ಬೆಂಗಳೂರು ಕೇಕ್ ದುರಂತಕ್ಕೆ ಟ್ವಿಸ್ಟ್: 5 ವರ್ಷ ಮಗು ಸಾವು, ಗಂಭೀರವಾಗಿರೋ ಪೋಷಕರಿಗೆ ನಾವಿದ್ದೇವೆ ಎಂದ ಸ್ವಿಗ್ಗಿ!

By Sathish Kumar KH  |  First Published Oct 8, 2024, 5:09 PM IST

ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಕುಟುಂಬ ಸೇವಿಸಿದ ಕೇಕ್‌ನಿಂದ ಮಗುವೊಂದು ಸಾವನ್ನಪ್ಪಿದ್ದು, ತಂದೆ-ತಾಯಿ ಗಂಭೀರವಾಗಿರುವ ಘಟನೆ ನಡೆದಿದೆ. ಆದರೆ, ಎಂಎಲ್‌ಸಿ ವರದಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ತಿರುವು ಸಿಕ್ಕಿದೆ.


ಬೆಂಗಳೂರು (ಅ.08): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ (Bengaluru Swiggy Delivery partner) ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಗ್ರಾಹಕರೊಬ್ಬರ ಕೇಕ್ ಆರ್ಡರ್ ತಲುಪಿಸಲು ಹೋದಾಗ ಅದನ್ನು ಕ್ಯಾನ್ಸಲ್ ಮಾಡಿದ್ದರು. ಅದನ್ನು ಮನೆಗೆ ಹೋಗಿ ಫ್ರಿಡ್ಜ್‌ನಲ್ಲಿಟ್ಟು ತಿಂದಿದ್ದಕ್ಕೆ ತಂದೆ, ತಾಯಿ ಹಾಗೂ ಮಗು ಗಂಭೀರವಾಗಿದ್ದು, 5 ವರ್ಷದ ಮಗು ಸಾವನ್ನಪ್ಪಿತ್ತು ಎಂಬ ಸುದ್ದಿ ಹಬ್ಬಿತ್ತು. ಆದರೆ, ಇದೀಗ ಕೇಕ್ ದುರಂತ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಮಗು ಸಾವನ್ನಪ್ಪಿದರೂ ಆಸ್ಪತ್ರೆಗೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿರುವ ಸ್ವಿಗ್ಗಿ ಡೆಲಿವರಿ ಬಾಯ್ ಕುಟುಂಬದೊಂದಿಗೆ ನಾವಿದ್ದೇವೆ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ಗ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್ ಅವರು ಅ.6ರ ಭಾನುವಾರ ಗ್ರಾಹಕರು ಆರ್ಡರ್ ಮಾಡಿದ ಕೇಕ್ ಡೆಲಿವರಿಗೆ ಹೋದಾಗ, ಆರ್ಡರ್ ಕ್ಯಾನ್ಸಲ್ ಆಗಿದೆ. ಆಗ ಸ್ವಿಗ್ಗಿ ಕಂಪನಿ ತಿಳಿಸಿದಂತೆ ಕೇಕ್ ಅನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇನ್ನು ರಾತ್ರಿ ವೇಳೆ ಗಂಡ, ಹೆಂಡತಿ ಕೇಕ್ ತಿಂದು, ಉಳಿದ ಕೇಕ್ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟಿದ್ದಾರೆ. ಆಗ ಮನೆಯಲ್ಲಿದ್ದ 5 ವರ್ಷದ ಚಿಕ್ಕ ಮಗುವಿಗೆ ಕೇಕ್ ಕೊಡದೇ ಊಟ ಮಾಡಿಸಿ ಮೂವರೂ ಮಲಗಿದ್ದಾರೆ. ಆದರೆ, ಬೆಳಗಾಗುವಷ್ಟರಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ನೆರೆಹೊರೆಯವರು ಕಿದ್ವಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಾಗಲೇ ಅವರ 5 ವರ್ಷದ ಮಗು ಧೀರಜ್ ಪ್ರಾಣಪಕ್ಷಿ ಹಾರಿ ಹೋಗಿತ್ತು. ಉಳಿದಂತೆ ಗಂಭೀರ ಸ್ಥಿತಿಯಲ್ಲಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಬಾಲರಾಜ್ ಹಾಗೂ ಆತನ ಹೆಂಡತಿ ನಾಗಲಕ್ಷ್ಮಿಯನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Latest Videos

undefined

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇಕ್ ದುರಂತ: ಅಪ್ಪ ತಂದುಕೊಟ್ಟ ಬರ್ತಡೇ ಕೇಕ್ ತಿಂದು ಪ್ರಾಣಬಿಟ್ಟ ಮಗು; ತಂದೆ-ತಾಯಿ ಗಂಭೀರ!

ಸ್ವಿಗ್ಗಿ ಡೆಲಿವರಿ ಬಾಯ್ ಬಾಲರಾಜ್ ಕುಟುಂಬದ ಮೂವರನ್ನು ಆಸ್ಪತ್ರೆಗೆ ಸೇರಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ, ಮನೆಗೆ ತಂದಿದ್ದ ಕೇಕ್ ತಿಂದು ಮಗು ಸಾವನ್ನಪ್ಪಿದ್ದು, ತಂದೆ ತಾಯಿ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಇದಾದ ನಂತರ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಪ್ರಕರಣದಲ್ಲಿ ರೋಚಕ ತಿರುವು ಸಿಕ್ಕಿದೆ. ಇಲ್ಲಿ ಕುಟುಂಬದ ಎಲ್ಲರಿಗೂ ಫುಡ್ ಪಾಯ್ಸನ್ ಆಗಿರುವುದು ಬೆಳಕಿಗೆ ಬಂದಿದೆ. ಆದರೆ, ಅವರು ತಿಂದ ಕೇಕ್‌ನಿಂದ ವಿಷಾಹಾರ ಆಗಿಲ್ಲ ಎಂಬುದು ಪತ್ತೆಯಾಗಿದೆ.

ಅಜ್ಜಿ ಮನೆಯಲ್ಲಿದ್ದ ಬಾಲರಾಜ್‌ನ ಮಗಳು: ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಬಾಲರಾಜ್ ಹಾಗೂ ನಾಗಲಕ್ಷ್ಮಿ ದಂಪತಿಗೆ ಇಬ್ಬರು ಮಕ್ಕಳಿದ್ದರು. ದೊಡ್ಡ ಮಗಳನ್ನು ಅಜ್ಜಿಯ ಮನೆಯಲ್ಲಿ ಬಿಟ್ಟು ಬಂದಿದ್ದರು. ಚಿಕ್ಕ ಮಗ ಧೀರಜ್ (5) ಮಾತ್ರ ತಂದೆ ತಾಯಿ ಜೊತೆಯಲ್ಲಿದ್ದನು. ರಾತ್ರಿ ಸೇವಿಸಿದ ವಿಷಾಹಾರದಿಂದಾಗಿ ಮಗು ಸಾವನ್ನಪ್ಪಿದೆ. ಒಂದು ವೇಳೆ ಮಗಳು ಮನೆಯಲ್ಲಿದ್ದರೂ ವಿಷಾಹಾರ ಸೇವಿಸಿ ಪ್ರಾಣ ಕಳೆದುಕೊಳ್ಳತ್ತಿತ್ತು. ಪ್ರಾಣಾಪಾಯದಿಂದ ಮಗಳು ಪಾರಾಗಿದ್ದಾಳೆ ಎಂದು ಸ್ಥಲೀಯರು ಹಾಗೂ ಬಾಲರಾಜ್‌ನ ಸಂಬಂಧಿಕರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bengaluru ATM Scam: ಸಾಕ್ಷಿ ಸಮೇತ ಕಳ್ಳನನ್ನು ಹಿಡಿದುಕೊಟ್ಟರೂ ದೂರು ದಾಖಲಿಸದ ಪೊಲೀಸರು!

ಕೇಕ್‌ನಲ್ಲಿ ವಿಷಾಹಾರ ಇಲ್ಲ ಎಂದ ಆಸ್ಪತ್ರೆ: ಸ್ವಿಗ್ಗಿಯಿಂದ ಆರ್ಡರ್ ಕ್ಯಾನ್ಸಲ್ ಆಗಿ ಮನೆಗೆ ತಂದಿದ್ದ ಕೇಕ್‌ನಲ್ಲಿ ಯಾವುದೇ ವಿಷಾಹಾರ ಇಲ್ಲ. ಆದರೆ, ಮನೆಯಲ್ಲಿ ಸೇವಿಸಿದ ಊಟದಲ್ಲಿ ವಿಷಾಹಾರ ಇರುವುದು ಪತ್ತೆಯಾಗಿದೆ. ಈ ಸಂಬಂಧ ಕೆಂಪೇಗೌಡ ಆಸ್ಪತ್ರೆಯ ವರದಿಯ ಮಾಹಿತಿ ಹಂಚಿಕೊಂಡ ಪೊಲೀಸರು 'ಧೀರಾಜ್ ಎಂಬ 5 ವರ್ಷದ ಬಾಲಕ ಫುಡ್ ಪಾಯಿಸನ್ ನಿಂದ ಮೃತಪಟ್ಟಿದೆ ಎಂದು MLCಯಿಂದ ತಿಳಿದು ಬಂದಿರುತ್ತದೆ. ಮೃತ ಬಾಲಕನ ತಂದೆ ಬಾಲರಾಜು swiggy ಡೆಲಿವರಿ ಕೆಲಸ ಮಾಡುತ್ತಿರುತ್ತಾರೆ ಹಾಗೂ ತಾಯಿ ನಾಗಲಕ್ಷ್ಮಿ ಗೃಹಿಣಿಯಾಗಿರುತ್ತಾರೆ. ಇವರಿಬ್ಬರೂ ಕೂಡ food poison ನಿಂದ  ICU ನಲ್ಲಿ ಇರುತ್ತಾರೆ. ತಂದೆ-ತಾಯಿಗಳು ಹೇಳಿಕೆ ಕೊಡುವ ಸ್ಥಿತಿಗೆ ಬಂದ ನಂತರ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.

ಬಾಲರಾಜ್ ಕುಟುಂಬದ ಜೊತೆಗೆ ನಾವಿದ್ದೇವೆ ಎಂದ ಸ್ವಿಗ್ಗಿ: ಬೆಂಗಳೂರಿನಲ್ಲಿ ನಡೆದಿರುವ ಅನಿರೀಕ್ಷಿತ ಘಟನೆಯಿಂದ ನಮಗೆ ಆಘಾತ ಉಂಟಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾವು ಆ ಕುಟುಂಬದ ಜೊತೆ ಇರುತ್ತೇವೆ. ನಮ್ಮ ತಂಡವು ಆಸ್ಪತ್ರೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದೆ ಮತ್ತು ಎಲ್ಲಾ ಅಗತ್ಯ ಬೆಂಬಲ ನೀಡಲಿದೆ. ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಇಲಾಖೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ. ಆಹಾರ ಸುರಕ್ಷತೆ ನಮ್ಮ ಮೊದಲ ಆದ್ಯತೆ ಮತ್ತು ನಮ್ಮ ಪ್ಲಾಟ್ ಫಾರ್ಮ್ ನಲ್ಲಿ ಸೇರುವ ಮುನ್ನ ಎಲ್ಲಾ ರೆಸ್ಟೋರೆಂಟ್ ಗಳು ಕಡ್ಡಾಯವಾಗಿ FSSAI ಪರವಾನಗಿ ಪಡೆದುಕೊಳ್ಳಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ಸ್ವಿಗ್ಗಿ ವಕ್ತಾರರು ತಿಳಿಸಿದ್ದಾರೆ.

click me!