Crime News:3 ವರ್ಷಗಳಿಂದ ಬೆತ್ತಲೆ ಫೋಟೋ ಬೆದರಿಕೆ ಹಾಕಿದ್ದ ಸ್ನೇಹಿತರಿಗೆ ಗತಿ ಕಾಣಿಸಿದ ಯುವತಿ..!

By Suvarna NewsFirst Published Dec 4, 2021, 7:00 PM IST
Highlights

* 3 ವರ್ಷಗಳಿಂದ ಬೆತ್ತಲೆ ಫೋಟೋ ಅಂಜಿಕೆ
* ಕೊನೆಗೆ ಸ್ನೇಹಿತರಿಗೆ ಒಂದು ಗತಿ ಕಾಣಿಸಿದ ಯುವತಿ..!
* ಮೂರು ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡುತ್ತಿದ್ದ ಪ್ರಕರಣಕ್ಕೆ ಅಂತ್ಯ ಹಾಡಿದ ಪೊಲಿಸರು 

ಬೆಂಗಳೂರು, (ಡಿ.04) : ಯುವತಿಯ ಖಾಸಗಿ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ದಲ್ಲಿ (Social Media) ಹಾಕುವುದಾಗಿ 3 ವರ್ಷಗಳಿಂದ ಬ್ಲ್ಯಾಕ್‌​ಮೇಲ್‌ ಮಾಡು​ತ್ತಿದ್ದ ಇಬ್ಬರು ಆರೋಪಿಗಳು ಇದೀಗ ಪೊಲೀಸರ (Police) ಅತಿಥಿಯಾಗಿದ್ದಾರೆ.

 19 ವರ್ಷ​ದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಈಕೆಯ ಸ್ನೇಹಿತರಾದ ದೇವಸಂದ್ರ ನಿವಾಸಿಗಳಾದ ಬ್ರಿಜ್‌ ಭೂಷಣ್‌ ಯಾದವ್‌ (21) ಮತ್ತು ವಿವೇಕ್‌ ರೆಡ್ಡಿ (20) ಎಂಬುವರನ್ನು ಬೆಂಗಳೂರಿನ(Bengaluru) ಅಮೃತಹಳ್ಳಿ ಪೊಲೀಸ್‌ ಠಾಣೆ​ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್‌.ಪುರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವತಿಗೆ ಆರೋಪಿ ಬ್ರಿಜ್‌ಭೂಷಣ್‌ ಪರಿಚಯವಾಗಿತ್ತು. ಬಳಿಕ ಇಬ್ಬರು ಸ್ನೇಹಿತರಾಗಿದ್ದರು (Friends). ಆರೋಪಿ ಸಂತ್ರ​ಸ್ತೆಯ ಮನೆಗೆ ಬರುವಷ್ಟು ಸಲುಗೆ ಬೆಳೆಸಿಕೊಂಡಿದ್ದ.ಇದರಿಂದ ಯುವತಿಗೆ ಅನುಮಾನ ಬಂದು  ಆರೋ​ಪಿ​ಯಿಂದ ಅಂತರ ಕಾಯ್ದು​ಕೊಂಡು, ಮಾತ​ನಾ​ಡು​ವು​ದನ್ನು ಬಿಟ್ಟಿ​ದ್ದರು. 

Illicit Relationship:ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ, ಊರೆಲ್ಲ ಸುದ್ದಿ

ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆರೋಪಿ ನನ್ನ ಬಳಿ ನಿನ್ನ ಬೆತ್ತಲೆ ಫೋಟೋ​ಗ​ಳಿ​ವೆ. ಹಣ, ಚಿನ್ನಾ​ಭ​ರಣ ಕೊಡ​ದಿ​ದ್ದ​ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕು​ತ್ತೇನೆ ಎಂದು ಬೆದ​ರಿ​ಕೆ​ಯೊ​ಡ್ಡುತ್ತಿದ್ದ. ಇದರಿಂದ ಆತಂಕಗೊಂಡ ಯುವತಿ ಮನೆ​ಯ​ಲ್ಲಿದ್ದ 218 ಗ್ರಾಂ ಚಿನ್ನಾ​ಭ​ರಣ, 75 ಸಾವಿರ ರು. ನಗದು ಕೊಟ್ಟಿ​ದ್ದಾಳೆ.

 ಇಷ್ಟು ಸಾಲದ್ದಕ್ಕೆ ಯುವತಿಯ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದ ಬ್ರಿಜ್‌ ಭೂಷಣ್‌ನ ಸ್ನೇಹಿತ ವಿವೇಕ್‌ ರೆಡ್ಡಿ 2019ರಲ್ಲಿ ಫೇಸ್‌ಬುಕ್‌ನಲ್ಲಿ ಯುವತಿಯೊಂದಿಗೆ ಚಾಟ್‌ ಮಾಡುತ್ತಿದ್ದ. ಬಳಿಕ ರಾಚೇ​ನ​ಹಳ್ಳಿ ಕೆರೆ ಬಳಿ ಕರೆ​ಸಿ​ಕೊಂಡು ಅಸ​ಭ್ಯ​ವಾಗಿ ನಡೆ​ದು​ಕೊ​ಳ್ಳು​ತ್ತಿದ್ದ. ಒಮ್ಮೆ ಕರೆ ಮಾಡಿ ನಿನ್ನ ಖಾಸಗಿ ಫೋಟೋ ಇದೆ.ಹಣ, ಒಡ​ವೆ ಕೊಡದಿದ್ದರೆ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡು​ತ್ತೇ​ನೆ ಎಂದು ಬೆದರಿಸಿದ್ದ. ಇದ​ರಿಂದ ಹೆದರಿದ ಸಂತ್ರಸ್ತೆ,​ ತ​ನ್ನ ಮಾವನ ಪತ್ನಿಯ ಮಾಂಗಲ್ಯ ಸರ ತಂದು ಕೊಟ್ಟಿದ್ದಳು.

ಆದರೂ ಆರೋಪಿ​ಗಳು ಪದೇ ಪದೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡು​ತ್ತಿದ್ದರು. ಇದ​ರಿಂದ ಬೇಸತ್ತ ಸಂತ್ರಸ್ತೆ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಳು. ಯುವತಿಯ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ. 

ಮದುವೆ ಆಗುವುದಾಗಿ ನಂಬಿಸಿ ವಂಚನೆ
ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಸಿಸಿಎಫ್ ಅಧಿಕಾರಿಯೊಬ್ಬರ ಮೇಲೆ ಮಹಿಳೆಯೊಬ್ಬಳು ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ವಿದ್ಯಾ ಹಿರೇಮಠ ದೂರು ದಾಖಲಿಸಿದ ಮಹಿಳೆ. ಧಾರವಾಡದಲ್ಲಿ ಚಿಫ್ ಕನ್ಸರ್ವೆಟಿವ್ ಫಾರೆಸ್ಟರ್ ಆಗಿದ್ದ ರವಿ ಶಂಕರ ಅವರು ವಿದ್ಯಾ ಅವರಿಗೆ ಫೆಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಸದ್ಯ ರವಿಶಂಕರ ಶಿವಮೊಗ್ಗದಲ್ಲಿ ಸಿಸಿಎಫ್ ಆಗಿದ್ದಾರೆ.

ರವಿಶಂಕರ್ ಅವರು ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾಳನ್ನು ನಂಬಿಸಿ ಮೋಸ ಮಾಡಿದ್ದರು. ಮೋಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರವಿಶಂಕರ ಧಮ್ಕಿ ಹಾಕಿದ್ದಾರೆ ಎಂದು ರವಿ ಶಂಕರ್ ವಿರುದ್ಧ ಮಹಿಳೆ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮೊದಲು ದೂರು ನೀಡಿದ್ದ ಅವರು, ನಂತರ ಅಲ್ಲಿಂದ ಧಾರವಾಡ ಉಪನಗರ ಠಾಣೆಗೆ ದೂರನ್ನು ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾರೆ.

ಕಳೆದ 2019ರಲ್ಲಿ ಧಾರವಾಡಕ್ಕೆ ಮಹಿಳೆ ಬಂದಿದ್ದರು. ಆ ವೇಳೆ ಅವರನ್ನು ರವಿಶಂಕರ್ ತನ್ನ ಸರ್ಕಾರಿ ಬಂಗಲೆಗೆ ಕರೆದುಕೊಂಡು ಹೋಗಿದ್ದ. ಅಷ್ಟೇ ಅಲ್ಲದೇ ರವಿಶಂಕರ್ ಅಶ್ಲೀಲವಾಗಿ ವೀಡಿಯೋ ಕಾಲ್ ಹಾಗೂ ವಾಟ್ಸಪ್ ಚಾಟ್ ಮಾಡಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಮೋಸ ಮಾಡಿದ್ದಕ್ಕೆ ಒಂದು ಸಾರಿ ಆತ್ಮಹತ್ಯೆಗೆ ಯತ್ನಿಸಿ ಡೆತ್ ನೋಟ್ ಕೂಡಾ ಬರೆದಿದ್ದರು ಎಂದು ದೂರಿನಲ್ಲಿ ದಾಖಲಾಗಿದೆ.

click me!