Bengaluru: ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿದ ಪೊಲೀಸ್‌ ಇನ್ಫಾರ್ಮರ್‌ಗಳು

Published : Jul 24, 2023, 05:52 PM IST
Bengaluru: ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿದ ಪೊಲೀಸ್‌ ಇನ್ಫಾರ್ಮರ್‌ಗಳು

ಸಾರಾಂಶ

ಗಾಂಜಾ ಜಾಲದ ಬಗ್ಗೆ ಮಾಹಿತಿ ನೀಡ್ತೇವೆಂದು, ಪೊಲೀಸರ ಹೆಸರೇಳಿಕೊಂಡು ವಿದ್ಯಾರ್ಥಿಗಳಿಂದಲೇ ಲಕ್ಷಾಂತರ ಹಣ ವಸೂಲಿ ಮಾಡಿದ ಕಿರಾತಕರು ಈಗ ಜೈಲು ಪಾಲಾಗಿದ್ದಾರೆ.

ಬೆಂಗಳೂರು (ಜು.24): ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ಹಾಗೂ ಕ್ಲಬ್‌, ಪಬ್‌ಗಳಲ್ಲಿ ಗಾಂಜಾ ಸೇವನೆ ವ್ಯಾಪಕವಾಗಿ ನಡೆಯುತ್ತದೆ ಎಂಬು ದೂರುಗಳು ಆಗಿಂದ್ದಾಗ್ಗೆ ಕೇಳಿಬರುತ್ತಲೇ ಇವೆ. ಹೀಗಾಗಿ, ಡ್ರಗ್ಸ್‌ ಜಾಲವನ್ನು ಬೇಧಿಸಲು ನಿಯೋಜನೆ ಮಾಡಲಾದ ಪೊಲೀಸ್‌ ಇನ್ಫಾರ್ಮರ್‌ಗಳಿಂದಲೇ ಗಾಂಜಾ ಸೇವನೆ ಮಾಡಿದ ವಿದ್ಯಾರ್ಥಿಗಳನ್ನು ಹಿಡಿದು ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡಿದ್ದಾರೆ. 

ರಾಜ್ಯದಲ್ಲಿ ಡ್ರಗ್ಸ್‌ ಮತ್ತು ಗಾಂಜಾ ಮಾರಾಟ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಇದಕ್ಕೆ ಪೂರಕವೆಂಬಂತೆ ಬೆಂಗಳುರು ನಗರ ಪೊಲೀಸರು ಡ್ರಗ್ಸ್‌ ಜಾಲದ ನಿಯಂತ್ರಣಕ್ಕಾಗಿ ಕೆಲವರನ್ನು ಇನ್ಫಾರ್ಮರ್‌ಗಳಾನಿ ನಿಯೋಜನೆ ಮಾಡಿದ್ದಾರೆ. ಹೀಗೆ, ಪೊಲೀಸರಿಂದ ನಿಯೋಜನೆಗೊಂಡ ಇನ್ಫಾರ್ಮರ್‌ಗಳೇ ಡ್ರಗ್ಸ್‌ ಸೇವನೆ ಮಾಡಿದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿ ಅವರಿಂದಲೇ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡಿದ್ದಾರೆ. ಒಂದು ಪ್ರಕರಣದಲ್ಲಿ 1.70 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾರೆ. 

Bengaluru: ಹಿಂದೆ ಬಿದ್ರೂ ಪ್ರೀತಿ ನಿರಾಕರಿಸಿದ ಯುವತಿ: ಡೆತ್‌ನೋಟ್‌ ಬರೆದು ಆತ್ಮಹತ್ಯೆಗೆ ಶರಣು

ಪೊಲೀಸ್ ಇನ್ಪಾರ್ಮ್ ಗಳಾಗಿದ್ದರಿಂದಲೇ ಪೊಲೀಸರ ರೀತಿಯಲ್ಲೇ ಸುಲಿಗೆ ಮಾಡಿದ್ದಾರೆ. ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಆರೋಪಿಗಳು, ಇತ್ತೀಚಿನ ದಿನಗಳಲ್ಲಿ ಕೆಲವು ಶ್ರೀಮಂತ ಹುಡುಗರನ್ನು ನೋಡಿ ಅವರೇ ಡೀಲ್‌ ಮಾಡಿಕೊಳ್ಳಲು ಮುಂದಾಗಿದ್ದಾರೆ. ಟ್ರ್ಯಾಪ್‌ ಆದ ವಿದ್ಯಾರ್ಥಿಗಳನ್ನು ಪೊಲೀಸರ ರೀತಿಯಲ್ಲೇ ವಿಚಾರಿಸಿ ಬೆದರಿಸಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಾರು ಹತ್ತಿಸಿಕೊಂಡು ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಸುತ್ತಾಡಿಸಿ ಹಣ ಸುಲಿಗೆ ಮಾಡಿದ್ದಾರೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನ ಬೆನ್ನಲ್ಲಿಯೇ ಸದಾಶಿವನಗರ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. 

ಇನ್ನು ವಿದ್ಯಾರ್ಥಿಯಿಂದ 1.70 ಸಾವಿರ ರೂ. ಹಣವನ್ನು ಅಕೌಂಟ್ ಹಾಕಿಸಿಕೊಂಡಿದ್ದ ಆರೋಪಿಗಳು, ಈ ವಿಚಾರ ಬಾಯಿಬಿಟ್ಟರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದರು. ಇದೇ ಮಾದರಿಯಲ್ಲಿ 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಿರುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಬಂಧಿತ ಆರೋಪಿಗಳನ್ನು ರಾಕೇಶ್, ಅರುಣ್, ಹರೀಶ್ ಎಂದು ಗುರುತಿಸಲಾಗಿದೆ. ಹಲವು ತಿಂಗಳಿಂದ ಕೃತ್ಯ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಮೇಲ್ನೋಟಕ್ಕೆ ಎರಡು ಕೃತ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

25ಕ್ಕೂ ಅಧಿಕ ಸುಲಿಗೆ ಕೃತ್ಯಗಳು ಬಯಲಿಗೆ:  ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಅವರು, ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಹೊಂದಿರುತಿದ್ದ ಇವರು ಹಲವಾರು ಬಾರಿ ಪೊಲೀಸರಿಗೆ ನೀಡಿ ಇನ್ಫಾರ್ಮರ್‌ಗಳಾಗಿದ್ದರು. ಬಳಿಕ ಹಣ ಮಾಡಲು ಪೊಲೀಸರ ರೀತಿ ಎಂಟ್ರಿ ಕೊಟ್ಟು ಸುಲಿಗೆ ಮಾಡಿದ್ದಾರೆ. ನಾವೇ ಪೊಲೀಸರು ಎಂದು ಹೇಳಿಕೊಂಡು ವಂಚನೆ ಮಾಡಿರೊದು ಪತ್ತೆಯಾಗಿದೆ. ತನಿಖೆ ವೇಳೆ 25ಕ್ಕೂ ಅಧಿಕ ಕೃತ್ಯ ಎಸಗಿರೊದಾಗಿ ಮಾಹಿತಿ ಲಭ್ಯವಾಗಿದೆ. ಇನ್ನು ಸದಾಶಿವ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಮೂರು ಜನ ವ್ಯಕ್ತಿಗಳು ವಿದ್ಯಾರ್ಥಿಯೊಬ್ಬನ ಟಾರ್ಗೆಟ್ ಮಾಡಿದ್ದಾರೆ. ಆತನ ಹಾಸ್ಟಲ್ ನಿಂದ ಹೊರಗೆ ಕರೆಸಿ ಮೂರು ಜನ ಆತನ ಕರೆದೊಯ್ದಿದ್ದಾರೆ. ನಂತರ ಗಾಂಜಾ ಕೇಸ್ ನಲ್ಲಿ ನಿನ್ನ ಹೆಸರು ಸಹ ಬಂದಿದೆ ಎಂದು ಬೆದರಿಸಿದ್ದಾರೆ. ಮೆಡಿಕಲ್ ಟೆಸ್ಟ್ ಮಾಡಿಸೊದಾಗಿ ಹೇಳಿ ಬೆದರಿಸಿ ಒಂದು ವರೆ ಲಕ್ಷ ಹಣ ಪಡೆದಿದ್ದಾರೆ ಎಂದರು.

ಪ್ರೀತಿ ಮಾಡೋದ್‌ ತಪ್ಪೇನಿಲ್ಲಾ.. ಆದ್ರೆ, ಪ್ರಿಯಕರ ಕೈಕೊಟ್ಟ ಅಂತ ಸಾಯೋದ್‌ ತಪ್ಪಲ್ವಾ!

ಪೊಲೀಸರೆಂದು ಹೇಳಿ ಸಾರ್ವಜನಿಕರಿಂದಲೂ ಹಣ ವಸೂಲಿ: ಇನ್ನು ವಿದ್ಯಾರ್ಥಿ ದುಬೈನಲ್ಲಿ ಅಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಕಾಲೇಜಿಗೆ ಸೇರಿಕೊಂಡು ಅಭ್ಯಾಸ ಮಾಡುತ್ತಿದ್ದನು. ಆತ ಶ್ರೀಮಂತನಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡು ಆ ವಿದ್ಯಾರ್ಥಿಯನ್ನು ಪೊಲೀಸರೆಂದು ಬೆದರಿಸಿ ಕಾರು ಹತ್ತಿಸಿಕೊಂಡು ಸತತ ಮೂರು ಗಂಟೆಗಳ ಕಾಲ ಸುತ್ತಾಡಿಸಿ ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಎಲ್ಲಾ ಆರೋಪಿಗಳ ಬಂಧನ ಮಾಡಲಾಗಿದೆ. ತನಿಖೆ ವೇಳೆ ಯಶವಂತಪುರದಲ್ಲಿ ದಾಖಲಾದ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಅದರಲ್ಲೂ ಸಹ ವ್ಯಕ್ತಿಯೋರ್ವನಿಗೆ ಇದೇ ಮಾದರಿ ವಂಚನೆ ಮಾಡಿರೊದು ಪತ್ತೆಯಾಗಿದೆ. ಅಲ್ಲೂ ಸಹ ಪೊಲೀಸರೆಂದು ಹೇಳಿಕೊಂಡು ಸುಲಿಗೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ