
ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಖತರ್ನಾಕ್ ಆಗುತ್ತಿದ್ದಾರೆ. ಹನಿಮೂನ್ಗೆ ಕರೆದುಕೊಂಡು ಹೋಗಿ ಕೊಲೆ ಮಾಡುವುದು, ಪ್ರಿಯಕರನ ಜೊತೆ ಸೇರಿ ಭಾವಿ ಪತಿಯನ್ನೇ ಮುಗಿಸುವುದು, ಗಂಡನನ್ನು ಸಾಯಿಸುವುದು... ಹೀಗೆ ಪ್ರತಿನಿತ್ಯವೂ ಹೆಂಗಸರಿಂದ ಆಗುತ್ತಿರುವ ಕೊಲೆಯ ಬಗ್ಗೆ ವರದಿಗಳು ಹೆಚ್ಚುತ್ತಲೇ ಇವೆ. ಮದುವೆ ಬೇಡ ಎನ್ನದೇ ಹೀಗೆ ಕೊಲೆ ಮಾಡುತ್ತಿರುವುದು ಏಕೆ ಎನ್ನುವ ಪ್ರಶ್ನೆ ಮಾತ್ರ ಎಲ್ಲರನ್ನೂ ಕಾಡುತ್ತಿದೆ. ಕಳೆದ ಜೂನ್ನಲ್ಲಿ ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿಯನ್ನು, ಆತನ ಪತ್ನಿ ಸೋನಮ್ ಹನಿಮೂನ್ಗೆ ಕರೆದುಕೊಂಡು ಹೋಗಿ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ್ದಳು. ಅದರ ನೆನಪು ಮಾಸುವ ಮುನ್ನವೇ ಇದೀಗ ಭೀಕರ ಬರ್ಬರ ಹತ್ಯೆಯೊಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಕೇತನ್ ವಿಶಾಲ್ ಅಗರ್ವಾಲ್ ಎನ್ನುವ ಯುವಕನ ಬರ್ಬರ ಕೊಲೆ ಪ್ರಕರಣವನ್ನು ಪೊಲೀಸರು ಕೊನೆಗೂ ಬೇಧಿಸಿದ್ದಾರೆ. ಇವರ ಮದುವೆ ಸಿಯಾ ಗೋಯಲ್ ಎಂಬಾಕೆಯ ಜೊತೆ ನಿಶ್ಚಯವಾಗಿತ್ತು. ಫೆಬ್ರವರಿಯಲ್ಲಿ ಇಬ್ಬರೂ ಎಂಗೇಜ್ಮೆಂಟ್ ಆಗಿದ್ದರು. ಅದು ಸಕತ್ ಅದ್ಧೂರಿಯಾಗಿ ನಡೆದಿತ್ತು. ಖಾಸಗಿ ಜೆಟ್‌ಗಳು ಮತ್ತು ಅರಮನೆಗಳನ್ನು ಒಳಗೊಂಡ ಅದ್ಧೂರಿ ವಿವಾಹವನ್ನು ನವೆಂಬರ್‌ನಲ್ಲಿ ನಿಗದಿಪಡಿಸಲಾಗಿತ್ತು. ಸಿಯಾಳ ಹುಟ್ಟುಹಬ್ಬ ಇದ್ದುದರಿಂದ ಕೇತನ್ ಸರ್ಪ್ರೈಸ್ ಪಾರ್ಟಿ ಅರೇಂಜ್ ಮಾಡಿದ್ದ. ಆಕೆಯನ್ನು ಸರ್ಪ್ರೈಸ್ ಆಗಿ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಇಬ್ಬರೂ ಎಂಜಾಯ್ ಟ್ರಿಪ್ ಮಾಡುತ್ತಿದ್ದಾಗಲೇ ಕೇತನ್ ಮೇಲಿನಿಂದ ಬಿದ್ದು ಸಾವನ್ನಪ್ಪಿಬಿಟ್ಟ.
ಭಾವಿ ಪತಿಯನ್ನು ಕಳೆದುಕೊಂಡ ಈ ಸುಂದರಿ ಒಂದೇ ಸಮನೆ ಇನ್ಸ್ಟಾಗ್ರಾಮ್ನಲ್ಲಿ ಗೋಳೋ ಎಂದಳು. "ನನ್ನ ಹುಟ್ಟುಹಬ್ಬದಂದು ನೀವು ನನ್ನನ್ನು ತೊರೆದಿದ್ದೀರಿ. ನಾವು ಮದುವೆಯಾಗಲು ತುಂಬಾ ಹತ್ತಿರದಲ್ಲಿದ್ದಾಗ ನೀವು ಹೊರಟುಹೋದಿರಿ. ನೀವು ನನಗೆ ಹೀಗೆ ಏಕೆ ಮಾಡಿದ್ದೀರಿ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ. ನನಗೆ ಕನಸುಗಳಿದ್ದವು, ನನಗೆ ಎಂದಿಗೂ ಉತ್ತರ ಸಿಗದ ಪ್ರಶ್ನೆಗಳು. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದಾಗ ನೀವು ನನ್ನನ್ನು ಏಕೆ ತೊರೆದಿದ್ದೀರಿ? ಶಾಂತಿಯಿಂದ ವಿಶ್ರಾಂತಿ ಪಡೆಯಿರಿ" ಎಂದು ಪೋಸ್ಟ್‌ನಲ್ಲಿ ಬರೆದಳು. ಅವಳಿಗೆ ಸಾಂತ್ವನ ಹೇಳಿದವರಿಗೆ ಲೆಕ್ಕವೇ ಇಲ್ಲ.
ಪೊಲೀಸರು ಈ ಸಾವಿನ ತನಿಖೆ ಕೈಗೊಂಡರು. ಆಗ ಸಿಯಾಳ ತನಿಖೆ ಮಾಡಿದಾಗ ಅವಳ ಗೋಳು ಕೂಡ ಪೊಲೀಸರಿಗೆ ನೋಡಲು ಆಗಲಿಲ್ಲ. ಆದರೆ ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸಿದಾಗ ಪೊಲೀಸರಿಗೇ ಶಾಕ್ ಆಗೋಯ್ತು. ತನಿಖೆಯ ವೇಳೆ, ಸಿಯಾ ಕೇತನ್‌ನೊಂದಿಗಿನ ಮದುವೆಗೆ ಸಿದ್ಧತೆಗಳು ನಡೆಯುತ್ತಿರುವಾಗಲೇ ಚೇತನ್ ಚೌಧರಿ ಎಂಬ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂತು. ಕೇತನ್‌ಳನ್ನು ಕೊಲ್ಲಲು ಈ ಜೋಡಿ ಸಂಚು ರೂಪಿಸಿತ್ತು ಎಂದು ಪೊಲೀಸರಿಗೆ ಈಗ ತಿಳಿದಿದೆ. ಕೇತನ್ ಸಹೋದರಿ ಸಿಯಾಳ ಬಳಿ ವಿಚಾರಿಸುವ ಸಂದರ್ಭದಲ್ಲಿ ತಡಬಡಿಸಿದ್ದು ನೋಡಿ ಡೌಟ್ ಬಂದು ಅದನ್ನು ಪೊಲೀಸರಿಗೆ ತಿಳಿಸಿದಾಗ, ವಿಷಯ ತನಿಖೆ ಮಾಡಿದಾಗ ಈಕೆಯ ಪ್ಲ್ಯಾನ್ ಬೆಳಕಿಗೆ ಬಂದಿದೆ.
2003ರಲ್ಲಿ ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಹೈಕೋರ್ಟ್ ಖ್ಯಾತ ವಕೀಲರ ಪುತ್ರಿ, ಖುದ್ದು ವಕೀಲೆಯಾಗಿದ್ದ ಶುಭಾ ತನ್ನ ಭಾವಿ ಪತಿಯನ್ನು ಕೊಲೆ ಮಾಡಿದ್ದ ಘಟನೆ. ಕಾನೂನು ಪದವಿ ಓದುತ್ತಿದ್ದ ಸಂದರ್ಭದಲ್ಲಿ ಜ್ಯೂನಿಯರ್ ಜೊತೆ ಲವ್ ಮಾಡಿದ್ದ ಶುಭಾಳಿಗೆ ಟೆಕ್ಕಿ ಗಿರೀಶ್ ಜೊತೆ ಎಂಗೇಜ್ಮೆಂಟ್ ಆಗಿತ್ತು. ಆಗಲೂ ಅವಳು ಮದುವೆ ಬೇಡ ಎನ್ನಲಿಲ್ಲ. ಬದಲಿಗೆ ಗಿರೀಶ್ ಅವರನ್ನು ವಿಮಾನ ನೋಡುವ ನೆಪದಲ್ಲಿ ಕರೆದುಕೊಂಡು ಹೋಗಿ ಲವರ್ ಜೊತೆಗೂಡಿ ಹತ್ಯೆ ಮಾಡಿದ್ದಳು. ಈ ಪ್ರಕರಣ ಹೈಕೋರ್ಟ್ನಿಂದ ಸುಪ್ರೀಂಕೋರ್ಟ್ಗೂ ಹೋಗಿ ಅಪರಾಧ ಸಾಬೀತಾಗಿ ಜೀವಾವಧಿ ಶಿಕ್ಷೆಯೂ ಆಗಿದೆ. ಇಂಥ ಘಟನೆ ನಡೆದಾಗಲೆಲ್ಲಾ ಬೆಂಗಳೂರಿನ ಶುಭಾ ಘಟನೆ ನೆನಪಿಗೆ ಬರುವುದು ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ