Bengaluru Underworld: ಭೂಗತ ಪಾತಕಿಗಳ ಬೆನ್ನುಮೂಳೆ ಮುರಿಯಲು ಸಜ್ಜಾದ DCP ಪಾಂಡೆ

By Suvarna News  |  First Published Jan 12, 2022, 11:21 AM IST

*   ಬೆಂಗಳೂರಲ್ಲಿ ಕ್ರೈಂ ಗ್ಯಾಂಗ್ ವಿಸ್ತರಿಸಲು ಹೊಸ ಹೊಸ ಪ್ಲಾನ್
*   ಅಂಡರ್‌ವರ್ಲ್ಡ್‌ಗೆ ಬ್ರೇಕ್ ಹಾಕಲು ಮುಂದಾದ ಡಿಸಿಪಿ ಹರೀಶ್‌ & ಟೀಂ
*   ಡಿಸಿಪಿ ಹರೀಶ್‌ ಟೀಂಗೆ ಹೆದರಿ ಬೆಂಗಳೂರಿನಿಂದ ಕಾಲ್ಕಿತ್ತ ರೌಡಿಶೀಟರ್‌ಗಳು 


ಬೆಂಗಳೂರು(ಜ.12):  ಬೆಂಗಳೂರು(Bengaluru) ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ(Harish Pandey) ನಗರದ ಪಾತಕ ಲೋಕದ ಪಾಪಿಗಳಿಗೆ ಸಿಂಹ ಸ್ವಪ್ನರಾಗಿದ್ದಾರೆ. ಹೌದು, ನಗರದಲ್ಲಿ ಅಂಡರ್‌ವರ್ಲ್ಡ್‌(Underworld) ಪಾತಕಿಗಳ ಬೆನ್ನುಮೂಳೆ ಮುರಿಯಲೆಂದೇ ಡಿಸಿಪಿ ಹರೀಶ್ ಪಾಂಡೆ ಸಜ್ಜಾಗಿದ್ದಾರೆ. 

ಬೆಂಗಳೂರಿನಲ್ಲಿ ತನ್ನ ಗ್ಯಾಂಗ್ ವಿಸ್ತರಿಸಲು ಹೊಸ ಹೊಸ ಪ್ಲಾನ್‌ಗಳನ್ನ ಮಾಡುತ್ತಲೇ ಬಂದಿದ್ದಾರೆ ರೌಡಿಶೀಟರ್‌ಗಳು(Rowdysheeters). ಜ. 7 ರಂದು ಪ್ರಕರಣವೊಂದನ್ನ ಬೇಧಿಸಿದ್ದ ಡಿಸಿಪಿ ಹರಿಶ್ ಪಾಂಡೆ ತಂಡ ಆಂಧ್ರ ಮೂಲದ ನಾಲ್ವರನ್ನ ಬಂಧಿಸಿದ್ದರು(Arrest) ಯಶಸ್ವಿಯಾಗಿದ್ದರು. ಪೋತಯ್ಯ, ವಂತಲಾ ರಮೇಶ್, ಪಲೇಮ್, ಕೊಂಡಾಜಿ ಪ್ರಸಾದ್ ಆರೋಪಿಗಳನ್ನ ಬಂಧಿಸಿದ ಡಿಸಿಪಿ ಟೀಂ ಬಂಧಿತರಿಂದ 200 ಕೆಜಿ ಗಾಂಜಾವನ್ನ(Marijuana) ವಶಪಡಿಸಿಕೊಂಡಿದ್ದರು‌‌.

Tap to resize

Latest Videos

CCB Raid: ಪರಪ್ಪನ ಅಗ್ರಹಾರ ಜೈಲಲ್ಲಿ ಗಾಂಜಾ..!

ಗಾಂಜಾ ಘಾಟಿಗೂ ಅಂಡರ್‌ವರ್ಲ್ಡ್‌ಗೂ ನಂಟು

ಈ ಸಂಬಂಧ ತನಿಖೆ ಮುಂದುವರೆಸಿದ ಡಿಸಿಪಿ ಹರೀಶ್ ಪಾಂಡೆ ಬೆಂಗಳೂರಿಗೆ ಸಪ್ಲೈ ಆಗುತ್ತಿದ್ದ ಗಾಂಜಾ ಘಾಟಿಗೂ ಅಂಡರ್‌ವರ್ಲ್ಡ್‌ಗೂ ನಂಟು ಬೆಸೆದುಕೊಂಡಿದ್ದನ್ನ ನೋಡಿ ಇದಕ್ಕೆ ಬ್ರೇಕ್ ಹಾಕಲೇ ಬೇಕು ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ. ಅಷ್ಟಕ್ಕೂ 200 ಕೆಜಿ ಗಾಂಜಾ ಘಾಟಲ್ಲಿ ಕೇಳಿ ಬಂದಿರುವ ದಿ ಮೋಸ್ಟ್ ವಾಂಟೆಡ್ ಅಂಡರ್‌ವರ್ಲ್ಡ್‌ ರೌಡಿಶೀಟರ್‌ಗಳಾದ ಕುಳ್ಳ ರಿಸ್ವಾನ್, ಉಲ್ಲಾಳ ಕಾರ್ತಿಕ್, ಸ್ಟಾರ್ ನವೀನ, ಸ್ಟಾರ್ ರಾಹುಲ, ಹಮೀದ್ ಹಾಗೂ ಸನಾವುಲ್ಲಾ ಇವರೆಲ್ರೂ ಸೇರಿಕೊಂಡು ಬೆಂಗಳೂರಿನ ಪಾತಕ ಲೋಕದಲ್ಲಿ ದುಡ್ಡಿನ ದುನಿಯಾವನ್ನೇ ನಿರ್ಮಿಸಲು ಮುಂದಾಗಿದ್ದರು ಕ್ರೈಂನ(Crime)ಕೈಗಂಟಿಸಿಕೊಳ್ಳದೇ ಕುಳಿತಲ್ಲೇ ಕಂತೆ ಕಂತೆ ಹಣ ಎಣಿಸಲು ಮುಂದಾಗಿದ್ದರು ಈ ಖದೀಮರು. 

ಈ ರೌಡಿಶೀಟರ್‌ಗಳು ಗಾಂಜಾದಿಂದ ಬರುವ ಒಂದು ದಿನದ ಆದಾಯ ಕೇಳಿದ್ರೆ ನಿಜಕ್ಕೂ ಶಾಕ್ ಆಗುವಂತಿದೆ. ಹೌದು, ಒಂದು ದಿನದ ಆದಾಯವೇ ಬರೋಬ್ಬರಿ 35 ಲಕ್ಷದಿಂದ 40 ಲಕ್ಷ ರೂ. ಈ ಗಾಂಜಾ ದಂಧೆಯನ್ನ ನಡೆಸಲು ರೌಡಿಶೀಟರ್‌ಗಳು ಬೆಂಗಳೂರಿನ ಏರಿಯಾಗಳನ್ನ ಹಂಚಿಕೊಂಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಕುಳ್ಳ ರಿಸ್ವಾನ್- ಸೌತ್, ನಾರ್ತ್ ಸೆಂಟ್ರಲ್‌ನಲ್ಲಿ ಡಿಸ್ಟಿಬ್ಯೂಷನ್, ಉಲ್ಲಾಳ ಕಾರ್ತಿಕ್- ನಾರ್ತ್ ಹಾಗೂ ನಾರ್ತ್ ಈಸ್ಟ್‌ನಲ್ಲಿ, ಹಮೀದ್ ಹಾಗೂ ಸನಾವುಲ್ಲಾ -ವೆಸ್ಟ್ ಡಿವಿಷನ್, ಸ್ಟಾರ್ ನವೀನ್ ಸ್ಟಾರ್ ರಾಹುಲ್, ಸೌತ್ ಡಿವಿಷನ್ ಸೇರಿದಂತೆ ಬೆಂಗಳೂರು ಡಿಸ್ಟಿಬ್ಯೂಷನ್‌ಗೆ ಈ ಖದೀಮರ ತಂಡ ರೆಡಿಯಾಗಿತ್ತು. 

Fraud: ಗಾಂಜಾ ನಶೆಯಲ್ಲಿ ಪುಂಡಾಟ: 5 ಆಪ್ರಾಪ್ತರು ಪೊಲೀಸರ ವಶಕ್ಕೆ

ಇದರಲ್ಲಿ ರೌಡಿಶೀಟರ್‌ಗಳು ನಿಜಕ್ಕೂ ದೊಡ್ಡ ಪ್ಲಾನ್ ಮಾಡಿಕೊಂಡಿಬಿಟ್ಟಿದ್ದರು. ಅದು ಪಾತಕಲೋಕದಲ್ಲಿ ಆಳ್ವಿಕೆ ಮಾಡಬೇಕಂದ್ರೆ ಒಂದು ಕೋಟಿ ಕೋಟಿ ಹಣ ಇರಬೇಕು. ಮತ್ತೊಂದು ಹೇಳಿದ್ದು ಮಾಡುವಂತಹ ಹುಡುಗರಿರಬೇಕು. ಇಂತಹ ದಂಧೆಗೆ ಸರಿಹೊಂದಿದ್ದು ಇದೇ ಗಾಂಜಾ ದಂಧೆ. ಈ ಗಾಂಜಾ ದಂಧೆಯಲ್ಲಿ(Drugs Racket) ಹಣ ಹಾಗೂ ಹುಡುಗರನ್ನ ಸೆಳೆಯಲು ನಿಂತ ಟೀಂ ನಲ್ಲಿ ಮಾಸ್ಟರ್ ಆಗಿದ್ದಿದ್ದು ಇದೇ ಕುಳ್ಳ ರಿಸ್ವಾನ್. ನಗರದ ಯುವಕರನ್ನ ಟಾರ್ಗೆಟ್ ಮಾಡಿರೋ ಈ ಕುಳ್ಳ ರಿಸ್ವಾನ್ ಗ್ರಾಂಗೆ 500 ರೂ ಫಿಕ್ಸ್ ಮಾಡಿದ್ರೆ ಬೆಂಗಳೂರಿನ ಗಾಂಜಾ ಗಮ್ಮತ್ತಿನಲ್ಲಿ ಯುವಕರನ್ನ ಅಡ್ಡದಾರಿಗೆ ತಳ್ಳೋದು, ಅಂತವರಿಗೆ ಗ್ರಾಂಗೆ  50-100 ರೂ ಗೆ ಮಾರಾಟ ಮಾಡಿ ನನ್ನ ಜೊತೆ ಇದ್ದುಬಿಡು ಎಂದು ಯುವಕರನ್ನ ತನ್ನ ದುಷ್ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ಸದ್ಯ ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್‌ಗಳ ತಲಾಶ್‌ಗೆ ನಿಂತಿರುವ ಡಿಸಿಪಿ ಹರೀಶ್‌ ಟೀಂಗೆ ಹೆದರಿ ಬೆಂಗಳೂರಿನಿಂದ ಕಾಲ್ಕಿತ್ತಿದ್ದಾರೆ. ರೌಡಿ ಶೀಟರ್‌ಗಳ ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದು, ಪರಾರಿಯಾಗಿರುವ ರೌಡಿಶೀಟರ್‌ಗಳಿಗಾಗಿ ವಿಶೇಷ ತಂಡ ರಚನೆ ಮಾಡಿರುವ ಡಿಸಿಪಿ ಹರೀಶ್ ಪಾಂಡೆ ಆರೋಪಿಗಳ ಪತ್ತಾಗಾಗಿ ಶೋಧ ಕಾರ್ಯ ನಡೆಸಿದ್ದಾರೆ.  
 

click me!