ಗಂಡ ಮನೆಗೆ ಹಣ ಕೊಡ್ತಿಲ್ಲಾಂತ ನೇಣು ಹಾಕಿಕೊಳ್ಳುವುದಾಗಿ ನಾಟಕ ಮಾಡುತ್ತಿದ್ದ ಅಜ್ಜಿ ಎಡವಟ್ಟಾಗಿ ಸತ್ತೇ ಹೋಗಿದ್ದಾಳೆ. ಇನ್ನು ಹೆಂಡತಿ ಸಾವಿನ ಭಯದಿಂದ ಅಜ್ಜನೂ ಸಾವಿಗೆ ಶರಣಾಗಿದ್ದಾನೆ.
ಬೆಂಗಳೂರು (ಫೆ.25): ಬೆಂಗಳೂರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ವೃದ್ಧ ದಂಪತಿ ಹಣಕ್ಕಾಗಿ ಸಣ್ಣ ಪುಟ್ಟ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಅಜ್ಜಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಾಟಕವಾಡಲು ನೇಣು ಬಿಗಿದುಕೊಂಡಿದ್ದು, ಎಡವಟ್ಟಿನಿಂದ ಸತ್ತೇ ಹೋಗಿದ್ದಾಳೆ. ಆದರೆ, ಹೆಂಡ್ತಿ ಸಾವಿನಿಂದ ಧೈರ್ಯ ಕಳೆದುಕೊಂಡ ವೃದ್ಧ ಕೂಡ ತಾನೂ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹೌದು, ಸಿಕೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಕೃಷ್ಣಂ ನಾಯ್ಡು ಹಾಗೂ ಸರೋಜ ವೃದ್ದ ದಂಪತಿ ಆತ್ಮಹತ್ಯೆ ಪ್ರಕರಣ ಈಗ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಈ ವೃದ್ಧ ದಂಪತಿ ಪೈನಾನ್ಸ್ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡರೇ ಎಂಬ ಅನುಮಾನ ಕಂಡುಬರುತ್ತಿದೆ. ವೃದ್ಧ ಕೃಷ್ಣಂ ನಾಯ್ಡು ಸಣ್ಣ ಪುಟ್ಟ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಆದರೆ, ಅಜ್ಜಿ ಸರೋಜಮ್ಮ ಮಾತ್ರ ನೀವುಯ ಮನೆಗೆ ಹಣ ಕೊಡ್ತಿಲ್ಲ ಅಂತ ಹಲವು ಬಾರಿ ಜಗಳವಾಡಿದ್ದಳು. ಅದೇ ವಿಚಾರವಾಗಿ ಅಂದು ಕೂಡ ಗಲಾಟೆ ಆಗಿರುತ್ತದೆ.
ಬೆಂಗಳೂರು ಹೆಸರಿಗೆ ಮಾತ್ರ ಲಕ್ಸುರಿ ಥೈ ಸ್ಪಾ.. ಮಾಡೋದೆಲ್ಲಾ ಹೈಟೆಕ್ ವೇಶ್ಯಾವಾಟಿಕೆ ದಂಧೆ
ಹೀಗಾಗಿ ಗಂಡನಿಗೆ ಬುದ್ದಿ ಕಲಿಸಲು ಸರೋಜಮ್ಮ ಆತ್ಮಹತ್ಯೆ ನಾಟಕದ ಪ್ಲಾನ್ ಮಾಡಿರಬಹುದು. ಅಜ್ಜಿ ತನ್ನ ಗಂಡನ ಹೆದರಿಸೋದಕ್ಕೆ ಅಂತ ನೇಣು ಬಿಗಿದುಕೊಳ್ಳಲು ಮುಂದಾಗಿದ್ದ ನಾಟಕದ ಪ್ಲಾನ್ ಯಡವಿಟ್ಟಿನಿಂದ ನಿಜವಾಗಲು ಆತ್ಮಹತ್ಯೆಗೆ ಶರಣಾಗಿ ಸಾವನ್ನಪ್ಪಿದ್ದಾಳೆ. ಇನ್ನು ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು ಅನ್ನೋ ಭಯಕ್ಕೆ ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಅಂದರೆ ಹೆಂಡತಿ ಸರೋಜಮ್ಮ ಆತ್ಮಹತ್ಯೆಗೆ ಹೆದರಿ ಕೃಷ್ಣ ನಾಯ್ಡು ಆತ್ಮಹತ್ಯೆಗೆ ಶರಣಾಗಿರೋ ಶಂಕೆ ಕಂಡಿಬಂದಿದೆ. ಸದ್ಯ ಸಿಕೆ ಅಚ್ಚುಕಟ್ಟು ಪೊಲೀಸರು ವೃದ್ದ ದಂಪತಿಯ ಮಗಳು ಮತ್ತು ಮಗನ ವಿಚಾರಣೆ ಮಾಡುತ್ತಿದ್ದಾರೆ.
ಮೃತ ವೃದ್ಧ ದಂಪತಿ ಮಗಳಿಗೆ ಯಾರ ಮೇಲಾದರೂ ಅನುಮಾನ ಇದ್ದರೆ ದೂರು ಕೊಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಆದರೆ, ವೃದ್ದ ದಂಪತಿಯ ಮಗಳು ಯಾರ ಮೇಲು ಕೂಡ ಅನುಮಾನ ವ್ಯಕ್ತಪಡಿಸಿಲ್ಲ. ಇನ್ನು ತಂದೆ ತಾಯಿ ವಿಚಾರದಲ್ಲಿ ತಮ್ಮ ಚೆನ್ನಾಗಿ ನೋಡಿಕೊಳ್ತಿದ್ದನು ಎಂದು ಮಗಳು ಪೊಲೀಸರು ಮುಂದೆ ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೇ ಮನೆಯ ಮುಂದೆ ಇರೋ ಸಿಸಿಟಿವಿಗಳನ್ನ ಕೂಡ ಪರಿಶೀನೆ ಮಾಡಲಾಗಿದೆ. ಆದರೆ, ಸಿಸಿಟಿವಿಯಲ್ಲಿ ಯಾವುದೇ ರೀತಿಯ ಅನುಮಾನ ಹುಟ್ಟಿಸುವ ದೃಶ್ಯಗಳು ಸೆರೆಯಾಗಿಲ್ಲ. ಹೀಗಾಗಿ, ಪೊಲೀಸರು ಅವರಲ್ಲಿದ್ದ ಮನಸ್ತಾಪದಿಂದಲೇ ಆತ್ಮಹತ್ಯೆ ಮಾಡಿಕೊಂಡರಬಹುದೆಂಬ ತೀರ್ಮಾನಕ್ಕೆ ಬಂದಿದ್ದಾರೆ.
ರಾತ್ರಿ ಕಸ ಎಸೆಯಲು ಹೋದ ಯುವತಿಯ ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು:
ಬೆಂಗಳೂರು (ಫೆ.24): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿ ವೇಳೆ ಕಸ ಎಸೆಯುವುದಕ್ಕೆ ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಪ್ಪಿಕೊಂಡು ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆ ಕೋರಮಂಗದಲ್ಲಿ ನಡೆದಿದೆ. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊರಮಂಗಲ ಆಟೋ ಸ್ಟಾಂಡ್ ಬಳಿಯಲ್ಲಿ ಕಸ ಎಸೆಯಲು ಹೋಗಿದ್ದ ಯುವತಿಯನ್ನು ಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.
ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು
ಫೆ.18ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ಮಧ್ಯರಾತ್ರಿ ವೇಳೆ ಕಸ ಎಸೆಯಲು ಹೋಗಿದ್ದಳು. ಈ ವೇಳೆ ಕೊರಮಂಗಲ ಆಟೋ ಸ್ಟಾಂಡ್ ಬಳಿ ಕುಳಿತಿದ್ದ ಪುಂಡರ ಗುಂಪು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ-ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿದೆ. ನಂತರ, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಸ್ ಬರುವಾಗ ಅವರನ್ನು ಹಿಂಬಾಲಿಸಿದ ಪುಂಡರ ಗುಂಪಿನಲ್ಲಿದ್ದ ನಾಲ್ವರು, ಯುವತಿಯನ್ನು ಅಡ್ಡಗಟ್ಟಿ ಹಿಡಿದುಕೊಂಡಿದ್ದಾರೆ. ನಂತರ, ಯುವತಿಯ ಬಾಯಿ ಮುಚ್ಚಿ ಹಿಡಿದುಕೊಂಡು ಆಕೆಯ ಖಾಸಗಿ ಅಂಗಗಳನ್ನು ಕೆಟ್ಟದಾಗಿ ಸ್ಪರ್ಶ ಮಾಡಿದ್ದಾರೆ. ಇದಕ್ಕೆ ಯುವತಿ ತೀವ್ರ ಪ್ರತಿರೋಧ ತೋರಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಯುವತಿ ಗಾಯಗೊಂಡಿದ್ದಾಳೆ. ಈ ವೇಳೆ ತಡೆಯಲು ಮುಂದಾದ ಯುವತಿಯ ಸ್ನೇಹಿತನಿಗೂ ಥಳಿಸಿದ್ದಾರೆ.