Bengaluru Rape: ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಯತ್ನ: ಪಾರ್ಟಿ ಕೊಡಿಸೋ ನೆಪದಲ್ಲಿ ಕುಕೃತ್ಯ

Published : Feb 07, 2023, 12:57 PM IST
Bengaluru Rape: ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಯತ್ನ: ಪಾರ್ಟಿ ಕೊಡಿಸೋ ನೆಪದಲ್ಲಿ ಕುಕೃತ್ಯ

ಸಾರಾಂಶ

ಕಾಶ್ಮೀರದಿಂದ ಕೆಲಸಕ್ಕೆ ಆಗಮಿಸಿದ್ದ ಯುವತಿಯರ ಮೇಲೆ ಅತ್ಯಾಚಾರ ಯತ್ನ ಪಾರ್ಟಿ ಕೊಡಿಸುವುದಾಗಿ ಮನೆಗೆ ಕರೆದು ಕೃತ್ಯ ಎಸಗಿದ ಆರೋಪಿಗಳು ಬಾತ್‌ ರೂಮ್‌ನಲ್ಲಿ ಕುಳಿತುಕೊಂಡು ಬಚಾವಾದ ಯುವತಿ

ಬೆಂಗಳೂರು (ಫೆ.07): ಕಾಶ್ಮೀರದಿಂದ ದುಡಿಮೆಗಾಗಿ ಬಂದು ಬೆಂಗಳೂರಿನ ವಿವೇಕ್ ನಗರದಲ್ಲಿ ವಾಸವಾಗಿದ್ದ ಕಾಶ್ಮೀರ ಮೂಲದ ಯುವತಿಯರ ಮೇಲೆ‌ ಅತ್ಯಾಚಾರ ಯತ್ನ ಮಾಡಲಾಗಿದೆ. ಪಾರ್ಟಿ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕಾಶ್ಮೀರದ ಇಬ್ಬರು ಯುವತಿಯರು ಹಾಗೂ ಇಬ್ಬರು ಯುವಕರು ಪಂಜಾಬ್‌ ಮೂಲಕ ಜಲಂದರ್‌ ಖಾಸಗಿ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿದ್ದರು. ಈಗ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳ ಸ್ನೇಹದಿಂದಾಗಿ ಪಾರ್ಟಿ, ಸ್ನೇಹಕೂಟ, ಟ್ರಿಪ್‌ ಎಲ್ಲವೂ ಸಾಮಾನ್ಯವಾಗಿ ನಡೆಯುತ್ತಿವೆ. ಆದರೆ, ಈ ಬಾರಿ ಇಬ್ಬರೂ ಯುವಕರುಕಾಶ್ಮೀರದ ಯುವತಿಯರನ್ನು ಹೇಗಾದರೂ ಮಾಡಿ ಅತ್ಯಾಚಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಪಾರ್ಟಿ ಕೊಡಿಸುವುದಾಗಿ ಮನೆಗೆ ಕರೆದಿದ್ದಾರೆ. ಮಧ್ಯರಾತ್ರಿವರೆಗೂ ಎಣ್ಣೆ ಮಾರ್ಟಿಯನ್ನೂ ಮಾಡಿದ್ದಾರೆ. ನಂತರ ಅತ್ಯಾಚಾರದ ಪ್ರಯತ್ನ ಘಟನೆ ನಡೆದಿದೆ.

ಕೈ ಕಾಲುಗಳನ್ನು ಕಟ್ಟಿಹಾಕಿ 14 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಕಾಮುಕರ ಬಂಧನ

ಪಾರ್ಟಿ ಕೊಡಿಸುವುದಾಗಿ ಕರೆದು ಕುಕೃತ್ಯ: ಖಾಸಗಿ ಕಂಪನಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರಿಂದ ಯುವಕರು ಕರೆ ಮಾಡಿ ಪಾರ್ಟಿ ಕೊಡಿಸುವುದಾಗಿ ಹೇಳಿದ್ದರಿಂದ ಅಲ್ಲಿಗೆ ಹೋಗಿದ್ದಾರೆ. ಅಲ್ಲಿಗೆ ಹೋದ ಇಬ್ಬರು ಯುವತಿಯರು ಸೇರಿಕೊಂಡು ನಾಲ್ವರು ಮಧ್ಯರಾತ್ರಿವರೆಗೂ ಎಣ್ಣೆ ಪಾರ್ಟಿ ಮಾಡಿದ್ದಾರೆ. ನಂತರ ಯಿವತಿಯರ ಮೇಲೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಅವರಿಬ್ಬರೂ ತಮಗಿಬ್ಬರು ಎಂದು ಹಂಚಿಕೊಂಡು ತಲಾ ಒಬ್ಬೊಬ್ಬರ ಮೇಲೆ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾರೆ. ಈ ವೇಲೆ ಒಬ್ಬ ಯುವತಿ ತಪ್ಪಿಸಿಕೊಂಡು ಬಾತ್ ರೂಂ ಸೇರಿಕೊಂಡಿದ್ದಳು. ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ‌ ಯತ್ನ ನಡೆದಾಗ ಕೂಗಿಕೊಂಡು ತಪ್ಪಿಸಿಕೊಂಡಿದ್ದಾಳೆ. 

ಇಬ್ಬರು ಆರೋಪಿಗಳ ಬಂಧನ: ಈ ಘಟನೆಯ ಕುರಿತು ಅತ್ಯಾಚಾರಕ್ಕೆ ಯತ್ನ ಮಾಡಿದ ಯುವಕರ ಮೇಲೆ ನಿನ್ನೆ ಬೆಳಗ್ಗೆ ವಿವೇಕನಗರ ಠಾಣೆಗೆ ದೂರು ದಾಖಲು ಮಾಡಿದ್ದಾಳೆ. ಈ ಕುರಿತಂತೆ ಆರೋಪಿಗಳಾದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಘಟನೆಯಿಂದ ಸುತ್ತಲಿನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಜೊತೆಗೆ ಯುವಕ- ಯುವತಿಯರು ಸೇರಿಕೊಂಡು ಪಾರ್ಟಿ ಮಾಡುವಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಇರುವ ಯುವತಿಯರು ತಮ್ಮ ಸಹ ಸಿಬ್ಬಂದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಬುದ್ಧಿವಾದ ಹೇಳಿದ್ದಾರೆ.

ಖತರ್ನಾಕ್ ಚೈನ್ ಸ್ನಾಚರ್ ಬಂಧನ: 
ಬೆಂಗಳೂರು (ಫೆ.07): ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಇಂಟಿಯಾಗಿ ಸಂಚರಿಸುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಅವರ ಕತ್ತಿನಲ್ಲಿರುವ ಸರಗಳನ್ನು ಕದಿಯುತ್ತಿದ್ದ ಪದ್ಮಾನಾಭ @ ಗೂಳಿ ಗುಂಡನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಫೆ.2 ರಂದು ಬನಶಂಕರಿ ರಾಘವೇಂದ್ರ ದೇವಸ್ಥಾನ ಬಳಿ‌ ಸುನಂದ ಎಂಬ ಮಹಿಳೆಯನ್ನ ಅಡ್ಡಗಟ್ಟಿದ್ದನು. ಈ ವೇಳೆ ಮರದ ರಿಪೀಸ್‌ (ಮರದ ತುಂಡು) ನಿಂದ ಹಲ್ಲೆ ಮಾಡಿ ಮಹಿಳೆಬಳಿಯಿದ್ದ ಮಾಂಗಲ್ಯ ಸರವನ್ನ ಕಿತ್ತು ಪಾರರಿಯಾಗಿದ್ದನು. ಈ ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿದ ದೂರು ದಾಖಲಿಸಲಾಗಿತ್ತು. 

ರೇಪ್‌ ಮಾಡಲು ಯತ್ನಿಸಿದ ಪಾಪಿಯ ತುಟಿಯನ್ನೇ ಕಚ್ಚಿ ಕತ್ತರಿಸಿ ಬಚಾವ್ ಆದ ಯುವತಿ!

2 ಲಕ್ಷ ರೂ. ಬೆಲೆಬಾಳುವ ಮಾಂಗಲ್ಯಸರ ವಶ: ಮಹಿಳೆಯ ಮಾಂಗಲ್ಯ ಸರವನ್ನು ದರೋಡೆ ಮಾಡಿದ್ದ ಗೂಳಿ ಗಂಡನ ಬಗ್ಗೆ ಸಿಸಿಟಿವಿ ಆಧರಿಸಿ ಪತ್ತೆ ಮಾಡಿದ್ದಾರೆ. ನಂತರ, ಅವನನ್ನು ವಶಕ್ಕೆ ಪಡೆದು ಜೈಲಿಗಟ್ಟಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಬನಶಂಕರಿ‌ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಗಿರಿನಗರ, ತಿಲಕ ನಗರ, ಬಸವನಗುಡಿ, ಸಿಕೆ ಅಚ್ಚುಕಟ್ಟು, ಜಯನಗರದ ಸೇರಿದಂತೆ ಹಲವು ಠಾಣಾ ಪ್ರಕರಣಗಳಲ್ಲಿ ಆರೋಪಿ ಬೇಕಾಗಿದ್ದಾನೆ. ಬಂಧಿತ ಆರೋಪಿಯಿಂದ 2 ಲಕ್ಷ ರೂ. ಬೆಲೆಬಾಳುವ 40 ಗ್ರಾಂ ಮಾಂಗಲ್ಯಸರ ವಶಕ್ಕೆ ಪಡೆಯಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್