ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ 8 ಹೊಸ ಸೆಕ್ಷನ್ ಸೇರ್ಪಡೆ ಮಾಡಿದ ಪೊಲೀಸರು; ಜೈಲೂಟ ಫಿಕ್ಸ್!

By Sathish Kumar KH  |  First Published Jun 20, 2024, 11:49 AM IST

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಪೊಲೀಸರು ಹೊಸದಾಗಿ 8 ಕ್ರಿಮಿನಲ್ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದ್ದಾರೆ. ಇದರಿಂದ ಜೈಲು ಶಿಕ್ಷೆ ಖಚಿತವೆಂದು ಹೇಳಲಾಗುತ್ತಿದೆ.


ಬೆಂಗಳೂರು (ಜೂ.20): ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದು ಚರಂಡಿ ಬಳಿ ಬೀಸಾಡಿದ ನಟ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಕ್ರೂರ ಕೃತ್ಯವನ್ನು ಆಧರಿಸಿ ಹೊಸದಾಗಿ 8 ಹೊಸ ಕ್ರಿಮಿನಲ್ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಅಪರಾಧಿಗಳಿಗೆ ಜೈಲು ಶಿಕ್ಷೆ ಪ್ರಕಟವಾಗುವುದು ಖಚಿತವೆಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ನಟಿ ಪವಿತ್ರಾಗೌಡಗೆ ಅಶ್ಲೀಲ ಕಾಮೆಂಟ್ ಮಾಡಿದ್ದಾನೆಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ವಿರುದ್ಧ ಪೊಲೀಸರು ಮತ್ತಷ್ಟು ಐಪಿಸಿ ಸೆಕ್ಷನ್ ಗಳನ್ನ ಸೇರ್ಪಡೆ ಮಾಡಿದ್ದಾರೆ. ಹೆಚ್ಚುವರಿಯಾಗಿ 120ಬಿ, 364, 355, 384, 143,147,148, R/W 149 ಅಡಿಯಲ್ಲಿ  ಎಂಟು ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದಕ್ಕೂ ಮೊದಲು 302- ಕೊಲೆ, 201-ಸಾಕ್ಷ್ಯನಾಶ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈಗ ಕೊಲೆ ಆರೋಪಿಗಳನ್ನು ಬಂಧಿಸಿ ಸ್ಥಳ ಮಹಜರ್ ಮಾಡಿದ ನಂತರ ಹತ್ಯೆಯ ಕ್ರೂರತೆಯನ್ನು ಆಧರಿಸಿ ಮತ್ತಷ್ಟು ಸೆಕ್ಷನ್ಸ್ ಸೇರ್ಪಡೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Latest Videos

undefined

ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ದೂರು ಕೊಡಬಹುದಲ್ವಾ.? ಪವಿತ್ರಾಗೌಡ ಮಾಜಿ ಪತಿ ಸಂಜಯ್ ಸಿಂಗ್

ಯಾವ್ಯಾವ ಸೆಕ್ಷನ್ ಗೆ ಎಷ್ಟೆಷ್ಟು ವರ್ಷ ಶಿಕ್ಷೆ..?

  • 302 ವ್ಯಕ್ತಿ ಹತ್ಯೆ - ಜೀವಾವಧಿ ಶಿಕ್ಷೆ 
  • 364 ವ್ಯಕ್ತಿ ಅಪಹರಣ - ಜೀವಾವಧಿ ಶಿಕ್ಷೆ 
  • 201 - ಸಾಕ್ಷಿ ನಾಶ - ಜೀವಾವಧಿ 
  • 120-ಬಿ - ಒಳಸಂಚು - 2 ವರ್ಷ ಮೇಲ್ಪಟ್ಟು ಅಥವಾ ಜೀವಾವಧಿ ಶಿಕ್ಷೆ
  • 355 - ಒತ್ತಡ ಹೇರಿ ಹತ್ಯೆ 2 ವರ್ಷ ಜೈಲು ಶಿಕ್ಷೆ
  • 384 - ಸುಲಿಗೆ  - 3 ವರ್ಷ ಜೈಲು ಶಿಕ್ಷೆ
  • 143 - ಕಾನೂನು ಬಾಹಿರ ಸಭೆ - 6 ತಿಂಗಳು ಜೈಲು ಶಿಕ್ಷೆ
  • 147 - ಗಲಭೆ - 2 ವರ್ಷ 
  • 148 - ಮಾರಕ ಆಯುಧಗಳ ಬಳಕೆ - 3 ವರ್ಷ ಶಿಕ್ಷೆ
  • 149 - ಗುಂಪು ಸೇರಿ ಹಲ್ಲೆ 2 ವರ್ಷ ಶಿಕ್ಷೆ

ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಹೊಸದಾಗಿ ಸೇರ್ಪಡೆ ಮಾಡಲಾದ ಪ್ರಕರಣದಲ್ಲಿ 364- ಕಿಡ್ನಾಪ್ (ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿರುವುದು), 384- ಸುಲಿಗೆ (ರೇಣುಕಾಸ್ವಾಮಿ ಬಳಿಯಿದ್ದ ಉಂಗುರ, ಚಿನ್ನದ ಸರ ಹಾಗೂ ಮೊಬೈಲ್), 355 ಕ್ರಿಮಿನಲ್ ಬಲ ಪ್ರಯೋಗ (ದೇಹದ ಮೇಲೆ ಮೆಗ್ಗರ್ ಬಳಸಿ ಕರೆಂಟ್ ಶಾಕ್), 148- ಮಾರಕ ಆಯುಧಗಳ ಬಳಕೆ (ದೊಣ್ಣೆ, ಕಬ್ಬಿಣದ ರಾಡ್, ಬ್ರ್ಯಾಂಡೆಡ್ ಶೂ,ಮೆಗ್ಗರ್ ಯಂತ್ರ), 120(B) ಅಪರಾಧಿಕ ಒಳಸಂಚು (ಹಲ್ಲೆ ಮತ್ತು ಕೊಲೆ ಮಾಡಲು ಗ್ಯಾಂಗ್ ಕಟ್ಟಿಕೊಂಡು ಯೋಜನೆ), 143- ಕಾನೂನು ಬಾಹಿರ ಸಭೆ (ಶೆಡ್‌ನಲ್ಲಿ ಹಲ್ಲೆ ಮಾಡಿ ಕೊಲೆಗೈದ ನಂತರ ಶವ ಬೀಸಾಡಲು ಸಭೆ) ,147- ಗಲಭೆ, r/w 149 ಗುಂಪು ಹಲ್ಲೆ (ಗ್ಯಾಂಗ್ ಕಟ್ಟಿಕೊಂಡು ಹಲ್ಲೆ ಮಾಡಿರುವುದು) ಮಾಡಲಾಗಿದೆ. ಈ ಮೂಲಕ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಕಾನೂನಿನ ಕುಣಿಕೆ ಮತ್ತಷ್ಟಿ ಬಿಗಿಯಾಗಿದೆ.

ರೇಣುಕಾಸ್ವಾಮಿ ಮರ್ಡರ್‌ ಕೇಸ್‌: ದರ್ಶನ್ ವಿರುದ್ಧ ನಾಲ್ವರು ಆಪ್ತರಿಂದಲೇ ಸಾಕ್ಷ್ಯ, ನಟನಿಗೆ ಮತ್ತಷ್ಟು ಕಂಟಕ..!

ದರ್ಶನ್ ಗ್ಯಾಂಗ್ ಇರುವ ಜೈಲಿಗೆ ಬಂದ ಪೊಲೀಸ್ ಕಮಿಷನರ್: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಂಧನವಾಗಿರುವ ದರ್ಶನ್ ಅಂಡ್ ಗ್ಯಾಂಗ್ ಆರೋಪಿಗಳ ಕಸ್ಟಡಿ ಅಂತ್ಯಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ಗರ ಪೊಲೀಸ ಕಮಿಷನರ್ ಬಿ.ದಯಾನಂದ್ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಆಗಮಿಸಿದ್ದಾರೆ. ಕೊಲೆ ಕೇಸಿನ ತನಿಖೆಯ ರಿಪೋರ್ಟ್ ಪರಿಶೀಲಿಸಿದ್ದಾರೆ. ಪೊಲೀಸರು ದರ್ಶನ್ ಸೇರಿ ಇತರೆ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಬಂದೋಬಸ್ತ್ ವಿಚಾರವಾಗಿ ಕೆಲವು ಮಹತ್ವದ ಸೂಚನೆ ನೀಡಲಿದ್ದಾರೆ.

click me!