ಯುವತಿಯ ‘ಸಾವಿನ’ ಹೈಡ್ರಾಮಾ, CBI ಹೆಸರಲ್ಲಿ 5.57 ಲಕ್ಷ ಪಂಗನಾಮ!

Published : Jul 11, 2022, 01:09 PM IST
ಯುವತಿಯ ‘ಸಾವಿನ’ ಹೈಡ್ರಾಮಾ, CBI ಹೆಸರಲ್ಲಿ 5.57 ಲಕ್ಷ ಪಂಗನಾಮ!

ಸಾರಾಂಶ

ಯುವತಿಯ ‘ಸಾವಿನ’ ಹೈಡ್ರಾಮಾ ಸೃಷ್ಟಿಸಿ ಯುವಕನಿಂದ ಹಣ ಸುಲಿಗೆ  ಜಾಲತಾಣದಲ್ಲಿ ಪರಿಚಿತವಾಗಿದ್ದ ಯುವತಿ  ಅಶ್ಲೀಲ ವಿಡಿಯೋ ಬಳಸಿ ಬ್ಲ್ಯಾಕ್‌ಮೇಲ್‌  ಹಣ ಕೊಡದಿದ್ದಾಗ ‘ಯುವತಿ ಸತ್ತಿದ್ದಾಳೆ’ ಎಂದು .5.57 ಲಕ್ಷ ಪೀಕಿದ ದುಷ್ಕರ್ಮಿಗಳು

 ಬೆಂಗಳೂರು (ಜು.11): ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಮಹಿಳೆಯ ಜತೆಗಿನ ಅಶ್ಲೀಲ ವಿಡಿಯೋ ಮುಂದಿಟ್ಟುಕೊಂಡು ‘ಹನಿಟ್ರ್ಯಾಪ್‌ ಗ್ಯಾಂಗ್‌’ ವ್ಯಕ್ತಿಯೊಬ್ಬರಿಂದ 5.57 ಲಕ್ಷ ರು. ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಯಲಚೇನಹಳ್ಳಿಯ ಅಕ್ಷಯನಗರ ನಿವಾಸಿ ಅವಿನಾಶ್‌ (34) ಹಣ ಕಳೆದುಕೊಂಡವರು. ಈ ಹನಿಟ್ರ್ಯಾಪ್‌ ಗ್ಯಾಂಗ್‌ ಕಾಟ ತಾಳಲಾರದೆ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ರಾಹುಲ್‌ ಕುಮಾರ್‌ ಮತ್ತು ರಿಯಾ ಮಲ್ಹೋತ್ರಾ ಎಂಬುವವರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಫುಡ್​ ಆಫೀಸರ್ಸ್ ದೌರ್ಜನ್ಯ!

ಕೆಲ ತಿಂಗಳ ಹಿಂದೆ ದೂರುದಾರ ಅವಿನಾಶ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ರಿಯಾ ಮಲ್ಹೋತ್ರಾ ಎಂಬಾಕೆ ಪರಿಚಿತಳಾಗಿದ್ದಾಳೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿದ್ದು, ಪರಸ್ಪರ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಈ ವೇಳೆ ಆರೋಪಿ ರಿಯಾ ಮಲ್ಹೋತ್ರಾ, ಅವಿನಾಶ್‌ ಜತೆಗೆ ಅಶ್ಲೀಲವಾಗಿ ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾಳೆ. ಕೆಲ ದಿನಗಳ ಬಳಿಕ ಆಕೆ ಆ ಅಶ್ಲೀಲ ವಿಡಿಯೋಗಳನ್ನು ಅವಿನಾಶ್‌ಗೆ ಕಳುಹಿಸಿ ಹಣ ನೀಡುವಂತೆ ಕೇಳಿದ್ದಾಳೆ. ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾಳೆ. ಆದರೆ ಅವಿನಾಶ್‌, ಆರಂಭದಲ್ಲಿ ಹಣ ಕೊಡಲು ನಿರಾಕರಿಸಿದ್ದಾರೆ.

ಸಾವಿನ ಡ್ರಾಮಾ: ಕೆಲ ದಿನಗಳ ಬಳಿಕ ರಾಹುಲ್‌ ಕುಮಾರ್‌ ಎಂಬಾತ ಅವಿನಾಶ್‌ಗೆ ಕರೆ ಮಾಡಿ, ‘ನಾನು ಸಿಬಿಐ ಇಲಾಖೆಯ ಕ್ರೈಂ ಬ್ರ್ಯಾಂಚ್‌ನಿಂದ ಮಾತನಾಡುತ್ತಿದ್ದು, ನಿಮ್ಮೊಂದಿಗೆ ಸಂಬಂಧ ಇರಿಸಿಕೊಂಡಿದ್ದ ರಿಯಾ ಮಲ್ಹೋತ್ರಾ ಸಾವನಪ್ಪಿದ್ದಾಳೆ. ಸಾವಿಗೆ ನೀನೇ ಕಾರಣ ಎಂಬುದು ನಮಗೆ ಗೊತ್ತಾಗಿದೆ’ ಎಂದು ನಕಲಿ ಸಿಬಿಐ ಕೇಸ್‌ ಲಿಸ್ಟ್‌ ತೋರಿಸಿದ್ದಾನೆ. ಬಳಿಕ ವಿಚಾರಣೆಗೆ ಹಾಜರಾಗುವಂತೆ ಅವಿನಾಶ್‌ಗೆ ಬೆದರಿಸಿದ್ದಾನೆ. ವಿಚಾರಣೆ ಕೈಬಿಡಬೇಕಾದರೆ, ಹಣ ಕೊಡಬೇಕು ಎಂದು ಬೇಡಿಕೆ ಇರಿಸಿದ್ದಾನೆ. ಈತನ ಮಾತು ನಂಬಿದ ಅವಿನಾಶ್‌, ಹಂತ ಹಂತವಾಗಿ ಆನ್‌ಲೈನ್‌ ಮುಖಾಂತರ .5.57 ಲಕ್ಷ ವರ್ಗಾವಣೆ ಮಾಡಿದ್ದಾರೆ.

Mysuru: ಸಾಂಸ್ಕೃತಿಕ ನಗರಿಯಲ್ಲಿ ಖತರ್ನಾಕ್ ಮನೆ ಕಳ್ಳಿಯ ಬಂಧನ

ಆದರೂ ದುಷ್ಕರ್ಮಿಗಳು ಮತ್ತಷ್ಟುಹಣ ಕೊಡುವಂತೆ ಅವಿನಾಶ್‌ಗೆ ಕಿರುಕುಳ ನೀಡಿದ್ದಾರೆ. ಇವರ ಕಾಟ ತಾಳಲಾರದೆ ಅವಿನಾಶ್‌ ಸ್ನೇಹಿತರೊಬ್ಬರಿಗೆ ಹನಿಟ್ರ್ಯಾಪ್‌ ವಿಚಾರ ತಿಳಿಸಿದ್ದಾರೆ. ಬಳಿಕ ಸ್ನೇಹಿತನ ಸಲಹೆ ಮೇರೆಗೆ ಆಗ್ನೇಯ ವಿಭಾಗದ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ