ದರ್ಶನ್ & ಗ್ಯಾಂಗ್ ನಡೆಸಿದ ಹಲ್ಲೆ ವಿಡಿಯೋ ಪೊಲೀಸರಿಗೆ ಲಭ್ಯ, ಆರೋಪಿ ಮೊಬೈಲ್‌ನಿಂದ ರಿಟ್ರೀವ್!

By Chethan Kumar  |  First Published Jun 27, 2024, 10:27 AM IST

ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಹತ್ಯೆ ಪ್ರಕರಣದ ಮತ್ತೊಂದು ಪ್ರಬಲ ಸಾಕ್ಷ್ಯ ಲಭ್ಯವಾಗಿದೆ. ರೇಣುಕಾಸ್ವಾಮಿಯನ್ನು ಕರೆತಂದು ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸುತ್ತಿರುವ  ವಿಡಿಯೋ ಹಾಗೂ ಫೋಟೋ ಲಭ್ಯವಾಗಿದೆ.  


ಬೆಂಗಳೂರು(ಜೂ.27) ನಟ ದರ್ಶನ್ ಹಾಗೂ ಗ್ಯಾಂಗ್ ನಡೆಸಿದ ಹತ್ಯೆ ಪ್ರಕರಣದ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ ಅನ್ನೋ ಆರೋಪದಡಿ ಅಪಹರಣ ಮಾಡಿ ಬೆಂಗಳೂರಿಗೆ ಕರೆತಂದು ಹಲ್ಲೆ ನಡೆಸಿದ ವಿಡಿಯೋ ಲಭ್ಯವಾಗಿದೆ. ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿಯನ್ನು ಕರೆತಂದು ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ಹಲ್ಲೆಯ ವಿಡಿಯೋ ಇದೀಗ ಆರೋಪಿ ವಿನಯ್ ಮೊಬೈಲ್‌ನಲ್ಲಿ ಪತ್ತೆಯಾಗಿದೆ. 3 ಸೆಕೆಂಡಿನ ಒಂದು ವಿಡಿಯೋ ಹಾಗೂ ಫೋಟೋವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ.

ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಲಾಗಿದೆ. ಈ ವೇಳೆ ವಿಡಿಯೋ ಮಾಡಿ ಆರೋಪಿ ವಿನಯ್‌ಗೆ ದರ್ಶನ್ ಗ್ಯಾಂಗ್ ಕಳುಹಿಸಿತ್ತು. ಈ 3 ಸೆಕೆಂಡ್ ವಿಡಿಯೋ ಹಾಗೂ ಒಂದು ಫೋಟೋ ನೋಡಿದ ಬಳಿಕ ಆರೋಪಿ ವಿನಯ್ ಪಟ್ಟಣಗೆರೆ ಶೆಡ್‌ಗೆ ಬಂದು ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರ ತನಿಖೆಯಲ್ಲಿ ಮಹತ್ವದ ಸಾಕ್ಷ್ಯಗಳನ್ನು ಕರೆ ಹಾಕಿದೆ.

Tap to resize

Latest Videos

'ಡಿ' ಗ್ಯಾಂಗ್‌ ಸಿನಿಮಾ ಟೈಟಲ್‌ ನೀಡಲು ಫಿಲ್ಕ್ ಛೇಂಬ‌ರ್ ನಕಾರ

ಆರೋಪಿ ವಿನಯ್‌ಗೆ ಈ ವಿಡಿಯೋ ಕಳುಹಿಸಿದ್ದು ಯಾರು ಅನ್ನೋ ಮಾಹಿತಿಯನ್ನು ವಿನಯ್ ಬಾಯ್ಬಿಟ್ಟಿಲ್ಲ. ಇದೀಗ ಎಲ್ಲಾ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲು ತಜ್ಞರಿಗೆ ಕಳುಹಿಸಲಾಗಿದೆ. ಆರೋಪಿಗಳ ಮೊಬೈಲ್ ಮೂಲಕ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆಯನ್ನು ಪೊಲೀಸರು ಹೇಳಿದ್ದಾರೆ. ಕೆಲ ಆರೋಪಿಗಳ ಮೊಬೈಲ್ ಪತ್ತೆಯಾಗಿಲ್ಲ. 

ಇತ್ತ ಕಳೆದ 5 ದಿನಗಳಿಂದ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜೈಲೂಟ ಒಗ್ಗುತ್ತಿಲ್ಲ. ಇತ್ತ ಸರಿಯಾಗಿ ನಿದ್ದೆ ಇಲ್ಲದೆ ದೈಹಿಕವಾಗಿ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ದರ್ಶನ್ ನಿದ್ದೆಗೆ ಜಾರಿದ್ದಾರೆ. ಇಂದು ಬೆಳಗ್ಗೆ 5 ಗಂಟೆಗೆ ಎಚ್ಚರಗೊಂಡ ನಟ ದರ್ಶನ್ ಮಂಕಾಗಿ ಕುಳಿತಿದ್ದಾರೆ. 

'ಡಿ' ಗ್ಯಾಂಗ್‌ ಸಿನಿಮಾ ಟೈಟಲ್‌ ನೀಡಲು ಫಿಲ್ಕ್ ಛೇಂಬ‌ರ್ ನಕಾರ

ಜೈಲು ಸಿಬ್ಬಂದಿ ನೀಡಿದ ಕಾಫಿ ಸೇವಿಸಿದ ದರ್ಶನ್, ಜೈಲಿನ ಮೆನುವಿನಂತೆ ಪುಳಿಯೋಗರೆ ತಿಂಡಿ ಸೇವಿಸಿದ್ದಾರೆ. ಜೈಲೂಟ ಒಗ್ಗದೇ ಇದ್ದರೂ ಬೇರೆ ದಾರಿಯಿಲ್ಲದೆ ಸೇವಿಸಿದ್ದಾರೆ. ಕಳೆದೆರಡು ದಿನದ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ಜೈಲಿಗೆ ಆಗಮಿಸಿದ್ದರು. ದರ್ಶನ್ ಭೇಟಿ ಮಾಡಿ ಧೈರ್ಯ ತುಂಬಿದ್ದರು. ಈ ಭೇಟಿ ಬಳಿಕ ನಿರಾಳರಾಗಿದ್ದ ದರ್ಶನ್ ಇದೀಗ ಮತ್ತೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಜಾರಿದ್ದಾರೆ. ಇಂದು ದರ್ಶನ್ ತಾಯಿ ಹಾಗೂ ಸಹೋದರ ದಿನಕರ್ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. 
 

click me!