Bengaluru: ರಾತ್ರಿ ಓಡಾಡಂಗಿಲ್ಲ ಎಂದು ಬೆದರಿಸಿ ಪೊಲೀಸರಿಂದಲೇ ದಂಪತಿ ಸುಲಿಗೆ!

By Govindaraj SFirst Published Dec 12, 2022, 6:44 AM IST
Highlights

ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದ ದಂಪತಿಯನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿವಿಚಾರಣೆ ನೆಪದಲ್ಲಿ ಬೆದರಿಸಿ 1 ಸಾವಿರ ಪಡೆದ ಆರೋಪದಡಿ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ಆದೇಶಿಸಿದ್ದಾರೆ.

ಬೆಂಗಳೂರು (ಡಿ.12): ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ರಾತ್ರಿ ಮನೆಗೆ ಬರುತ್ತಿದ್ದ ದಂಪತಿಯನ್ನು ಮಾರ್ಗ ಮಧ್ಯೆ ಅಡ್ಡಗಟ್ಟಿವಿಚಾರಣೆ ನೆಪದಲ್ಲಿ ಬೆದರಿಸಿ 1 ಸಾವಿರ ಪಡೆದ ಆರೋಪದಡಿ ಸಂಪಿಗೆಹಳ್ಳಿ ಠಾಣೆಯ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ಆದೇಶಿಸಿದ್ದಾರೆ. ಹೆಡ್‌ಕಾನ್‌ಸ್ಟೇಬಲ್‌ ರಾಜೇಶ್‌ ಮತ್ತು ಕಾನ್‌ಸ್ಟೇಬಲ್‌ ನಾಗೇಶ್‌ ಅಮಾನತಾದ ಪೊಲೀಸರು. ಡಿ.8ರ ತಡರಾತ್ರಿ ಈ ಘಟನೆ ನಡೆದಿದ್ದು, ಕಾರ್ತಿಕ್‌ ಎಂಬುವರರು ಟ್ವಿಟರ್‌ನಲ್ಲಿ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದರು. 

ಈ ಮಾಹಿತಿ ಆಧರಿಸಿ ಡಿಸಿಪಿ ಅನೂಪ್‌ ಶೆಟ್ಟಿ ಅವರು ಈ ಇಬ್ಬರು ಪೊಲೀಸರನ್ನು ಸೇವೆಯಿಂದ ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ. ಕಾರ್ತಿಕ್‌ ಹಾಗೂ ಅವರ ಪತ್ನಿ ಡಿ.8ರಂದು ಮಾನ್ಯತಾ ಟೆಕ್‌ ಪಾರ್ಕ್ ಬಳಿ ತಮ್ಮ ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿಗೆ ನಡೆದುಕೊಂಡು ಮನೆಗೆ ಬರುತ್ತಿದ್ದರು. ಈ ವೇಳೆ ಹೋಯ್ಸಳ ಗಸ್ತು ಸಿಬ್ಬಂದಿ ರಾಜೇಶ್‌ ಮತ್ತು ನಾಗೇಶ್‌, ಕಾರ್ತಿಕ್‌ ದಂಪತಿಯನ್ನು ತಡೆದಿದ್ದಾರೆ. ಈ ವೇಳೆ ರಾತ್ರಿ 11ರ ಬಳಿಕ ರಸ್ತೆಯಲ್ಲಿ ಓಡಾಡುವಂತಿಲ್ಲ. ನೀವು ಯಾರು, ನಿಮಗೂ ಇವರಿಗೂ ಏನು ಸಂಬಂಧ ಇತ್ಯಾದಿ ಪ್ರಶ್ನೆ ಕೇಳಿದ್ದಾರೆ. 

Bengaluru: ರೌಡಿ ಮೇಲೆ ಗುಂಡಿನ ದಾಳಿ: ಮೂವರ ಬಂಧನ

ಗುರುತಿನ ಚೀಟಿ ತೋರಿಸುವಂತೆ ಕೇಳಿದ್ದಾರೆ. ಆಗ ಕಾರ್ತಿಕ್‌ ದಂಪತಿ ತಮ್ಮ ಮೊಬೈಲ್‌ನಲ್ಲಿದ್ದ ಆಧಾರ್‌ ಕಾರ್ಡ್‌ ತೋರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಪೊಲೀಸರು, ದಂಪತಿಯ ಮೊಬೈಲ್‌ ಪಡೆದುಕೊಂಡು .3 ಸಾವಿರ ದಂಡ ಪಾವತಿಸುವಂತೆ ಬೆದರಿಸಿದ್ದಾರೆ. ದಂಡ ಪಾವತಿಸದಿದ್ದರೆ ಕಾನೂನಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ದಂಪತಿಯನ್ನು ಹೆದರಿಸಲಾಗಿದೆ. ಪೊಲೀಸರ ವರ್ತನೆಯಿಂದ ಹೆದರಿದ ದಂಪತಿ ಕೊನೆಗೆ ಕ್ಯೂಆರ್‌ ಕೋಡ್‌ ಬಳಸಿ ಪೊಲೀಸರಿಗೆ 1 ಸಾವಿರವನ್ನು ನೀಡಿ ಸ್ಥಳದಿಂದ ತೆರಳಿದ್ದಾರೆ. 

ಈ ಸಂಬಂಧ ನೊಂದ ಕಾರ್ತಿಕ್‌ ಸರಣಿ ಟ್ವೀಟ್‌ ಮಾಡಿ ಘಟನೆಯನ್ನು ಎಳೆnಎಳೆಯಾಗಿ ವಿವರಿಸಿದ್ದಾರೆ. ರಾತ್ರಿ 11ರ ಬಳಿಕ ಸಾರ್ವಜನಿಕರು ಓಡಾಡಬಾರದು ಎಂಬ ನಿಯಮವಿದೆಯೇ ಎಂದು ಪ್ರಶ್ನಿಸಿದ್ದಾರೆ. ಘಟನೆ ಬಳಿಕ ಮನೆಯಲ್ಲಿ ನಾನು ಮತ್ತು ನನ್ನ ಪತ್ನಿ ಸರಿಯಾಗಿ ನಿದ್ರೆ ಮಾಡಲು ಆಗಲಿಲ್ಲ. ಇಬ್ಬರು ಮಾನಸಿಕವಾಗಿ ನೊಂದಿದ್ದೇವೆ ಎಂದು ಕಾರ್ತಿಕ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಕುರುಪ್ ಸಿನಿಮಾ ಮಾದರಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ವಿಚಾರಣಾಧೀನ ಖೈದಿ ಜೈಲಿನಲ್ಲೇ ಆತ್ಮಹತ್ಯೆ

ಸಂತ್ರಸ್ತರನ್ನು ಸಂಪರ್ಕಿಸಿ ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಹೋಯ್ಸಳ ಸಿಬ್ಬಂದಿ ಕ್ಯೂಆರ್‌ ಕೋಡ್‌ ಮೂಲಕ .1 ಸಾವಿರ ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಇಂಥ ಘಟನೆಗಳು ನಡೆದಿದ್ದರೆ ಸಾರ್ವಜನಿಕರು ಗಮನಕ್ಕೆ ತರಬೇಕು.
-ಅನೂಪ್‌ ಶೆಟ್ಟಿ, ಈಶಾನ್ಯ ವಿಭಾಗದ ಡಿಸಿಪಿ.

click me!