
ಬೆಂಗಳೂರು (ಆ.05) ಹಾಲು ಸರಬರಾಜಿಗೆ ಸಂಬಂಧಿಸಿ ದಿನಬಳಕೆ ವಸ್ತು ಗಳ ಆಪ್ ಒಂದರ ನಂಬರ್ ಗೆ ಕರೆ ಮಾಡಿದ 22 ವರ್ಷದ ವಿದ್ಯಾರ್ಥಿನಿ 98 ಸಾವಿರ ರೂ. ವಂಚನೆಗೆ ಒಳಗಾಗಿದ್ದಾರೆ.
ಪದವಿ ಅಧ್ಯಯನ ಮಾಡುತ್ತಿದ್ದ ದೊಮ್ಮಲೂರಿನ ಪಿಜಿಯೊಂದರಲ್ಲಿ ವಾಸವಿದ್ದ ಅಶ್ವಿನಿ(ಹೆಸರು ಬದಲಾಯಿಸಲಾಗಿದೆ) ಹಾಲಿನ ಪ್ಯಾಕೆಟ್ ಒಂದನ್ನು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದಾರೆ. ಜುಲೈ 26 ರಂದು ಆರ್ಡರ್ ಮಾಡಿದ್ದು ಬೆಳಿಗ್ಗೆ 9 ಗಂಟೆಗೆ ಡಿಲೆವರಿ ನೀಡಬೇಕಾಗಿತ್ತು. ಪಿಜಿ ಬಳಿ ಬಂದ ಡಿಲೆವರಿ ಬಾಯ್ ಆಕೆಗೆ ಹತ್ತಾರು ಸಾರಿ ಕರೆ ಮಾಡಿದ್ದಾನೆ. ಆಕೆ ಇನ್ನೊಂದು ಕರೆಯಲ್ಲಿ ಬ್ಯುಸಿ ಇದ್ದ ಕಾರಣ ಸಂಪರ್ಕ ಸಾಧ್ಯವಾಗಿಲ್ಲ.
ಮದುವೆಯಾದ ಮೇಲೂ ನೀನು ಬೇಕೆ ಬೇಕು; ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ!
ಡಿಲೆವರಿ ಬಾಯ್ ಅಲ್ಲಿಂದ ತೆರಳಿದ್ದಾನೆ. ನಂತರ ಕರೆ ಬಂದ ನಂಬರ್ ಗೆ ಯುವತಿ ಕಾಲ್ ಮಾಡಿದ್ದಾಳೆ. ಕಾಲ್ ಡಿಸ್ ಕನೆಕ್ಟ್ ಆಗಿದ್ದು ಹಾಳಿನ ಪ್ಯಾಕೆಟ್ ಡಿಲೆವರಿ ಆಗಿದೆ ಎಂಬ ಮೆಸೇಜ್ ಯುವತಿಗೆ ಕಂಪನಿ ಕಡೆಯಿಂದ ಬಂದಿದೆ.
ಇದಾದ ಮೇಲೆ ಯುವತಿ ಕಸ್ಟಮರ್ ಕೇರ್ ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಕೆಲ ಮಾಹಿತಿ ನೀಡಲು ಕೇಳಿದ್ದಾನೆ. ಲಿಂಕ್ ಕಳುಹಿಸಿ ಕೊಡುತ್ತೇವೆ ಮಾಹಿತಿ ಭರ್ತಿ ಮಾಡಿ ಎಂದಿದ್ದಾನೆ.
ಲಿಂಕ್ ಸ್ವೀಕಾರ ಮಾಡಿದ ನಂತರ ಯುವತಿ ಬ್ಯಾಂಕ್ ಖಾತೆ ವಿವರ ಸೇರಿದಂತೆ ಮಾಹಿತಿ ಭರ್ತಿ ಮಾಡಿದ್ದಾಲೆ ಇದಾಗುವ ವೇಳೆಗೆ ಆಕೆಯ ಖಾತೆಯಿಂದ 98,796 ರೂ. ಮಂಗಮಾಯವಾಗಿದೆ. ಸೈಬರ್ ಅಪರಾಧ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ