ಬೆಂಗಳೂರು: ಕುಖ್ಯಾತ ಕಳ್ಳನ ಬಂಧನ, 7 ಬೈಕ್‌ ವಶ

By Kannadaprabha News  |  First Published Jul 31, 2020, 8:09 AM IST

ಪಾರ್ಕಿಂಗ್‌ ಸ್ಥಳ, ಮನೆ ಹಾಗೂ ಕಚೇರಿಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳ ಲಾಕ್‌ ಬ್ರೇಕ್‌ ಮಾಡಿ ಕಳವು ಮಾಡುತ್ತಿದ್ದ ಕಳ್ಳ|ಈ ಕಳವು ಬೈಕ್‌ಗಳ ನೋಂದಣಿ ಸಂಖ್ಯೆ, ಎಂಜಿನ್‌ ಮತ್ತು ಚಾಸಿ ನಂಬರ್‌ ಬದಲಾಯಿಸಿ, ನಕಲಿ ಆರ್‌ಸಿ ಬುಕ್‌ ಸಿದ್ಧಪಡಿಸಿ .5-10 ಸಾವಿರಗಳಿಗೆ ಜನರಿಗೆ ಮಾರಾಟ ಮಾಡುತ್ತಿದ್ದರು ಖದೀಮರು|


ಬೆಂಗಳೂರು(ಜು.31):  ಸಾರ್ವಜನಿಕ ಸ್ಥಳಗಳು ಹಾಗೂ ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಕುಖ್ಯಾತ ಖದೀಮನೊಬ್ಬ ಸಿಸಿಬಿ ಬಲೆಗೆ ಬಿದ್ದಿದ್ದಾನೆ.

ಶಿವಾಜಿನಗರದ ಸಯ್ಯದ್‌ ತಬ್ರೇಜ್‌ ಪಾಷಾ ಅಲಿಯಾಸ್‌ ಸಿತಾರಾ ಬಂಧಿತನಾಗಿದ್ದು, ಆರೋಪಿಯಿಂದ 7 ಬೈಕ್‌ ಜಪ್ತಿ ಮಾಡಲಾಗಿದೆ. ತಪ್ಪಿಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಾದ ವೀಲರ್‌ ಷರೀಫ್‌ ಮತ್ತು ಕುಲ್ಮಿ ಮೌಲಾ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ನಗರದಲ್ಲಿ ವಿವಿಧೆಡೆ ಬೈಕ್‌ ಕಳ್ಳತನಗಳಾಗಿದ್ದವು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಯನ್ನು ಸೆರೆ ಹಿಡಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tap to resize

Latest Videos

ನಾಯಿ ಮರಿ ಮಾರಾಟದ ನೆಪದಲ್ಲಿ ವಂಚನೆ: ವ್ಯಕ್ತಿಗೆ ಟೋಪಿ ಹಾಕಿದ ಕಳ್ಳರು..!

ದಶಕದಿಂದ ತಬ್ರೇಜ್‌ ವೃತ್ತಿಪರ ಬೈಕ್‌ ಕಳ್ಳನಾಗಿದ್ದು, ಪಾರ್ಕಿಂಗ್‌ ಸ್ಥಳ, ಮನೆ ಹಾಗೂ ಕಚೇರಿಗಳ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳ ಲಾಕ್‌ ಬ್ರೇಕ್‌ ಮಾಡಿ ಕಳವು ಮಾಡುತ್ತಿದ್ದ. ಬಳಿಕ ಈ ಕಳವು ಬೈಕ್‌ಗಳ ನೋಂದಣಿ ಸಂಖ್ಯೆ, ಎಂಜಿನ್‌ ಮತ್ತು ಚಾಸಿ ನಂಬರ್‌ ಬದಲಾಯಿಸಿ, ನಕಲಿ ಆರ್‌ಸಿ ಬುಕ್‌ ಸಿದ್ಧಪಡಿಸಿ .5-10 ಸಾವಿರಗಳಿಗೆ ಜನರಿಗೆ ಮಾರಾಟ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!