
ಕಾರವಾರ ಉತ್ತರಕನ್ನಡ (ನ.12): ಡಿಸ್ಕೌಂಟ್ ಆಫರ್ ಆಮಿಷ ತೋರಿಸಿ 300 ಜನರಿಗೆ ಪಂಗನಾಮ ಹಾಕಿದ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಎಮ್.ಗಣೇಶನ್ (52), ಸೌತ್ ಸ್ಟ್ರೀಟ್ ರಾಜಾಮಡಂ ನ ತ್ಯಾಗರಾಜನ್ (65) ,ಅನಸಾಲ ಸ್ಟ್ರೀಟ್ ನ ಮೈಯನಾದನ್(42) ಬಂಧಿತ ಆರೋಪಿಗಳು. ಮೂವರು ತಮಿಳುನಾಡು ಮೂಲದವರಾಗಿದ್ದಾರೆ. ವಂಚಸಿದ ಒಂದು ವಾರದೊಳಗೆ ಮೂವರು ಆರೋಪಿಗಳನ್ನ ಬಂಧಿಸಿದ ಪೊಲೀಸರು.
ಭಟ್ಕಳ ನಗರದಲ್ಲಿ 'ಗ್ಲೋಬಲ್ ಎಂಟರ್ ಪ್ರೈಸಸ್' ಎಂಬ ಹೆಸರಿನ ಮಳಿಗೆಯನ್ನು ತೆರೆದು, 10 ರಿಂದ 40 ರಷ್ಟು ಡಿಸ್ಕೌಂಟ್ ನೀಡುವುದಾಗಿ ಆಕರ್ಷಕ ಆಫರ್‌ಗಳನ್ನು ಘೋಷಿಸಿದ್ದ ಆರೋಪಿಗಳು, ಮುನ್ನೂರಕ್ಕೂ ಹೆಚ್ಚು ಗ್ರಾಹಕರಿಂದ ಮುಂಗಡ ಹಣವಾಗಿ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದರು. ಬಳಿಕ ಶಾಪ್ ಬಂದ್ ಮಾಡಿ ಎಸ್ಕೇಪ್ ಆಗಿದ್ದ ಗ್ಯಾಂಗ್. ವಂಚನೆ ಪ್ರಕರಣ ಸಂಬಂಧ ಪಟ್ಟಣದ ನಿವಾಸಿ ಮಹ್ಮದ್ ಸವೂದ್ ತಮ್ಮ ಹಣವನ್ನು ದೋಚಿ ಹೋಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಭಟ್ಕಳ ಶಹರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಭಟ್ಕಳ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್‌ಐ ನವೀನ್ ನಾಯ್ಕ್ ನೇತೃತ್ವದ ತಂಡ ಆರೋಪಿಗಳ ಬೆನ್ನುಹತ್ತಿದ್ದರು. ಘಟನೆಯ ನಂತರ ಕೇವಲ ಒಂದು ವಾರದೊಳಗೆ ಭಟ್ಕಳ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ