
ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು
ಬೆಂಗಳೂರು (ನ.13): ಆತ ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್, ಒಳ್ಳೆ ಕೆಲಸ, ಕೈ ತುಂಬ ಸಂಬಳ ಇದ್ರೂ ತಾಳ್ಮೆ ಮಾತ್ರ ಇರಲಿಲ್ಲ. ರಸ್ತೆಯಲ್ಲಿ ಉಂಟಾದ ರೋಡ್ ರೇಜ್ ಗಲಾಟೆಗೆ ಕಿರಿಕ್ ಮಾಡಿಕೊಂಡ ಆತ, ದಂಪತಿ ಮೇಲೆ ಕ್ರೂರ ಕಣ್ಣು ಬಿಟ್ಟು ಈಗ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ.
ಕೋಪದ ಕೈಗೆ ಬುದ್ದಿ ಕೊಟ್ರೇ ಏನಾಗುತ್ತೆ ಅನ್ನೋದಕ್ಕೆ ಈ ಸಾಫ್ಟ್ ವೇರ್ ಇಂಜಿನಿಯರ್ ಉತ್ತಮ ಉದಾಹರಣೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಉಂಟಾದ ಸಣ್ಣ ಕಿರಿಕ್ ನಿಂದ ಕುಪಿತಗೊಂಡ ಈತ, ಮೂರು ಜೀವಗಳ ಜೊತೆ ಚೆಲ್ಲಾಟವಾಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಂದಹಾಗೇ ಈ ಸಾಪ್ಟ್ ವೇರ್ ಇಂಜಿನಿಯರ್ ಹೆಸರು ಸುಕ್ರುತ್ ಕೇಶವ್. ನಗರದ ಕೊಡಿಗೇಹಳ್ಳಿ ನಿವಾಸಿಯಾದ ಅಕ್ಟೋಬರ್ 26 ರಂದು ಹಿಟ್ ಆಂಡ್ ರನ್ ಎಸಗಿ ಪರಾರಿಯಾಗಿದ್ದ. ಬಳಿಕ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಟೆಕ್ಕಿಯ ಅಸಲಿ ಮುಖ ಬಯಲಾಗಿದೆ.
ಅಂದಹಾಗೇ ಈ ಟೆಕ್ಕಿ ಸುಕ್ರುತ್ ಕೇಶವ್ ಅಕ್ಟೋಬರ್ 26ರ ರಾತ್ರಿ ತನ್ನ ಟಾಟಾ ಕರ್ವ್ ಕಾರಿನಲ್ಲಿ ಡಾಲರ್ಸ್ ಕಾಲೋನಿಯ 80 ಅಡಿ ರಸ್ತೆಯಲ್ಲಿ ಬರ್ತಿದ್ದ. ರಾಮಯ್ಯ ಸಿಗ್ನಲ್ ನ ಫ್ರೀ ಲೆಫ್ಟ್ ಜಾಗದಲ್ಲಿ ಕಾರು ನಿಲ್ಲಿಸಿದ್ದಾನೆ. ಈ ವೇಳೆ ದಂಪತಿಗಳು ತಮ್ಮ ಮಗನ ಜೊತೆ ಬೈಕ್ ನಲ್ಲಿ ಬಂದು ಕಾರಿನ ಹಿಂದೆ ನಿಂತಿದ್ದಾರೆ. ಫ್ರೀ ಲೆಪ್ಟ್ ನೋಡಿ ಬೈಕ್ ಸವಾರ ಪದೇ ಪದೇ ಹಾರ್ನ್ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಸುಕ್ರುತ್ ಕೇಶವ್ ಬೈಕ್ ಸವಾರನ ಜೊತೆ ಕಿರಿಕ್ ಮಾಡಿದ್ದಾರೆ. ನಂತರ ಕಾರನ್ನ ಸದಾಶಿವನಗರ ಠಾಣೆಗೆ ದಾರಿಗೆ ತಿರುಗಿಸಿ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದಾನೆ. ಬೈಕ್ ಕಾರನ್ನ ಕ್ರಾಸ್ ಮಾಡಿ ಮುಂದೆ ಬರ್ತಿದ್ದಂತೆ, ಕಾರಿನಲ್ಲಿ ವೇಗವಾಗಿ ಬಂದು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಮತ್ತು ಇಬ್ಬರು ಸವಾರರು ರಸ್ತೆ ದಾಟಿ ಇನ್ನೊಂದು ಬದಿಗೆ ಬಿದ್ದಿದ್ರೆ, ಪುಟ್ಟ ಮಗು ರಸ್ತೆಯಲ್ಲಿ ಬಿದ್ದಿದ್ದೆ. ರಸ್ತೆ ಅಪಘಾತವಾಗಿದ್ರು ಆರೋಪಿ ಸುಕ್ರುತ್ ಸೌಜನ್ಯಕ್ಕು ಕಾರು ನಿಲ್ಲಿಸದೇ ಎಸ್ಕೇಪ್ ಆಗಿದ್ದಾನೆ.
ಅಪಘಾತದ ಬಗ್ಗೆ ಸದಾಶಿವನಗರ ಸಂಚಾರ ಪೊಲೀಸರು ಹಿಟ್ ಅಂಡ್ ರನ್ ಕೇಸ್ ದಾಖಲಿಸಿ ತನಿಖೆ ಶುರು ಮಾಡಿದ್ದರು. ಸಿಸಿಟಿವಿಗಳ ಪರಿಶೀಲನೆ ವೇಳೆ ಕಾರು ಉದ್ದೇಶಪೂರ್ವಕವಾಗಿ ಗುದ್ದಿರುವುದು ಗೊತ್ತಾಗಿ, ಕೇಸನ್ನ ಕಾನೂನು ಸುವ್ಯವಸ್ಥೆ ಠಾಣೆಗೆ ವರ್ಗಾಯಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿ ನೋಡಿ ತಿಂಡ್ಲು ಬಳಿ ಕಾರು ಮತ್ತು ಸುಕ್ರುತ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ರೋಡ್ ರೇಜ್ ಬಗ್ಗೆ ಬಾಯ್ಬಿಟ್ಟ ಆರೋಪಿ ಸ್ನೇಹಿತನ ಜೊತೆ ಇಂದಿರಾನಗರಕ್ಕೆ ಹೋಗುತ್ತಿದೆ ಈ ವೇಳೆ ಕಿರಿಕ್ ಆಗಿ ಗಲಾಟೆಯಾಗಿದೆ ಎಂದಿದ್ದಾನೆ.
ಸದ್ಯ ಈ ಬಗ್ಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಸಾಪ್ಟ್ ವೇರ್ ಇಂಜಿನಿಯರ್ ಬಂಧಿಸಿ ಜೈಲಿಗಟ್ಟಿದ್ದಾರೆ. ಈತ್ತ ಘಟನೆಯಲ್ಲಿ ಗಾಯಗೊಂಡಿದ್ದ ದಂಪತಿ ಮತ್ತು ಮಗು ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಅದೇನೇ ಇರಲಿ ಒಂದು ಕ್ಷಣ ತಾಳ್ಮೆಯಿಂದ ವರ್ತಿಸಿದ್ದರೆ ಈ ಟೆಕ್ಕಿ ಜೈಲು ಸೇರುವ ಗಂಡಾಂತರದಿಂದ ಪಾರಾಗಬಹುದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ