಭವಾದ ಗಾಳಿ, ಸಿಡಿಲು, ಸಾಧಾರಣ ಮಳೆಯಿಂದಾಗಿ ಹಲವು ವಾಹನ ಸವಾರರು ಆಘಾತಕ್ಕೆ ಒಳಗಾಗಿದ್ದಾರೆ. ಗಾಳಿಯ ತೀವ್ರತೆಗೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ದುರ್ಘಟನೆ, ಉಡುಪಿ ಜಿಲ್ಲೆ ಕಾಪು ತಾಲೂಕಿನ ಮಜೂರು ಮಸೀದಿ ಬಳಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಆಟೋ ರಿಕ್ಷಾ ಮೇಲೆ ಮರ ಉರುಳಿ ಬಿದ್ದಿದ್ದರಿಂದ ಆಟೋ ಜಖಂ ಆಗಿ ವಾಹನದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ.
ಆಟೋ ಚಾಲಕ ಪ್ರಾಣಾಪಾಯದಿಂದ ಪಾರು: ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದ ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಶಿರ್ವದಿಂದ ಕಾಪು ಕಡೆ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದಿದೆ. ಘಟನೆ ನಡೆದ ಕೂಡಲೇ ಸ್ಥಳೀಯರು ಮರ ಕತ್ತರಿಸುವ ಯಂತ್ರವನ್ನು ತಂದು ಮರ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಬಂದು ಮರವನ್ನು ತೆರವುಗೊಳಿಸಿ ಮೃತರ ದೇಹಗಳನ್ನು ಹಾಗೂ ಗಾಯಾಳು ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಮೃತರ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆ ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮೃತರ ವಿವರ ಸಂಗ್ರಹಿಸುತ್ತಿದ್ದಾರೆ.
Bengaluru Accident: ಬೈಕ್‌ಗೆ ಡಿಕ್ಕಿ ಹೊಡೆದ ಟಿಪ್ಪರ್: ಚಕ್ರದಡಿ ಸಿಲುಕಿ ಸಾವನ್ನಪ್ಪಿದ ಮಹಿಳೆ
ಇನ್ನೂ 3 ದಿನ ಮಳೆಯ ಆರ್ಭಟ:
ರಾಜ್ಯದಲ್ಲಿ ವರುಣನ ಆರ್ಭಟ ಮುಮದುವರಿಯಲಿದೆ. ಇನ್ನು ಮೂರು ದಿನ ಸಾಧಾರಣ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಂದು, ನಾಳೆ, ನಾಡಿದ್ದು ಸಾದಾರಣ ಮಳೆ ಆಗುವ ಸಾಧ್ಯತೆಯಿದೆ. ಹಲವು ಕಡೆ ಗುಡುಗು, ಮಿಂಚು, ಗಾಳಿ ಸಹಿತ ಭಾರಿ ಮಳೆ ಆಗುವ ಸಾಧ್ಯತೆಯಿದೆ. ಮೋಖಾ ಚಂಡಮಾರುತ ರಾಜ್ಯಕ್ಕೆ ಎಫೆಕ್ಟ್ ಇಲ್ಲ. ಆದರೂ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಕಡೆ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.