ಬೆಂಗಳೂರು: ಹೋಟೆಲ್‌ನ ಮಹಿಳಾ ಸಿಬ್ಬಂದಿ ಜತೆ ಅನುಚಿತ ವರ್ತನೆ, ಇನ್ಸ್‌ಕ್ಟರ್ ಸಸ್ಪೆಂಡ್

By Suvarna NewsFirst Published Aug 28, 2022, 6:40 PM IST
Highlights

ಹೋಟೆಲ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತುಗೊಂಡಿದ್ದಾರೆ.

ಬೆಂಗಳೂರು, (ಆಗಸ್ಟ್.28): ಯುವತಿಯೊಬ್ಬಳ ಜತೆ ಅನುಚಿತವಾಗಿ ವರ್ತಸಿದ್ದ ಬೆಂಗಳೂರಿನ ಕೆ.ಪಿ. ಅಗ್ರಹಾರದ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ.

 ಪಾನಮತ್ತರಾಗಿ ಹೋಟೆಲ್‌ಗೆ ​ಹೋಗಿ ಮಹಿಳೆಯೊಮದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇರೆಗೆ ಬೆಂಗಳೂರಿನ ಕೆ.ಪಿ. ಅಗ್ರಹಾರದ ಪೊಲೀಸ್ ಇನ್​ಸ್ಪೆಕ್ಟರ್​ ಗೋಪಾಲಕೃಷ್ಣ ಗೌಡ ಅವರನ್ನ ಅಮಾನತುಗೊಳಿಸಲಾಗಿದೆ

ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು ಗೋಪಾಲಕೃಷ್ಣ ಗೌಡ ಅವರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಅಪರಾಧ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಳೆದ 5 ದಿನದ ಹಿಂದೆ ಪಿಐ ಗೋಪಾಲಕೃಷ್ಣಗೌಡ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯ ಹೋಟೆಲ್‌ವೊಂದಕ್ಕೆ ತೆರಳಿದ್ದರು. ಈ ವೇಳೆ ರೂಮ್ ನೀಡುವಂತೆ ಮಹಿಳಾ ಸಿಬ್ಬಂದಿ ಜೊತೆ ಪಿಐ ಗಲಾಟೆ ಮಾಡಿದ್ದಾರೆ. ಗಲಾಟೆ ಮಾಡಿದ್ದಲ್ಲದೇ ಅನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಹೋಟೆಲ್‌ನ ಮಹಿಳಾ ಸಿಬ್ಬಂದಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಜೀವನ್ ಭೀಮಾನಗರ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿದ್ದರು.

ಈ ಬಗ್ಗೆ ತನಿಖೆ ನಡೆಸಿದಾಗ ತಪ್ಪು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರು ಗೋಪಾಲಕೃಷ್ಣ ಗೌಡರನ್ನ ಸಸ್ಪೆಂಡ್ ಮಾಡಿದ್ದಾರೆ.

ಠಾಣೆಗೆ ಕುಡಿದು ಕೂಡ ಸ್ಟೇಷನ್ ಗೆ ಬರ್ತಿದ್ರು ಎಂಬ ಆರೋಪದ ಬಗ್ಗೆ ಮಾಹಿತಿ ಇದೆ.ಅಲ್ಲದೇ ಈ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದ ಹಿನ್ನಲೆ ಡಿಸಿಪಿ ಇನ್ಸ್ ಪೆಕ್ಟರ್ ಗೆ ಎಚ್ಚರಿಕೆ ಜತೆಗೆ ಬುದ್ದಿವಾದ ಕೂಡ ಹೇಳಲಾಗಿತ್ತು, ಆದರೂ ತಮ್ಮ ಚಾಳಿ ಮುಂದುವರಿಸಿದ್ದರು ಎನ್ನಲಾಗಿದೆ.

click me!