ಬೆಂಗಳೂರು:  'ನಿಮಗೆ ಕಾರು ಬಂದಿದೆ' ಮಾತು ನಂಬಿದ ಹಿರಿಯ ನಾಗರಿಕನಿಗೆ ಮಹಾಮೋಸ

By Suvarna NewsFirst Published Jul 31, 2020, 2:47 PM IST
Highlights

ನಕಲಿ ಆನ್ ಲೈನ್ ತಾಣದ ಮಾತು ನಂಬಿ ಹಣ ಕಳೆದುಕೊಂಡ ವೃದ್ಧ/  ಲಕ್ಕಿ ಡ್ರಾ ಮೂಲಕ XUV 500 ಕಾರ್ ಬಹುಮಾನವಾಗಿ ಬಂದಿದೆ ಎಂಬ ಪೋಸ್ಟ್  ನಂಬಿದ ಶ್ರೀನಾಥ್/ ಟ್ಯಾಕ್ಸ್ ಎಂದು ಹಂತಹಂತವಾಗಿ ಹಣ ಹಾಕಿಸಿಕೊಂಡ ಆಸಾಮಿ

ಬೆಂಗಳೂರು(ಜು. 31)  ಕಾರಿನ ಆಸೆಗೆ ಬಿದ್ದು ವೃದ್ಧರೊಬ್ಬರು ಸಾವಿರಾರು ರೂ. ಕಳೆದುಕೊಂಡಿದ್ದಾರೆ.  ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿ ಶ್ರೀನಾಥ್ (76) ಮೋಸ ಹೋಗಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ Naaptol Online Shopping pvt ltd ಮಾಡಿದ್ದ ಪೋಸ್ಟ್ ನಂಬಿ ಹಣ ಕಳೆದುಕೊಂಡಿದ್ದಾರೆ. ಲಕ್ಕಿ ಡ್ರಾ ಮೂಲಕ XUV 500 ಕಾರ್ ಬಹುಮಾನವಾಗಿ ಬಂದಿದೆ ಎಂಬ ಪೋಸ್ಟ್  ನಂಬಿದ್ದಾರೆ.

ಫೋಸ್ಟ್ ನೋಡಿ ಅದರಲ್ಲಿದ್ದ 9432157469 ನಂಬರ್ ಕರೆ ಮಾಡಿದ್ದ ಶ್ರೀನಾಥ್ ಗೆ  ಆ ಕಡೆಯಿಂದ ಮಾತನಾಡಿದ ವ್ಯಕ್ತಿ ನೀವು ಬಹುಮಾನ ಪಡೆದುಕೊಳ್ಳಲು ಟ್ಯಾಕ್ಸ್ ಪೇ ಮಾಡಬೇಕು ಅಂದಿದ್ದ. ಅದನ್ನ ನಂಬಿ ಆನ್ ಲೈನ್ ಬ್ಯಾಂಕ್ ಮೂಲಕ ಹಂತ ಹಂತವಾಗಿ ಹಣ ಜಮಾ ಮಾಡಿದ್ದರು. 59 ಸಾವಿರದ 200 ರೂಪಾಯಿಗಳನ್ನು ಅಪರಿಚಿತನ ಅಕೌಂಟ್ ಗೆ ಜಮಾಮಾಡಿದ್ದಾರೆ.

ಗೂಗಲ್ ಪೇ ಬಳಕೆದಾರರೆ ಎಚ್ಚರ, ನಿಮಗೂ ಇಂಥ ನಕಲಿ ಕರೆ ಬರಬಹುದು!

ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೋಸ ಹೋಗಿರೋದು  ಗೊತ್ತಾಗಿದೆ. ಬಹುಮಾನ ಬಂದಿದೆ ಎಂದು ವಂಚಿಸಿದ ಅಪರಿಚಿತನ ವಿರುದ್ಧ FIR ದಾಖಲಿಸಲಾಗಿದೆ.

ಸೌತ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆದಿದೆ. ಇತ್ತ ಕಾರು ಬರುತ್ತೆ ಅಂಥ ಕುಟುಂಬಸ್ಥರೆಲ್ಲರಿಗೂ ತಿಳಿಸಿದ್ದ ಶ್ರೀನಾಥ್ ಆರೋಗ್ಯದಲ್ಲೂ ಏರುಪೇರಾಗಿದೆ.

click me!