Bengaluru Crime: ಸಿನಿಮಾ ಖಳ ನಟನಿಂದ ಹಣಕ್ಕಾಗಿ ರಿಯಲ್ ಕಿಡ್ನಾಪ್

Published : Jun 02, 2022, 04:06 PM IST
Bengaluru Crime: ಸಿನಿಮಾ ಖಳ ನಟನಿಂದ ಹಣಕ್ಕಾಗಿ ರಿಯಲ್ ಕಿಡ್ನಾಪ್

ಸಾರಾಂಶ

ವಜ್ರದ ವ್ಯಾಪಾರಿಯನ್ನು ‌ಕಿಡ್ನಾಪ್ ಮಾಡಿ ಕಾರಿನಲ್ಲಿ ನಾರಾಯಣ್‌ ಆ್ಯಂಡ್ ಟೀಮ್ ವ್ಯಾಪಾರಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದರು

ವರದಿ: ಪ್ರದೀಪ್ ಕಗ್ಗೆ

ಬೆಂಗಳೂರು (ಜೂ 02):  ಕನ್ನಡದ ಹೆಸಾರಂತ ಸಿನಿಮಾದಲ್ಲಿ  ಖಳನಾಯಕನ‌ ಪಾತ್ರವನ್ನ ಅಚ್ಚುಕಟ್ಟಾಗಿ ಮಾಡ್ತಿದ್ದ ಆತ ನಿಜ‌ಜೀವನದಲ್ಲೂ ಕೂಡ ಮಾಹಲಕ್ಷ್ಮೀ ಲೇಔಟ್ ಠಾಣೆಯ ರೌಡಿ ಶೀಟರ್ ಆಗಿದ್ದ. ಸಿನಿಮಾ ಮಾಡ್ಕೊಂಡು ಆರಾಮವಾಗಿ ಇದ್ದಿದ್ರೆ ಓಕೆ ಆದ್ರೆ ಅದನ್ನ ಬಿಟ್ಟು ಸಿನಿಮಾ ಸ್ಟೈಲಿನಲ್ಲಿ ಇಲ್ಲೂ ವಿಲನ್ ರೀತಿ ಹಣಕ್ಕಾಗಿ ಕಿಡ್ನಾಪ್ ಮಾಡಿ (Kidnap) ಜೈಲು ಸೇರಿದ್ದಾನೆ. ನಾರಾಯಣ್ ವೀರಪರಂಪರೆ, ದುಷ್ಟ ಸೇರಿದಂತೆ ನಲವತ್ತು ಸಿನಿಮಾದಲ್ಲಿ ನಟಿಸಿದ್ದ.ಇದೀಗ ನಾರಯಾಣ್ ಮತ್ತು ಟೀಂ ಕಿಡ್ನಾಪ್ ಕೇಸಿನಲ್ಲಿ ಜೈಲು ಸೇರಿದ್ದಾರೆ.

ಕಳೆದ 20ನೇ ತಾರೀಖು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನು ಈ ಗ್ಯಾಂಗ್ ಕಿಡ್ನಾಪ್ ಮಾಡಿತ್ತು. ‌ಕಿಡ್ನಾಪ್ ಮಾಡಿ ಕಾರಿನಲ್ಲಿ ನಾರಾಯಣ್‌ ಆ್ಯಂಡ್ ಟೀಮ್ ವ್ಯಾಪಾರಿಯನ್ನು ಮಂಡ್ಯಕ್ಕೆ ಕರೆದುಕೊಂಡು ಹೋಗಿದ್ದರು. ನಂತರ ವಜ್ರದ ವ್ಯಾಪಾರಿ ಮನೆಯವರಿಗೆ ಕಾಲ್ ಮಾಡಿ  ಎರಡು ಕೋಟಿಗೆ ಡಿಮ್ಯಾಂಡ್ ಇಟ್ಟಿದ್ದ ಆರೋಪಿಗಳು ಕೊನೆಗೆ 25ಲಕ್ಷ ಹಣ ಪಡೆದು ಆರು ಚೆಕ್‌ಗಳನ್ನು ಪಡೆದಿದ್ದರು. 

ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ಸಾರಿ ಎಂದು ಬರೆದು 19 ವರ್ಷದ ಯುವಕ ಆತ್ಮಹತ್ಯೆ

ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ ಪೊಲೀಸರು ಸದ್ಯ ನಾರಯಣ, ಉಮೇಶ, ಅಶ್ವಥ್, ನೂತನನ್ನು ಬಂಧಿಸಿದ್ದಾರೆ. ಆರೋಪಿ ಉಮೇಶ್ ಕೊಟ್ಟ ಪ್ಲಾನ್ ಮೇರೆಗೆ ನಾರಯಣ್ ಕಿಡ್ನಾಪ್ ಪ್ಲಾನ್ ಮಾಡಿದ್ರು. ವಜ್ರದ ವ್ಯಾಪರಿ ಬಳಿ ಸಾಕಷ್ಟು ಹಣ ಇದೆ ಬೆದರಿಸಿದ್ರೆ ಪಕ್ಕಾ ಹಣ ಸಿಗುತ್ತೆ ಅನ್ನೋ ಪ್ಲಾನ್‌ನಲ್ಲಿ ಕಿಡ್ನಾಪ್ ಮಾಡಿದ್ದರು.

ಪ್ಲಾನ್ ವರ್ಕೌಟ್ ಆದ್ರೂ ಕೊನೆಗೆ ಖಾಕಿ ‌ಕೈಗೆ ಲಾಕ್ ಆದಾಗ ಸಾಲದ ಕತೆ ಕಟ್ಟಿ  ತಪ್ಪಿಸಿಕೊಳ್ಳುವ ನಾಟಕ ಆಡಿದ್ದರು.‌ ಆದರೆ ತನಿಖೆಯಲ್ಲಿ ಆರೋಪಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿರೋದು  ದೃಢಪಟ್ಟಿದ್ದು ಆರೋಪಿತರಿಂದ 15 ಲಕ್ಚ ನಗದು ಹಾಗೂ ಒಂದು ಕಾರ್ ಸೀಜ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ನೈಟಿ ಧರಿಸಿ ಕಳ್ಳತನಕ್ಕೆ ಯತ್ನ: ಬಾಯ್ ಫ್ರೆಂಡ್ ಜತೆ ಸೇರಿ ಯುವತಿಯಿಂದ ರಾಬರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!