ದತ್ತು ಕೇಂದ್ರದಲ್ಲಿ ಮಗುವಿನ ಮೇಲೆ ಅಮಾನುಷ ಹಲ್ಲೆ; ಕೂದಲು ಹಿಡಿದು ನೆಲಕ್ಕೆ ಎಸೆದ ಪಾಪಿ ಮಹಿಳೆ: ವಿಡಿಯೋದಲ್ಲಿ ಸೆರೆ

By BK Ashwin  |  First Published Jun 5, 2023, 5:23 PM IST

ಈ ವೈರಲ್‌ ವಿಡಿಯೋಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದು, ಅಂತಹ ದತ್ತು ಅಥವಾ ಆಶ್ರಯ ಮನೆಗಳಲ್ಲಿನ ಮಕ್ಕಳ ಸ್ಥಿತಿಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ.


ಕಂಕೇರ್, ಛತ್ತೀಸ್‌ಗಢ (ಜೂನ್ 5, 2023): ದತ್ತು ಸ್ವೀಕಾರ ಕೇಂದ್ರದ ವಿಡಿಯೋವೊಂದು ವೈರಲ್‌ ಆಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ. ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ದತ್ತು ಸ್ವೀಕಾರ ಕೇಂದ್ರದ ಕಾರ್ಯಕ್ರಮ ನಿರ್ವಾಹಕರು ಇಬ್ಬರು ಪುಟ್ಟ ಬಾಲಕಿಯರ ಮೇಲೆ ಅಮಾನುಷ ಹಲ್ಲೆ ನಡೆಸಿ, ನೆಲದ ಮೇಲೆ ಎಸೆದು ನಂತರ ಮಂಚದ ಮೇಲೆ ಎಸೆದಿರುವುದನ್ನು ತೋರಿಸುತ್ತದೆ. 

ಇನ್ನು, ಈ ಘಟನೆಯ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಛತ್ತೀಸ್‌ಗಢದ ಕಲೆಕ್ಟರ್ ದತ್ತು ಕೇಂದ್ರದ ಉದ್ಯೋಗಿಯ ವಿರುದ್ಧ ಎಫ್‌ಐಆರ್‌ಗೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ. 
ದತ್ತು ಸ್ವೀಕಾರ ಕೇಂದ್ರವು 6 ವರ್ಷದೊಳಗಿನ ಅನಾಥ ಮಕ್ಕಳಿಗೆ ನೆಲೆಯಾಗಿದೆ. ಇನ್ನು, ಈ ಕೇಂದ್ರದ ನಿರ್ವಾಹಕಿ ಸೀಮಾ ದ್ವಿವೇದಿ ಈ ಹಿಂದೆಯೂ ಇಂತಹ ಹಲವಾರು ಘಟನೆಗಳಲ್ಲಿ ಭಾಗಿಯಾಗಿದ್ದರೂ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಅವಿವಾಹಿತ ಪುರುಷರಿಗೆ ಶಾಕಿಂಗ್ ನ್ಯೂಸ್‌: AI ಮೂಲಕ ಸೃಷ್ಟಿಯಾದ ವ್ಯಕ್ತಿಯನ್ನೇ ಮದ್ವೆಯಾದ ಮಹಿಳೆ!

ಇದು ಅಲ್ಲಿ ವಾಸಿಸುವ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಂಕೇರ್ ಪೊಲೀಸ್ ಮೂಲಗಳು ತಿಳಿಸಿವೆ. ದತ್ತು ಸ್ವೀಕಾರ ಕೇಂದ್ರವು ಸಿಸಿಟಿವಿ ಕ್ಯಾಮೆರಾವನ್ನು ಹೊಂದಿದ್ದರೂ, ಸೀಮಾ ದ್ವಿವೇದಿ ಅದನ್ನು ರಾತ್ರಿಯ ವೇಳೆ ಆಫ್ ಮಾಡುತ್ತಾರೆ ಎಂದೂ ಅವರು ಹೇಳಿದರು. 

ಈ ವಿಡಿಯೋದಲ್ಲಿ ಸೀಮಾ ದ್ವಿವೇದಿ ಪುಟ್ಟ ಹುಡುಗಿಯನ್ನು ಹೊಡೆದಿದ್ದು, ಕೂದಲಿನಿಂದ ಹಿಡಿದು ನೆಲಕ್ಕೆ ಎಸೆದಿದ್ದಾರೆ. ಹುಡುಗಿ ಕಿರುಚುತ್ತಾ ಅಳುತ್ತಿರುವಾಗ, ಮಹಿಳಾ ಸಿಬ್ಬಂದಿ ಅವಳನ್ನು ಮತ್ತೊಮ್ಮೆ ಎತ್ತಿ, ಮಂಚದ ಮೇಲೆ ಎಸೆದು ಮತ್ತೊಮ್ಮೆ ಅವಳನ್ನು ಥಳಿಸಿದ್ದಾರೆ. ಕೇಂದ್ರದ ಇಬ್ಬರು ಉದ್ಯೋಗಿಗಳು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದರೂ ಅವರಿಬ್ಬರೂ ಮಧ್ಯಪ್ರವೇಶಿಸಲಿಲ್ಲ ಎಂಬುದನ್ನೂ ನೋಡಬಹುದು.

ಇದನ್ನೂ ಓದಿ: ಮಗನನ್ನು ಕೊಂದು ತಲೆಯ ಭಾಗವನ್ನು ಬೇಯಿಸಿ ತಿಂದ ಕ್ರೂರಿ ತಾಯಿ: ಕಾರಣ ಕೇಳಿದ ಪೊಲೀಸರೇ ಬೆಚ್ಚಿ ಬಿದ್ರು!

ಸೀಮಾ ದ್ವಿವೇದಿ ನಂತರ ಇನ್ನೊಬ್ಬ ಬಾಲಕಿಯನ್ನು ತನ್ನ ಹತ್ತಿರ ಬರುವಂತೆ ಆಜ್ಞಾಪಿಸಿ, ಅವಳಿಗೆ ಏನೋ ಹೇಳಿ ಅವಳ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದಾನೆ. ನಂತರ ಮಹಿಳಾ ಸಿಬ್ಬಂದಿ ಮಗುವನ್ನು ಹಾಸಿಗೆಯ ಮೇಲೆ ಎಸೆದು ಪದೇ ಪದೇ ಹೊಡೆಯುತ್ತಾಳೆ. ಸೀಮಾ ದ್ವಿವೇದಿ ಅಳುತ್ತಿರುವ ಮಕ್ಕಳ ಮೇಲೆ ಮತ್ತೆ ಕಿರುಚಾಡಿ ಅಲ್ಲಿಂದ ಹೊರಟು ಹೋಗುವುದರೊಂದಿಗೆ ವಿಡಿಯೋ ಕೊನೆಗೊಳ್ಳುತ್ತದೆ.

ವಿಡಿಯೋ ಬೆಳಕಿಗೆ ಬಂದ ನಂತರ ಕಂಕೇರ್ ಜಿಲ್ಲಾಧಿಕಾರಿ ಡಾ.ಪ್ರಿಯಾಂಕಾ ಶುಕ್ಲಾ ಇಂದು ಸೀಮಾ ದ್ವಿವೇದಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಆದೇಶಿಸಿದ್ದಾರೆ. ಈ ಹಿಂದೆಯೂ ಈ ಸಿಬ್ಬಂದಿ ವಿರುದ್ಧ ಹಲವು ಉದ್ಯೋಗಿಗಳು ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ಕ್ರಮ ಕೈಗೊಳ್ಳುವ ಬದಲು ಆಕೆಯ ವರ್ತನೆಯನ್ನು ವಿರೋಧಿಸಿದ 8 ಮಂದಿ ನೌಕರರನ್ನು ವಜಾಗೊಳಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೂ ದೂರು ನೀಡಲಾಗಿದ್ದರೂ, ಸೀಮಾ ದ್ವಿವೇದಿ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದೂ ಪೊಲೀಸ್‌ ಮೂಲಗಳು ತಿಳಿಸಿವೆ. 

ಇದನ್ನೂ ಓದಿ: ಮಾದಕವಸ್ತು ಪುನರ್ವಸತಿ ಕೇಂದ್ರಕ್ಕೆ ಹೋದ ಮಹಿಳೆಯನ್ನು ಕೊಂದು ಪೀಸ್‌ ಪೀಸ್‌ ಮಾಡಿದ ಮಾಲೀಕರು!

ನೆಟ್ಟಿಗರನ್ನು ಕೆರಳಿಸಿದ ವೈರಲ್‌ ವಿಡಿಯೋ

ಈ ವೈರಲ್‌ ವಿಡಿಯೋಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದು, ಅಂತಹ ದತ್ತು ಅಥವಾ ಆಶ್ರಯ ಮನೆಗಳಲ್ಲಿನ ಮಕ್ಕಳ ಸ್ಥಿತಿಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ‘’ನಂಬಲಾಗದು.. ಜನರನ್ನು ರಾಕ್ಷಸರನ್ನಾಗಿ ಮಾಡಲಾಗಿದೆ.. ಪ್ರೀತಿ, ಸಹಾನುಭೂತಿ, ಸತ್ತು ಹೋಗಿದೆ" ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಈ ಭಯಾನಕ ವಿಡಿಯೊಗೆ ಪ್ರತ್ಯುತ್ತರ ನೀಡಿದ್ದಾರೆ. "ಕಂಕೇರ್ ಪೊಲೀಸ್ ಈ ವಿಷಯವನ್ನು ನೋಡಿ" ಎಂದು ಮತ್ತೊಬ್ಬರು ಬರೆದಿದ್ದಾರೆ. 

ಇದನ್ನೂ ಓದಿ: ಅರೇಬಿಕ್‌ ಶಾಲೆಯಲ್ಲಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್‌: 6 ತಿಂಗಳ ಮೊದಲೇ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ವಿದ್ಯಾರ್ಥಿನಿ!

click me!