ಕೊರೋನಾ ಕಾಲದ ಸಾಲ; ಡೆತ್ ನೋಟ್ ಬರೆದಿಟ್ಟು ಬೆಂಗಳೂರಿನ ಕುಟುಂಬ ನಾಪತ್ತೆ

By Suvarna NewsFirst Published Aug 18, 2021, 10:28 PM IST
Highlights

* ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾದ ಬೆಂಗಳೂರಿನ ಕುಟುಂಬ
* ಕೊರೋನಾ ಕಾಲದಲ್ಲಿ ಸಾಲದ ಸುಳಿಗೆ ಸಿಕ್ಕಿದ್ದರು 
* ಮನೆಗೆ ಬಂದ ಮಗನಿಗೆ ವಿಚಾರ ಗೊತ್ತಾಗಿದೆ
* ಕುಟುಂಬಕ್ಕಾಗಿ ಪೊಲೀಸರ ಹುಡುಕಾಟ

ಬೆಂಗಳೂರು(ಆ. 18)  ಸೂಸೈಡ್ ನೋಟ್ ಬರೆದಿಟ್ಟು ಇಡೀ ಕುಟುಂಬವೇ ನಾಪತ್ತೆಯಾಗಿದೆ.  ಬೆಂಗಳೂರು ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈಗ ಇಡೀ ಕುಟುಂಬಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಗಾಂಧಿ, ಶಾಲಿನಿ, ಭನುಶ್ರೀ, ಹೇಮಶ್ರೀ ನಾಪತ್ತೆಯಾಗಿದ್ದಾರೆ. ದಂಪತಿಯ ಮತ್ತೋರ್ವ ಮಗ ಚಿರಂಜೀವಿ ತುಮಕೂರಿನಲ್ಲಿ ವಿದ್ಯಾಭ್ಯಾಸ
ಮಾಡುತ್ತಿದ್ದಾನೆ.

ಪ್ರತಿನಿತ್ಯ ಸಹೋದರಿ ಮತ್ತು ಪೋಷಕರ ಜೊತೆ ಮಾತನಾಡುತ್ತಿದ್ದ ಚಿರಂಜೀವಿ ಆ.12 ರಂದು ಮನೆಗೆ ಕರೆ‌ಮಾಡಿದಾಗ ಎಲ್ಲರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಭಯಗೊಂಡ ಚಿರಂಜೀವಿ ಪೋಷಕರ ಮನೆ ಬಳಿ ಇದ್ದ ತನ್ನ ಸ್ನೇಹಿತನಿಗೆ ಮಾಹಿತಿ ತಿಳಿಸಿದ್ದಾನೆ.

ಚಿಕ್ಕಮಗಳೂರು; ನಗ್ನ ವಿಡಿಯೋ ಮಾಡಿಕೊಂಡು ಹಣ ಪೀಕ್ತಿದ್ದ ತಾಯಿ-ಮಗಳು

ಮನೆಗೆ ಹೋಗಿ ಚೆಕ್ ಮಾಡಲು ಹೇಳಿದ್ದ. ಈ ವೇಳೆ ಮನೆ ಸಂಪೂರ್ಣ ಲಾಕ್ ಆಗಿತ್ತು. ಮನೆ‌‌ ಮಾಲೀಕರನ್ನ ಕೇಳಿದಾಗ ಅವರು ಫ್ಯಾಮಿಲಿ ಸಮೇತ ವಸ್ತು ಎಲ್ಲಾ ತೆಗೆದುಕೊಂಡು ಹೋಗಿದ್ದಾರೆ ಅಂದಿದ್ದಾರೆ. ಇದರಿಂದ ಮತ್ತಷ್ಟು ಶಾಕ್ ಆಗಿ ಬೆಂಗಳೂರಿಗೆ ಬಂದಿದ್ದ ಚಿರಂಜೀವಿ ತನ್ನ ಬಳಿ ಇದ್ದ ಡೂಪ್ಲಿಕೇಟ್ ಕೀ ತೆರೆದು ನೋಡಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಮನೆಯ ಕಿಟಿಕಿ ಬಳಿ ಸೂಸೈಡ್ ನೋಟ್ ಬರೆದಿಟ್ಟಿರುವ ಕುಟುಂಬ "ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ, ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ
ಸಾಯಲು ಬಿಡಿ.." ಎಂದು ಬರೆದಿಟ್ಟಿದೆ. ಕೂಡಲೇ ಬಗಲಗುಂಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಹುಡುಕಾಟ
ಆರಂಭಿಸಲಾಗಿದೆ. ಬಗಲಗುಂಟೆ

ಕೊರೋನಾ‌‌ ಸಂದರ್ಭದಲ್ಲಿ ಕುಟುಂಬ ಸಾಲದ ಸುಳಿಗೆ ಸಿಕ್ಕಿತ್ತು. ಸಾಲ ತೀರಿಸೋಕೆ ಹರಸಾಹಸ. ಪಟ್ರು ಸಹ ಯಾವುದೇ ಪ್ರಯೋಜನವಾಗಿರಲಿಲ್ಲ. ಸಾಲಗಾರರ ಕಾಟ ತಾಳಲಾರದೆ ಸಮಸ್ಯೆ ಅನುಭವಿಸುತ್ತಿದ್ದರು ಎನ್ನಲಾಗಿದೆ. 

click me!