ಬೆಂಗಳೂರಿನ ಉದ್ಯಾನವನಗಳು ಮತ್ತು ಜನನಿಬಿಡ ರಸ್ತೆಗಳಲ್ಲಿ ಒಂಟಿ ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಸೆ.11): ಬೆಂಗಳೂರಿನ ಉದ್ಯಾನಗಳು ಹಾಗೂ ಜನನಿಬಿಡ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಮಹಿಳೆಯರು, ಯುವತಿಯರು ಸಿಕ್ಕಿದರೆ ಅವರನ್ನು ಸುಖಾಸುಮ್ಮನೇ ಹತ್ತಿರ ಹೋಗಿ ಮೈ-ಕೈ ಮುಟ್ಟುತ್ತಾನೆ. ಈತನ ಕಿರುಕುಳಕ್ಕೆ ಹಲವು ಮಹಿಳೆಯರು ಬೇಸತ್ತಿದ್ದಾರೆ. ಇನ್ನು ಪೊಲೀಸರಿಗೆ ದೂರು ಕೊಡೋಣವೆಂದರೆ ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಹೇಗೆ ದೂರು ಕೊಡುವುದೆಂದು ಸುಮ್ಮನಾಗುತ್ತಿದ್ದರು. ಆದರೆ, ಇದೀಗ ಪೊಲೀಸರೇ ವಿಕೃತ ಕಾಮುಕನ ಕಿರುಕುಳವನ್ನು ಸಿಸಿಟಿವಿಯಲ್ಲಿ ನೋಡಿ, ಆತನನ್ನು ಬಂಧಿಸಿ ಹೆಡೆಮುರಿಕಟ್ಟಿದ್ದಾರೆ.
ಹೌದು, ಬೆಂಗಳೂರಿನ ಪಾರ್ಕ್, ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರೆ ಇಂತಹ ವಿಕೃತ ಕಾಮುಕನ ಬಗ್ಗೆ ಎಚ್ಚರವಾಗಿರಿ. ಈತ ಒಂಟಿ ಮಹಿಳೆಯರ ಬೆನ್ನತ್ತಿ ನೀಚ ಕೆಲಸ ಮಾಡಿ ಪರಾರಿ ಆಗುತ್ತಾನೆ. ಎಲ್ಲಿಯಾದರೂ ಸರಿ ಒಂಟಿಯಾಗಿ ಯುವತಿಯರು, ಕಾಲೇಜು ಹುಡುಗಿಯರು, ಮಹಿಳೆಯರು ಸಿಕ್ಕಿದರೆ ಸಾಕು ಅವರ ಮೈಮುಟ್ಟಿ ಅಸಭ್ಯವಾಗಿ ವರ್ತನೆ ತೋರುತ್ತಾನೆ. ಇದೀಗ ಈ ವಿಕೃತ ಕಾಮಿಯ ಹಾವಳಿ ಹೆಚ್ಚಾದ ಬೆನ್ನಲ್ಲಿಯೇ ಕಾರ್ಯ ಪ್ರವೃತ್ತರಾದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿಗೆ ಮರ್ಮಾಂಗ ತೋರಿಸಿದ ಫಯಾಜ್ ಪಾಷಾ!
ವಿಕೃತ ಕಾಮಿಯನ್ನು ತಮಿಳುನಾಡು ಮೂಲದ ಪಾಂಡುದೊರೈ ಎಂದು ಗುರುತಿಸಲಾಗಿದೆ. ಈತ ತಮಿಳುನಾಡಿನಿಂದ ಕೆಲಸವನ್ನು ಅರಸಿಕೊಂಡು ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ವಾಸವಾಗಿದ್ದಾನೆ. ಈತ ಕೆಲಸದ ಬಿಡುವಿನ ಸಂದರ್ಭ ಹಾಗೂ ಇತರೆ ಸಮಯದಲ್ಲಿ ಪಾರ್ಕ್ ಮತ್ತು ಇತರೆ ಜನ ನಿಬಿಡ ಸ್ಥಳಗಳಲ್ಲಿ ಸಂಚಾರ ಮಾಡುತ್ತಾ ಸುತ್ತಾಡುತ್ತಾನೆ. ಆಗ ಯಾರಾದರೂ ಒಬ್ಬಂಟಿ ಮಹಿಳೆಯರು, ಯುವತಿಯರು ಸಿಕ್ಕಿದರೆ ಅವರ ಮೈ ಮುಟ್ಟುತ್ತಾನೆ. ಇತ್ತೀಚಿಗೆ ಸಿ.ಕೆ. ಅಚ್ಚುಕಟ್ಟು ವ್ಯಾಪ್ತಿಯ ಪಾರ್ಕ್ ಬಳಿ ಒಬ್ಬಂಟಿ ಮಹಿಳೆಯರಿಗೆ ಮೈ ಮುಟ್ಟಿ ಕಿರುಕುಳ ನೀಡಿದ್ದನು.
ನಂತರ, ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯೊಂದರಲ್ಲಿ ಒಂಟಿಯಾಗಿ ಹೋಗುತ್ತಿದ್ದ ಹುಡುಗಿಗೆ ಟಚ್ ಮಾಡಿ ವಿಕೃತಿ ಮೆರೆದಿದ್ದನು. ಇನ್ನು ಬೆಂಗಳೂರಿನ ವಿವಿಧೆಡೆ ಸಿಸಿಟಿವಿ ಅಳವಡಿಕೆ ಮಾಡಿ ವೀಕ್ಷಣೆ ಮಾಡುವಾಗ ಪೊಲೀಸರಿಗೆ ಈ ಕಾಮುಕನ ಕಿರುಕುಳ ಕಣ್ಣಿಗೆ ಬಿದ್ದಿದೆ. ಇದಾದ ನಂತರ, ಸ್ಥಳೀಯ ಒಬ್ಬಂಟಿ ಮಹಿಳೆಯರು ಕೂಡ ಈತನ ಕರತ್ತದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮಹಿಳೆಯರ ದೂರನ್ನು ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿ ಪಾಂಡುದೊರೈ ಅನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇದೇ ರೀತಿ ಈ ಹಿಂದೆ ಕೃತ್ಯ ಎಸಗಿರುವ ಶಂಕೆಯಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋಲಾರದ ಕಾಮುಕ ಶಿಕ್ಷಕನ ಮೊಬೈಲಲ್ಲಿ ಹೆಣ್ಮಕ್ಕಳ 5000ಕ್ಕೂ ಹೆಚ್ಚು ನಗ್ನ ದೃಶ್ಯಗಳು!