Bengaluru: ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಲೈಂಗಿಕ ಶೋಷಣೆ: ಆರೋಪಿಯ ಬಂಧನ

Published : Dec 09, 2022, 07:24 AM IST
Bengaluru: ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಲೈಂಗಿಕ ಶೋಷಣೆ: ಆರೋಪಿಯ ಬಂಧನ

ಸಾರಾಂಶ

ಮಹಿಳಾ ಪಿಜಿಯೊಂದರ ಸ್ನಾನ ಗೃಹದಲ್ಲಿ ಮೊಬೈಲ್‌ ಇಟ್ಟು ಯುವತಿಯರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಬಳಿಕ ಆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕವಾಗಿ ಶೋಷಿಸುತ್ತಿದ್ದ ದುಷ್ಕರ್ಮಿಯೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಡಿ.09): ಮಹಿಳಾ ಪಿಜಿಯೊಂದರ ಸ್ನಾನ ಗೃಹದಲ್ಲಿ ಮೊಬೈಲ್‌ ಇಟ್ಟು ಯುವತಿಯರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಬಳಿಕ ಆ ವಿಡಿಯೋ ಮುಂದಿಟ್ಟು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕವಾಗಿ ಶೋಷಿಸುತ್ತಿದ್ದ ದುಷ್ಕರ್ಮಿಯೊಬ್ಬನನ್ನು ಆಗ್ನೇಯ ವಿಭಾಗದ ಸಿಇಎನ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಾಂಡಿಚೇರಿ ಮೂಲದ ನಿರಂಜನ್‌ ಬಂಧಿತನಾಗಿದ್ದು, ಇತ್ತೀಚೆಗೆ ತಾನು ನೆಲೆಸಿದ್ದ ಪಿಜಿಯಲ್ಲಿ ಯುವತಿ ಸ್ನಾನಕ್ಕೆ ತೆರಳಿದ್ದಾಗ ವಿಡಿಯೋ ಮಾಡಿಕೊಂಡು ಬಳಿಕ ಆಕೆಯ ಮೊಬೈಲ್‌ಗೆ ಅನಾಮಧೇಯ ಸಂದೇಶ ಕಳುಹಿಸಿ ಸೆಕ್ಸ್‌ಗೆ ಈತ ಒತ್ತಾಯಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್‌ ಎಸ್‌.ಟಿ.ಯೋಗೇಶ್‌ ನೇತೃತ್ವದ ತಂಡವು, ಯುವತಿ ಹೆಸರಿನಲ್ಲಿ ತಾವೇ ವಾಟ್ಸ್‌ಆಪ್‌ನಲ್ಲಿ ಚಾಟಿಂಗ್‌ ನಡೆಸಿ ಆರೋಪಿಯನ್ನು ಬಲೆಗೆ ಹಾಕಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

4 ವರ್ಷಗಳಿಂದ ಪಿಜಿಯಲ್ಲೇ ಠಿಕಾಣಿ: ಪಾಂಡಿಚೇರಿ ಮೂಲದ ನಿರಂಜನ್‌ 10ನೇ ತರಗತಿ ಓದಿದ್ದು, ಬಳಿಕ ಓದಿಗೆ ತಿಲಾಂಜಲಿ ಹಾಕಿ ಬೆಂಗಳೂರಿಗೆ ಬಂದಿದ್ದ. ನಾಲ್ಕು ವರ್ಷಗಳಿಂದ ಬೊಮ್ಮನಹಳ್ಳಿಯ ಪಿಜಿಯಲ್ಲೇ ನೆಲೆಸಿದ್ದ ಆತ, ಆ ಪಿಜಿ ಮಾಲಿಕನೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿದ್ದ. ಆ ಪಿಜಿ ಕಟ್ಟಡಕ್ಕೆ ಹೊಂದಿಕೊಂಡೇ ಮಹಿಳೆಯರ ಪಿಜಿ ಇದ್ದು, ಎರಡು ಪಿಜಿಗಳಿಗೆ ಒಬ್ಬನೇ ಮಾಲಿಕ. ಹೀಗಾಗಿ ಮಹಿಳೆಯರ ಪಿಜಿಯಲ್ಲಿ ಏನಾದರೂ ಕೆಲಸಗಳಿದ್ದರೆ ಆರೋಪಿಯೇ ಮುಂದೆ ನಿಂತು ಮಾಡಿಕೊಡುತ್ತಿದ್ದ. ಇದರಿಂದ ಲೇಡಿಸ್‌ ಪಿಜಿಯಲ್ಲಿ ಕೂಡಾ ನಿರಾಂತಕವಾಗಿ ಆರೋಪಿ ಓಡಾಡಲು ಮಾಲಿಕನೇ ಅವಕಾಶ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಕರ್ನಾಟಕದತ್ತ ಎಲ್ಲರ ಚಿತ್ತ: ಬಿಜೆಪಿ-ಕಾಂಗ್ರೆಸ್‌ ಜಿದ್ದಾಜಿದ್ದಿ ಫೈಟ್‌

ಸಜ್ಜಾ ಮೇಲೆ ಕುಳಿತು ಸ್ನಾನದ ವಿಡಿಯೋ: ಮಾಲಿಕರ ಸುಲಗೆ ದುರ್ಬಳಕೆ ಮಾಡಿಕೊಂಡ ನಿರಂಜನ್‌, ಮಹಿಳೆಯರಿಲ್ಲದ ಹೊತ್ತಿನಲ್ಲಿ ಪಿಜಿಗೆ ತೆರಳಿ ಸ್ನಾನ ಗೃಹ, ಬೆಡ್‌ ರೂಂ ಹಾಗೂ ಇತರೆ ಸ್ಥಳಗಳನ್ನು ಪರಿಶೀಲಿಸಿದ್ದ. ಬಳಿಕ ಯುವತಿಯರು ಸ್ನಾನ ಮಾಡುವಾಗ ಎಲ್ಲಿಂದ ವಿಡಿಯೋ ರೆಕಾರ್ಡ್‌ ಮಾಡಿದರೆ ಯಾರಿಗೂ ತಿಳಿಯುವುದಿಲ್ಲವೆಂದು ಸಂಚು ರೂಪಿಸಿ ತಾನು ವಾಸವಿದ್ದ ಪಿಜಿಯ ಟೆರೇಸ್‌ ಮೇಲಿಂದ ಪಕ್ಕದ ಲೇಡಿಸ್‌ ಪಿಜಿಯಲ್ಲಿದ್ದ ಯುವತಿಯರ ಚಲನವಲನದ ಮೇಲೆ ಕಣ್ಣಿಟ್ಟಿದ್ದ.

ಆಗ ಯಾರಾದರೂ ಯುವತಿ ಸ್ನಾನ ಮಾಡಲು ಪಿಜಿಯ ಹೊರಗೆ ಒಣ ಹಾಕಿದ್ದ ಟವಲನ್ನು ತೆಗೆದುಕೊಂಡ ಕೂಡಲೇ ಆರೋಪಿ ಜಾಗೃತನಾಗುತ್ತಿದ್ದ. ಕೂಡಲೇ ತನ್ನ ಪಿಜಿಯ ಮಹಡಿಯಿಂದ ಲೇಡಿಸ್‌ ಪಿಜಿಯ ಮಹಡಿಗೆ ಜಿಗಿದು ನೀರಿನ ಪೈಪನ್ನು ಹಿಡಿದುಕೊಂಡು ಸ್ನಾನ ಗೃಹದ ಕಿಟಕಿಯ 1.5 ಅಡಿ ಎತ್ತರದ ಸಜ್ಜಾ ಮೇಲೆ ಕುಳಿತುಕೊಳ್ಳುತ್ತಿದ್ದ. ಅಲ್ಲಿಂದ ಮೊಬೈಲನ್ನು ತೂಗು ಬಿಟ್ಟು ಕಿಟಕಿ ಮೂಲಕ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಅಲ್ಲದೆ ಆಕೆಯ ಫೋಟೋ ಸಹ ತೆಗೆದು ಬಳಿಕ ಲೇಡಿಸ್‌ ಪಿಜಿ ರಿಜಿಸ್ಟ್ರನರ್‌ನಲ್ಲಿ ಆ ಯುವತಿಯರ ಮೊಬೈಲ್‌ ನಂಬರ್‌ ತೆಗೆದುಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ವಿದೇಶಿ ನಂಬರ್‌ನಲ್ಲಿ ಸಂದೇಶ: ತನ್ನ ಬಗ್ಗೆ ಯಾರಿಗೂ ತಿಳಿಯಬಾರದೆಂದು ತನ್ನ ಮೊಬೈಲ್‌ನಲ್ಲಿ NEXT PLUS ಎಂಬ ಆ್ಯಪನ್ನು ಇನ್‌ಸ್ಟಾಲ್‌ ಮಾಡಿಕೊಂಡು ಆ ಆ್ಯಪ್‌ಗೆ ತನ್ನ ಇಮೇಲ್‌ ಐಡಿ ಮೂಲಕ ನೋಂದಾಯಿಸಿಕೊಂಡಿದ್ದ. ಆಗ ಸ್ಥಳೀಯ ಮೊಬೈಲ್‌ ಸಂಖ್ಯೆಯನ್ನು ವಿದೇಶಿ ಸಂಖ್ಯೆಯಾಗಿ ಪರಿವರ್ತಿಸಿ +1(747)222​-8960 ಎಂಬ ನಂಬರನ್ನು ಪಡೆದು ಆ ನಂಬರ್‌ನಿಂದ ಯುವತಿಯರನ್ನು ಸಂಪರ್ಕಿಸುತ್ತಿದ್ದ. ತಾನು ಸೆರೆ ಹಿಡಿದ ನಗ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದಾಗಿ ಯುವತಿಯರಿಗೆ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಯುವತಿಯರನ್ನು ಲಾಡ್ಜ್‌ ಅಥವಾ ಇತರೆ ಸ್ಥಳಗಳಿಗೆ ಕರೆಸಿ ಲೈಂಗಿಕವಾಗಿ ಬಳಕೆ ಮಾಡಿಕೊಡಿರುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿ ಹೆಸರಿನಲ್ಲಿ ಸೆಕ್ಸ್‌ ಆಫರ್‌ ಕೊಟ್ಟು ಬಂಧನ: ಅಂತೆಯೇ ಕಳೆದ ನ.28ರಂದು ರಾತ್ರಿ ಸುಮಾರು 10.30ಕ್ಕೆ ಸಂತ್ರಸ್ತೆಯ ಮೊಬೈಲ್‌ಗೆ ಪಿಜಿಯಲ್ಲಿ ಸ್ನಾನ ಮಾಡುವ ಫೋಟೋವನ್ನು ಆರೋಪಿ ಕಳುಹಿಸಿದ್ದ. ಬಳಿಕ ‘ನನ್ನ ಬಳಿ ನೀನು ಸ್ನಾನ ಮಾಡುತ್ತಿದ್ದಾಗ ಸೆರೆ ಹಿಡಿದ ವಿಡಿಯೋ ಇದೆ. ಆ ವಿಡಿಯೋವನ್ನು ಬೇರೆ ವ್ಯಕ್ತಿಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದರೆ ಲೈಂಗಿಕವಾಗಿ ನನ್ನೊಂದಿಗೆ ಸಹಕರಿಸಬೇಕು. ನೀನು ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸಿದರೆ ನಾನು ನಿನ್ನ ವಿಡಿಯೋವನ್ನು ಡಿಲೀಟ್‌ ಮಾಡುತ್ತೇನೆ. 

ಇಲ್ಲದೇ ಇದ್ದಲ್ಲಿ ನಿನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಪೋರ್ನ್‌ ವೆಬ್‌ಸೈಟ್‌ನಲ್ಲಿ ಬಿತ್ತರಿಸುತ್ತೇನೆ’ ಬೆದರಿಕೆ ಹಾಕಿದ್ದ. ಕೂಡಲೇ ಈ ಬಗ್ಗೆ ಸಿಇಎನ್‌ ಠಾಣೆಗೆ ಸಂತ್ರಸ್ತೆ ದೂರು ನೀಡಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್‌ ಯೋಗೇಶ್‌ ತಂಡವು, ಯುವತಿ ಹೆಸರಿನಲ್ಲಿ ಪೊಲೀಸರೇ ಚಾಟಿಂಗ್‌ ನಡೆಸಿ ಲೈಂಗಿಕ ಕ್ರಿಯೆಗೆ ಒಪ್ಪಿರುವುದಾಗಿ ನಂಬಿಸಿ ಹೋಟೆಲ್‌ಗೆ ಕರೆಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮೂವರಿಗೆ ಲೈಂಗಿಕ ದೌರ್ಜನ್ಯ: ಆರೋಪಿ ಮೊಬೈಲ್‌ನಲ್ಲಿ ಹಲವು ವಿಡಿಯೋಗಳು ಪತ್ತೆಯಾಗಿವೆ. ಇದರಲ್ಲಿ ಏಳು ಯುವತಿಯರಿಗೆ ಆತ ಫೋಟೋ ಕಳುಹಿಸಿ ಸೆಕ್ಸ್‌ ಆಫರ್‌ ಮಾಡಿದ್ದು, ಮೂವರನ್ನು ಶೋಷಣೆ ಮಾಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ

ತಾಯಿ ದುಡ್ಡಲ್ಲಿ ದರ್ಬಾರ್‌: 10ನೇ ತರಗತಿ ಓದಿದ್ದ ಆರೋಪಿ, ಯಾವುದೇ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ. ಪ್ರತಿ ತಿಂಗಳು ಆತನಿಗೆ ಮನೆಗೆಲಸ ಮಾಡಿ ತಾಯಿ ಹಣ ಕಳುಹಿಸುತ್ತಿದ್ದರು. ಈ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಅಲ್ಲದೆ ತನ್ನನ್ನು ವಾಸ್ತು ಶಿಲ್ಪಿ ಎಂದೂ ಹೇಳಿಕೊಳ್ಳುತ್ತಿದ್ದ. ಮಾದಕ ವಸ್ತು ವ್ಯಸನಿ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ