ಸ್ನೇಹಿತನ ಬೈಕ್‌ನಲ್ಲಿ ಪಿಕ್‌ನಿಕ್‌ಗೆ ಹೋಗಿದ್ದ ​ಬೆಂಗಳೂರಿನ ಕಾಲೇಜು ವಿದ್ಯಾರ್ಥಿನಿ ಸಾವು

By Suvarna News  |  First Published Sep 16, 2022, 5:50 PM IST

ಸ್ನೇಹಿತನ ಜೊತೆ ಬೈಕ್‌ನಲ್ಲಿ ಡ್ಯಾಂ ನೋಡು ಪಿಕ್‌ನಿಕ್‌ ಹೋಗಿದ್ದ ಬೆಂಗಳೂರಿನ ಯುವತಿ ದುರಂತ ಅಂತ್ಯ ಕಂಡಿದ್ದಾಳೆ.


ಚಿಕ್ಕಬಳ್ಳಾಪುರ, (ಸೆಪ್ಟೆಂಬರ್.16): ಸ್ನೇಹಿತನ ಜತೆ ಬೈಕ್‌ನಲ್ಲಿ ಪಿಕ್‌ನಿಕ್‌ಗೆ ತೆರಳುತ್ತಿದ್ದ ಬೆಂಗಳೂರಿನ ಯುವತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ವಾಪಸಂದ್ರ ಬ್ರಿಡ್ಜ್​ ಬಳಿ ನಡೆದಿದೆ. 

ಬೆಂಗಳೂರು ಮೂಲದ ಯುವತಿ ಚೈತ್ರಾ (19) ಮೃತಪಟ್ಟ ವಿದ್ಯಾರ್ಥಿನಿ. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಚೈತ್ರಾ ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಶ್ರೀನಿವಾಸ ಸಾಗರ ಜಲಾಶಯ ನೋಡಲು ತೆರಳಿದ್ದಾಳೆ. ಆದ್ರೆ, ಜಲಾಶಯ ನೋಡಿ ಬೆಂಗಳೂರಿನತ್ತ ವಾಪಾಸ್ಸಾಗುವಾಗ ಚೈತ್ರಾ ಹೋಗುತ್ತಿದ್ದ ಬೈಕ್‌ಗೆ ಟಿಪ್ಪರ್ ಡಿಕ್ಕಿ ಗುದ್ದಿದೆ.

Tap to resize

Latest Videos

Udupi; 14 ಚಕ್ರದ ಗೂಡ್ಸ್ ಲಾರಿ ಚಲಾಯಿಸಿ ಇಬ್ಬರನ್ನು‌ಕೊಂದ ಹದಿನಾರರ ಬಾಲಕ!

ಸ್ಕೂಟಿಯಲ್ಲಿ ತೆರಳುತ್ತಿದ್ದ ಚೈತ್ರಾ ಹಾಗೂ ಲಿಖಿತ್ ಗೌಡ ಹೈವೇಗೆ ಎಂಟ್ರೀ ಕೊಡುತ್ತಿದ್ದಂತೆಯೇ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾತಮ ಚೈತ್ರಾ ಸಾವನ್ನಪ್ಪಿದ್ದು, ಗೆಳೆಯ  ಲಿಖಿತ್ ಗೌಡ ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಸರಣಿ ಅಪಘಾತ
ದಾವಣಗೆರೆ: ದಾವಣಗೆರೆ ಹೊರವಲಯದ ಕಲ್ಪನಹಳ್ಳಿ ಬಳಿ ಟ್ರ್ಯಾಕ್ಟರ್​​ ಮತ್ತು ಬೈಕ್​ಗೆ ಆ್ಯಂಬುಲೆನ್ಸ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಶಿಕ್ಷಕಿ ಜ್ಯೋತಿ (43) ಮತ್ತು ಬೈಕ್​ ಸವಾರ ಮಂಜುನಾಥ್ ​(68) ಸಾವಿಗೀಡಾಗಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಮೀರನ್​ಗೆ ತೀವ್ರ ಗಾಯಗಳಾಗಿವೆ.

ಶಿಕ್ಷಕಿ ಜ್ಯೋತಿ ಕುಟುಂಬ ಸಮೇತ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸದಲ್ಲಿ ಇರುವಾಗಲೇ ಜ್ಯೋತಿ ಪತಿಗೆ ಹೃದಯಾಘಾತವಾಗಿದೆ. ದಾವಣಗೆರೆ ಆಸ್ಪತ್ರೆಗೆ ಆ್ಯಂಬುಲೆನ್ಸ್​ನಲ್ಲಿ ಕರೆತರುವಾಗ ಈ ಅವಘಡ ನಡೆದಿದೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!