ಬೆಂಗಳೂರು ವಿಮಾನ ನಿಲ್ದಾಣ ಅಧಿಕಾರಿಗಳ ಭರ್ಜರಿ ಬೇಟೆ: 100 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ

By Suvarna NewsFirst Published Aug 26, 2022, 10:42 PM IST
Highlights

ಬೆಂಗಳೂರಿನ ಕೆಂಪೇಗೌಡ  ವಿಮಾನ ನಿಲ್ದಾಣದಲ್ಲಿ ಖಚಿತ ಮಾಹಿತಿ ಮೇರೆಗೆ ಡಿಆರ್ ಐ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದು, 100 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಪತ್ತೆ ಮಾಡಿದ್ದಾರೆ.
 

ಬೆಂಗಳೂರು, (ಆಗಸ್ಟ್.26): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್ ಐ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 100 ಕೋಟಿ ರೂಪಾಯಿ ಮೌಲ್ಯದ 14 ಕೆ‌ಜಿ ಹೆರಾಯಿನ್  ಸೀಜ್ ಮಾಡಿದ್ದಾರೆ.

ಇಂದು(ಆಗಸ್ಟ್ 26) ತೆಲಂಗಾಣ ಮೂಲದ ವ್ಯಕ್ತಿಯೋರ್ವ ಬ್ಯಾಗ್‌ನಲ್ಲಿ ಹೆರಾಯಿನ್ ಇಟ್ಟುಕೊಂಡು ಆದಿಸಾಬಾಬಾದಿಂದ ದೆಹಲಿಗೆ ಸಾಗಿಸುತ್ತಿದ್ದ. ಆದ್ರೆ, ಅಸಾಮಿ ಬೆಂಗಳೂರು ವಿಮಾನ ನಿಲ್ದಾಣದಲ್ಲೇ ಲಾಕ್ ಆಗಿದ್ದಾನೆ.

ಪುಟ್ಟೇನಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 51 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್

ಖಚಿತ ಮಾಹಿತಿ‌ ಮೇರೆಗೆ ವಿಮಾನ ಕೆಂಪೇಗೌಡ ಏರ್ಪೋರ್ಟ್ ಗೆ ಬಂದಿಳಿದಾಗ  ಡಿಆರ್ ಐ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ಬ್ಯಾಗ್ ಚೆಕ್‌ ಮಾಡಿದ್ದಾರೆ. ಆಗ ಬ್ಯಾಗ್‌ನಲ್ಲಿ 14 ಕೆ‌ಜಿ ಹೆರಾಯಿನ್ ಪತ್ತೆಯಾಗಿದ್ದು, ಅದನ್ನು ಸೀಜ್ ಮಾಡಿದ್ದಾರೆ. ಅದರ ಮೌಲ್ಯ 100 ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ವಿದೇಶದಲ್ಲಿ ಕೆಲಸ‌ ಕೊಡಿಸೋದಾಗಿ‌ ನಂಬಿಸಿ ಡ್ರಗ್ಸ್ ಸಾಗಾಟಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್‌ ಬ್ಯಾಗ್‌ನ್ನು ದೆಹಲಿಗೆ ಹಸ್ತಾಂತರಿಸುವ ನಿಯೋಜನೆಯೊಂದಿಗೆ ಆರೋಪಿಗೆ ಟಿಕೆಟ್‌ ಜೊತೆಗೆ ಹಣ ಮತ್ತು ಸ್ಟಾರ್ ಹೋಟೆಲ್‌ನಲ್ಲಿ ಉಳಿಯಲು ಆಫರ್ ನೀಡಲಾಗಿದೆ. ಆದ್ರೆ, ಆ ವ್ಯಕ್ತಿ ಬೆಂಗಳೂರಿನಲ್ಲೇ ಸಿಕ್ಕಿಬಿದ್ದಿದ್ದಾನೆ. ಈ ಬಗ್ಗೆ ಅಧಿಕಾರಿಗಳು ಇನ್ನಷ್ಟು ತನಿಖೆ ಮಾಡುತ್ತಿದ್ದಾರೆ.
 
ಈ ವರ್ಷ ಜುಲೈ 15 ರಿಂದ ಡಿಆರ್‌ಐ ಬೇಧಿಸಿದ 8ನೇ ಪ್ರಕರಣ ಇದಾಗಿದೆ. ಆದಿಸಾಬಾಬಾಗೆ ಸಂಬಂಧಿಸಿದ ಮಾದಕವಸ್ತು ಕಳ್ಳಸಾಗಣೆ ಹೆಚ್ಚುತ್ತಿರುವ ಕಾರಣ ಜುಲೈನಿಂದ ಮಾದಕ ದ್ರವ್ಯಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಡಿಆರ್ಐ ಮೂಲಗಳು ತಿಳಿಸಿವೆ. ಎಲ್ಲಾ 8 ಪ್ರಕರಣಗಳಿಂದ ವಶಪಡಿಸಿಕೊಂಡ ಮಾದಕ ದ್ರವ್ಯದ ಒಟ್ಟು ಮೌಲ್ಯ 250 ಕೋಟಿ ಎಂದು ಅಂದಾಜಿಸಲಾಗಿದೆ.

ಅಂತರಾಷ್ಟ್ರೀಯ ಡ್ರಗ್ ದಂಧೆ ಕಾರ್ಯಾಚರಿಸುತ್ತಿದ್ದು, ಮಾದಕವಸ್ತು ಕಳ್ಳಸಾಗಣೆಗಾಗಿ ಹೊಸ ಮುಖಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

click me!