ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಲಾರದಲ್ಲಿ ಆತ್ಮಹತ್ಯೆ: ಕಾಲೇಜಿನಲ್ಲಿ ಕಿರುಕುಳ ಆರೋಪ

By Sathish Kumar KHFirst Published Jun 5, 2023, 6:30 PM IST
Highlights

ಬಳ್ಳಾರಿಯಿಂದ ಬೆಂಗಳೂರಿನ ಹೊಸಕೋಟೆ ಎಂವಿಜೆ ಮೆಡಿಕಲ್‌ ಕಾಲೇಜಿಗೆ ಬಂದು ಮಾಸ್ಟರ್‌ ಆಫ್‌ ಮೆಡಿಸಿಸ್‌ (ಎಂಡಿ) ಓದುತ್ತಿದ್ದ ವಿದ್ಯಾರ್ಥಿನಿ ಕೋಲಾರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಜೂ.05): ಮಕ್ಕಳ ತಜ್ಞ ವೈದ್ಯಯಾಗುವ ಕನಸು ಹೊತ್ತು ದೂರದ ಬಳ್ಳಾರಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ ಪೀಡಿಯಾಟ್ರಿಕ್‌ ಡಾಕ್ಟರ್ ಆಫ್‌ ಮೆಡಿಸಿಸ್‌ (ಎಂಡಿ) ಓದಲು ಬಂದಿದ್ದ ವಿದ್ಯಾರ್ಥಿನಿ ಕೋಲಾರದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕಾಲೇಜಿನಲ್ಲಿ ಕಿರುಕುಳ ಹಾಗೂ ತಂದೆಯನ್ನು ಕಳೆದುಕೊಂಡ ಖಿನ್ನತೆಗೊಳಗಾಗಿದ್ದೇನೆಂದು ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಕೋಲಾರದ ಕ್ವಾರಿಹಳ್ಳದ ನೀರಿನಲ್ಲಿ ತೇಲುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿಯ ಶವ, ಮತ್ತೊಂದೆಡೆ ಶವವನ್ನು ಮೇಲೆತ್ತುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಇನ್ನೊಂದೆಡೆ ಶವಗಾರದ ಎದುರು ಕಣ್ಣೀರಾಕುತ್ತಿರುವ ಪೊಷಕರು ಇದೆಲ್ಲಾ ದೃಷ್ಯಗಳು ನಮಗೆ ಕಂಡು ಬಂದಿದ್ದು ಕೋಲಾರದಲ್ಲಿ. ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕ್ವಾರಿಹಳ್ಳದಲ್ಲಿ ಬಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಬಳ್ಳಾರಿ ಮೂಲದ ದರ್ಶಿನಿ ಎಂದು ಗುರುತಿಸಲಾಗಿದೆ. 

ಬೆಂಗಳೂರಿನ ಪೀಪಲ್ಸ್‌ ಮ್ಯಾನ್‌ ಖ್ಯಾತಿಯ ಇನ್ಸ್‌ಪೆಕ್ಟರ್‌ ಮಂಜುನಾಥ್‌ ಲಿವರ್‌ ಕ್ಯಾನ್ಸರ್‌ಗೆ ಬಲಿ

ಪೀಡಿಯಾಟ್ರಿಕ್‌ ಎಂಡಿ ಓದುತ್ತಿದ್ದ ವಿದ್ಯಾರ್ಥಿನಿ: ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ ಹೊಸಕೋಟೆ ಎಂವಿಜೆ ಮೆಡಿಕಲ್​ ಕಾಲೇಜಿನಲ್ಲಿ ಪೀಡಿಯಾಟ್ರಿಕ್​ ಎಂಡಿ ಮಾಡುತ್ತಿದ್ದ ವಿದ್ಯಾರ್ಥಿನಿ ದರ್ಶಿನಿ ಮಾನಿಸೀಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಈವೇಳೆ ನಿನ್ನೆ ಬೆಳಿಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಕಾಲೇಜಿನಿಂದ ಹೊರಟು ನೇರ ಕೋಲಾರ ತಾಲ್ಲೂಕು ಕೆಂದಟ್ಟಿ ಬಳಿ ಇರುವ ಕ್ವಾರಿಹಳ್ಳದ ಬಳಿ ಬಂದಿದ್ದಾಳೆ. ಬಂದು ತನ್ನ ಶೂ ಹಾಗೂ ಮೊಬೈಲ್​ ನ್ನು ಒಂದೆಡೆ ಬಿಚ್ಚಿಟ್ಟು ಕೊನೆಯದಾಗಿ ತನ್ನ ಸ್ನೇಹಿತ ಮಣಿ ಎಂಬಾತನಿಗೆ ಕರೆ ಮಾಡಿ ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು ಖಿನ್ನತೆಯಿಂದ ಹೊರ ಬರಲು ಆಗುತ್ತಿಲ್ಲ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. 

ಸ್ನೇಹಿತ ಬೇಡವೆಂದರೂ ಕೇಳದೆ ಆತ್ಮಹತ್ಯೆ: ಈ ವೇಳೆ ಸ್ನೇಹಿತ ಮಣಿ ಎಷ್ಟು ಹೇಳಿದರೂ ಕೇಳದ ಹಿನ್ನೆಲೆಯಲ್ಲಿ ಆಕೆಯ ತಾಯಿಗೆ ಕಾನ್ಫಿರೆನ್ಸ್ ಕಾಲ್​ ಹಾಕಿ ಮಾನಾಡಿಸಲು ಯತ್ನಿಸಿದ್ದಾನೆ. ಆದರೆ ದರ್ಶಿನಿ ಕರೆ ಡಿಸ್‌ಕನೆಕ್ಟ್‌ ಮಾಡಿದ್ದಾಳೆ. ಪುನಃ ಎಷ್ಟೇ ಪ್ರಯತ್ನಿಸಿದರೂ ಕಾಲ್​ ರಿಸೀವ್ ಮಾಡಿಲ್ಲ. ಅಷ್ಟೊತ್ತಿಗೆ ತಾನು ಕ್ವಾರಿಹಳ್ಳದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ ಹಿನ್ನೆಲೆ ತಕ್ಷಣವೇ ಹುಡುಕಿಕೊಂಡು ಬಂದಿದ್ದಾರೆ. ಅಷ್ಟೊತ್ತಿಗೆ ದರ್ಶಿನಿ ನೀರಿನಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಳು.

ನರ್ಸಿಂಗ್‌ ಹೋಂ ತೆರಯುವ ಕನಸು ನೀರಲ್ಲಿ ಹೋಮ: ಅತ್ಯಂತ ಪ್ರತಿಭಾವಂತೆಯಾಗಿದ್ದ ದರ್ಶಿನಿ ಎಂಬಿಬಿಎಸ್ ಮುಗಿಸಿ ಉಚಿತ ಎಂಡಿ ಸೀಟ್​ ಗಿಟ್ಟಿಸಿಕೊಂಡಿದ್ದಳು. ಜೊತೆಗೆ ತಾನು ದೊಡ್ಡ ಮಕ್ಕಳ ತಜ್ಞೆಯಾಗಿ ಕೆಲಸ ಮಾಡಬೇಕು ಊರಿನಲ್ಲಿ ತನ್ನದೊಂದು ನರ್ಸಿಂಗ್ ಹೋಂ ತೆರೆಯಬೇಕು ಎಂದೆಲ್ಲಾ ಕನಸು ಹೊತ್ತಿದ್ದಳು. ತನ್ನ ತಂದೆಯನ್ನು ಕಳೆದುಕೊಂಡಿದ್ದ ದರ್ಶಿನಿ ತನ್ನ ತಾಯಿಯ ಆಶ್ರಯದಲ್ಲೇ ಬೆಳೆಯುತ್ತಿದ್ದವಳು. ತನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮಗಳನ್ನು ವೈದ್ಯೆಮಾಡಬೇಕು ಅನ್ನೋ ಕನಸಿಗೆ ತಕ್ಕಂತೆ ಓದುತ್ತಿದ್ದ ದರ್ಶಿನಿ ಕಳೆದ 7 ತಿಂಗಳ ಹಿಂದಷ್ಟೇ ಎಂವಿಜೆ ಮೆಡಿಕಲ್​ ಕಾಲೇಜಿಗೆ ದಾಖಲಾಗಿದ್ದಳು. 

GRUHA JYOTHI- ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಜುಲೈನಿಂದ ಜಾರಿ: ಗೃಹಜ್ಯೋತಿಗೆ 10 ಷರತ್ತುಗಳು ಅನ್ವಯ

ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯರ ಕಿರುಕುಳ: ಆದರೆ ಇತ್ತೀಚೆಗೆ ಮೆಡಿಕಲ್​ ಕಾಲೇಜಿನಲ್ಲಿ ಸತತ 48 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾಗಿದ್ದು ಊಟಕ್ಕೂ ಸಹ ಬಿಡುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಹಿರಿಯ ವೈದ್ಯ ಮಹೇಶ್ ಎಂಬಾತನ ಕಿರುಕುಳ ಹೆಚ್ಚಾಗಿದ್ದು, ಕಾಫಿ ಕುಡಿದು ಬರೋಣ ಬಾ ಎಂದು ದರ್ಶಿನಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಪೋಷಕರು ಆರೋಪಿಸಿದ್ದಾರೆ. ಇಷ್ಟೆಲ್ಲಾ ಕಿರುಕುಳ ಇದ್ದರೂ ಆಡಳಿತ ಮಂಡಳಿಯವರ ಕಿರುಕುಳವನ್ನ ಪ್ರಶ್ನೆ ಮಾಡಿದ್ರೆ ಇಂಟರ್ನಲ್ ಮಾರ್ಕ್ ಕೊಡುವುದಿಲ್ಲ ಎಂಬ ಭಯದಿಂದ, ಮನೆಯವರಿಗೆ ಕಿರುಕುಳದ ಕುರಿತು ತಿಳಿಸದೆ, ಸ್ನೇಹಿತ ಮಣಿ ಎಂಬುವರ ಬಳಿ ತಮ್ಮ ಅಳಲನ್ನ ತೋಡಿಕೊಂಡಿದ್ದಳು.ಇನ್ನು ಘಟನೆ ಸಂಭಂದ ಎಂವಿಜೆ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯ ಮಹೇಶ್​ ವಿರುದ್ದ ಪೋಷಕರು ಕೋಲಾರ ಗ್ರಾಮಾಂತರ ದೂರು ನೀಡಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿದೆ.

ಒಟ್ಟಾರೆ ಮಕ್ಕಳ ತಜ್ಞೆಯಾಗುವ ಆಸೆ ಹೊತ್ತಿದ್ದ ಮಗುವಿನಂತ ಮನಸ್ಸಿನ ದರ್ಶಿನಿಗೆ ತನ್ನ ವೃತ್ತಿ ಜೀವನದ ಕಷ್ಟ ಎದುರಿಸುವ ಶಕ್ತಿ ಇರಲಿಲ್ಲವೋ, ಕಾಲೇಜು ಆಡಳಿತ ಮಂಡಳಿ, ಹಿರಿಯ ವೈದ್ಯರ ಕಿರಕುಳ ಹೆಚ್ಚಾಗಿತ್ತೋ, ಮಾನಸಿಕವಾಗಿ ನೊಂದಿದ್ದ ದರ್ಶಿನಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ್ಲಾ, ಇಲ್ಲಾ ಯಾದೋ ಒತ್ತಡಕ್ಕೆ ಮಣಿದಳಾ ಹೀಗೆ ಹಲವು ಅನುಮಾನಗಳು ಮೂಡಿರೋದಂತೂ ಸುಳ್ಳಲ್ಲ.

click me!