'ಕೆನ್ನೆಗೆ ಬಾರಿಸುತ್ತೇನೆ' ಮಾಸ್ಕ್ ಹಾಕೊಳ್ಳಿ ಎಂದಿದ್ದಕ್ಕೆ ನಿವೃತ್ತ ಮಹಿಳಾ ಅಧಿಕಾರಿ ದರ್ಪ

By Suvarna News  |  First Published Nov 29, 2020, 10:56 PM IST

ಮಾಸ್ಕ್ ಧರಿಸಿ ಎಂದು ಕೇಳಿಕೊಂಡ ಪೊಲೀಸ್ ಅಧಿಕಾರಿಗಳಿಗೆ ನಿವೃತ್ತ ಅಧಿಕಾರಿ ಧಮ್ಕಿ/ ನಾನು ಯಾರೂ ಗೊತ್ತಾ, ನಿಮ್ಮ ಕೆನ್ನೆಗೆ ಬಾರಿಸುತ್ತೇನೆ ಎಂದ ನಿವೃತ್ತ ತೆರಿಗೆ ಅಧಿಕಾರಿ/ ಅಹಮದಾಬಾದ್ ಘಟನೆ ಸೋಶಿಯಲ್ ಮೀಡಿಯಾದಲ್ಲಿಯೂ ಚರ್ಚೆ


ಅಹಮದಾಬಾದ್(ನ.  29)  ಒಂದು ಕಡೆ ಇಡೀ ದೇಶವೇ ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಲಸಿಕೆ ತಯಾರಿಕೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಜನರು ಮಾತ್ರ ಕ್ಯಾರೇ ಎನ್ನದೆ ವ್ಯವಹರಿಸುತ್ತಿದ್ದಾರೆ.

ನಿವೃತ್ತ ಮಹಿಳಾ ಅಧಿಕಾರಿಯೊಬ್ಬರಿಗೆ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಕೆ ಆಕೆ ಪೊಲೀಸರಿಗೆ ಬೆದರಿಕೆ ಹಾಕಿದ್ದು ನಾನು ಯಾರು ಗೊತ್ತಾ ಎಂದು ದಬಾಯಿಸಿದ್ದಾಳೆ.

Latest Videos

undefined

'ಮಾಸ್ಕ್ ಹಾಕಲ್ಲ.. ಏನ್ ಮಾಡ್ತೀಯಾ ಮಾಡು' ಬೆಂಗಳೂರು ಮಹಿಳೆ ಬೀದಿ ರಂಪ

ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು ನಿವೃತ್ತಿಯಾಗಿರುವ ರೀತಾ ಪಟೇಲ್(68)  ಮಗ ಸೊಸೆಯೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಅಹಮದಾಬಾದ್ ನ ನಿರ್ಮಾ ವಿಶ್ವವಿದ್ಯಾನಿಲಯ ಬಳಿ ಅವರ ಕಾರನ್ನು ತಪಾಸಣೆಗೆ ಒಳಪಡಿಸಲಾಯಿತು. ಮಗ-ಸೊಸೆ ಮಾಸ್ಕ್ ಹಾಕಿದ್ದರೂ ಈಕೆ ಧರಿಸಿರಲಿಲ್ಲ. ಇದನ್ನು ಕಂಡ ಪೊಲೀಸರು ಪ್ರಶ್ನೆ ಮಾಡಿ ಮಾಸ್ಕ್ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ನನ್ನನ್ನು ಪ್ರಶ್ನೆ ಮಾಡಿದರೆ ಕೆನ್ನೆಗೆ ಬಾರಿಸುತ್ತೇನೆ ಎಂದು ಮಹಿಳೆ ಅವಾಜ್ ಹಾಕಿದ್ದಾರೆ.

ಬೆಂಗಳೂರಿನಲ್ಲಿಯೂ ಇಂಥದ್ದೆ ಪ್ರಕರಣ ವರದಿಯಾಗಿತ್ತು. ಮಾರ್ಷಲ್ ಗಳು ಮಾಸ್ಕ್ ಹಾಕಿಕೊಳ್ಳಿ ಎಂದು  ಕೇಳಿದ್ದಕ್ಕೆ ಜಯನಗರದಲ್ಲಿ ಮಹಿಳೆಯೊಬ್ಬರು ಧಮ್ಕಿ ಹಾಕಿದ್ದರು. 

 

click me!