ತಮಿಳಿನ ಹಂಟರ್ ಸಿನೆಮಾದಲ್ಲಿ ಚಾನ್ಸ್ ಕೊಡೋದಾಗಿ ಕನ್ನಡ ರೂಪದರ್ಶಿಗೆ ಆನ್‌ಲೈನ್‌ ವಂಚನೆ!

By Gowthami K  |  First Published Aug 6, 2024, 11:29 AM IST

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಕನ್ನಡ ರೂಪದರ್ಶಿ ಅವರಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.  


ಬೆಂಗಳೂರು (ಆ.6): ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಯುವತಿ ಆನ್ ಲೈನ್ ಆ್ಯಡ್ ನೋಡಿ ಮೋಸ ಹೋಗಿದ್ದಾಳೆ. ತಮಿಳಿನ ಹಂಟರ್ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳಿ ಸುರೇಶ್ ಕುಮಾರ್ ಎಂಬಾತನಿಂದ ಮಾಡೆಲ್ ನಂದಿತಾ ಕೆ ಶೆಟ್ಟಿ ಎಂಬಾಕೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

49ರಲ್ಲೂ ಕುಗ್ಗದ ಸೌಂದರ್ಯ, ಇನ್ನೂ ಒಂಟಿಯಾಗಿರುವುದಕ್ಕೆ ಆ ಸ್ಟಾರ್ ನಟನ ಜತೆಗಿನ ಬ್ರೇಕ್‌ ಅಪ್‌ ಕಾರಣವೇ!?

Tap to resize

Latest Videos

ವಂಚನೆ ಸಂಬಂಧ ನಂದಿತಾ ಕೆ ಶೆಟ್ಟಿ  ದೂರು ನೀಡಿದ್ದು, ಇನ್ಸ್ಟ್ರಾಗ್ರಾಂ ನಲ್ಲಿ ಹಂಟರ್ ಚಿತ್ರದ ಆ್ಯಡ್ ನೋಡಿದ್ದೆ. ನಂತರ ಅಲ್ಲಿದ್ದ ಕಾಂಟಾಕ್ಟ್ ನಂಬರ್ ಗೆ ಕರೆ ಮಾಡಿದ್ದೆ. ಚಿತ್ರದಲ್ಲಿ ಚಾನ್ಸ್ ಸಿಗುತ್ತೆ ಅದಕ್ಕೆ ಆರ್ಟಿಸ್ಟ್ ಕಾರ್ಡ್ ಮಾಡಿಸಬೇಕು ಎಂದು ಸುರೇಶ್ ಹೇಳಿದ್ದು, ಅದಕ್ಕಾಗಿ  12,500 ಹಣ ಕಳುಹಿಸಿದ್ದೆ, ನಂತರ ಅಗ್ರಿಮೆಂಟ್ ಸ್ಟ್ಯಾಂಪ್ ಡ್ಯೂಟಿ ಅಂತಾ 35 ಸಾವಿರ ತೆಗೆದುಕೊಂಡು ಮೋಸ ಮಾಡಲಾಗಿದೆ.

ದರ್ಶನ್ ಭೇಟಿಗೆ ಜೈಲು ಅಧಿಕಾರಿಗಳಿಂದ ಬೇಕಾಬಿಟ್ಟಿ ಅವಕಾಶ! ಒಂದು ತಿಂಗಳಲ್ಲಿ ಭೇಟಿಯಾದವರೆಷ್ಟು?

ಇದಾದ ಬಳಿಕ  ಶೂಟಿಂಗ್ ಗೆ ಮಲೇಷಿಯಾಗೆ ಹೋಗಬೇಕು. ನಿಮ್ಮ ತಂದೆಯ ಪಾಸ್ ಪೋರ್ಟ್ ಹಾಗು ನಿಮ್ಮ ಪಾಸ್ ಪೋರ್ಟ್ ವಿಮಾನ ಟಿಕೆಟ್ ಅಂತಾ ಸುರೇಶ್  90 ಸಾವಿರ ಹಣ ಕಟ್ಟಿಸಿಕೊಂಡಿದ್ದ. ಹೀಗೆ ಒಟ್ಟು ಸುಮಾರು 1.71 ಲಕ್ಷ ಹಣ ಪಡೆದು ಸುರೇಶ್ ಕುಮಾರ್ ಎಂಬಾತನಿಂದ ವಂಚನೆ ಮಾಡಿದ್ದಾನೆ.

ಇದಾದ ಬಳಿಕ  ಅನುಮಾನಗೊಂಡ ನಂದಿತಾ ಕೆ ಶೆಟ್ಟಿ ಪರಿಶೀಲನೆ ನಡೆಸಿದಾಗ ಅಸಲಿ ಕಹಾನಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಯುವತಿ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

click me!