Mounananda Guruswamy Mutt: ಬೆಳ್ಳಬೆಳಗ್ಗೆ ದೇವಸ್ಥಾನ ಒಡೆಯಲು ಬಂದ ಅಪರಿಚಿತರು!

Published : Oct 25, 2025, 09:26 AM IST
Mounananda Guruswamy Mutt

ಸಾರಾಂಶ

Bengaluru temple demolition attempt: ಬೆಂಗಳೂರಿನ ಹಲಸೂರು ಮೆಟ್ರೋ ನಿಲ್ದಾಣದ ಬಳಿಯ ಮೌನಾನಂದ ಗುರುಸ್ವಾಮಿಗಳ ಮಠವನ್ನು, ಆಸ್ತಿ ತಮ್ಮದೆಂದು ಹೇಳಿಕೊಂಡು ಅಪರಿಚಿತರ ಗುಂಪೊಂದು ಒಡೆಯಲು ಯತ್ನಿಸಿದೆ. ಭಕ್ತರ ವಿರೋಧ ಮತ್ತು ಪೊಲೀಸರ ಮಧ್ಯಪ್ರವೇಶದಿಂದ ಕಾಲ್ಕಿತ್ತ ಅಪರಿಚಿತರು.

ಬೆಂಗಳೂರು (ಅ.25): ಪ್ರಾಪರ್ಟಿ ನಮ್ಮದು ಅಂತಾ ಬೆಳ್ಳಬೆಳಗ್ಗೆ ಅಪರಿಚಿತ ವ್ಯಕ್ತಿಗಳ ಗುಂಪು ದೇವಸ್ಥಾನ ಒಡೆಯಲು ಯತ್ನಿಸಿದ ಘಟನೆ ಬೆಂಗಳೂರಿನ ಹಲಸೂರು ಮೆಟ್ರೋ ನಿಲ್ದಾಣದ ಬಳಿ ಇರುವ ಮೌನಾನಂದ ಗುರುಸ್ವಾಮಿಗಳ ಮಠದಲ್ಲಿ ನಡೆದಿದೆ.

ಈ ಘಟನೆಯಿಂದಾಗಿ ಸ್ಥಳದಲ್ಲಿ ಭಕ್ತರು ಮತ್ತು ಅಪರಿಚಿತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

 

ಇದು ನಮ್ಮ ಆಸ್ತಿ ಎಂದ ಅಪರಿಚಿತರು:

ಮಠದ ಆವರಣದಲ್ಲಿ ಪೂಜೆ ಸಿದ್ಧತೆ ನಡೆಯುತ್ತಿರುವಾಗಲೇ ಡೆಮಾಲಿಷನ್ ಮಾಡಲು ಬಂದ ಅಪರಿಚಿತರು, 'ಇದು ನಮ್ಮ ಆಸ್ತಿ, ನಾವಿದನ್ನು ಒಡೆಯುತ್ತೇವೆ ಎಂದು ಮುಂದಾಗಿದ್ದಾರೆ. ಈ ವೇಳೆ ಮಠದ ಭಕ್ತರು ವಿರೋಧಿಸಿ 'ಕೋರ್ಟ್ ಆದೇಶ ಇಲ್ಲದೆ ಒಡೆಯಲು ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಲಸೂರು ಪೊಲೀಸರುಸ್ಥಳಕ್ಕೆ ಭೇಟಿ:

ಸುದ್ದಿ ಪಡೆದ ಹಲಸೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಮಧ್ಯಪ್ರವೇಶಿಸಿದರು. ಪರಿಶೀಲನೆಯಲ್ಲಿ ಮಠದ ಪ್ರಾಪರ್ಟಿ ವಿಚಾರದಲ್ಲಿ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿರುವುದು ತಿಳಿದುಬಂದಿದೆ. ಕೋರ್ಟ್ ಆದೇಶ ತೋರಿಸಿ, ನಾವೇ ಪ್ರೊಟೆಕ್ಷನ್ ನೀಡುತ್ತೇವೆ ಎಂದು ಪೊಲೀಸರು ಅಪರಿಚಿತರಿಗೆ ಎಚ್ಚರಿಕೆ ನೀಡಿದರು. ಆದೇಶವಿಲ್ಲದಿದ್ದರಿಂದ ಅಪರಿಚಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಸದ್ಯ ಮಠದ ಭಕ್ತರು ಅಪರಿಚಿತರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕ ಮೂಡಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!