Udupi: ಕುರುಪ್ ಸಿನಿಮಾ ಮಾದರಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ವಿಚಾರಣಾಧೀನ ಖೈದಿ ಜೈಲಿನಲ್ಲೇ ಆತ್ಮಹತ್ಯೆ

By Suvarna NewsFirst Published Dec 11, 2022, 9:33 PM IST
Highlights

ವಿಚಾರಣಾಧೀನ ಕೈದಿಯೊಬ್ಬ ತಾನು ಮಾಡಿದ ತಪ್ಪಿಗೆ ಪಶ್ಚಾತಾಪಗೊಂಡು ಜೈಲಿನಲ್ಲೇ ನೇಣಿಗೆ ಶರಣಾಗಿದ್ದಾನೆ. ತಾನು ಬಿಡುಗಡೆ ಆಗೋದೇ ಅನುಮಾನ. ‌ಇನ್ನಷ್ಟು ವರ್ಷ ತನ್ನ‌ ಪತ್ನಿ ಮಕ್ಕಳು ಅವಮಾನ ಎದುರಿಸಬೇಕು ಎಂದು ನೊಂದು ನೇಣಿಗೆ ಶರಣಾಗಿದ್ದಾನೆ.

ವರದಿ: ಶಶಿಧರ್ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಡಿ.11): ವಿಚಾರಣಾಧೀನ ಕೈದಿಯೊಬ್ಬ ತಾನು ಮಾಡಿದ ತಪ್ಪಿಗೆ ಪಶ್ಚಾತಾಪಗೊಂಡು ಜೈಲಿನಲ್ಲೇ ನೇಣಿಗೆ ಶರಣಾಗಿದ್ದಾನೆ. ತಾನು ಬಿಡುಗಡೆ ಆಗೋದೇ ಅನುಮಾನ. ‌ಇನ್ನಷ್ಟು ವರ್ಷ ತನ್ನ‌ ಪತ್ನಿ ಮಕ್ಕಳು ಅವಮಾನ ಎದುರಿಸಬೇಕು ಎಂದು ನೊಂದು ನೇಣಿಗೆ ಶರಣಾಗಿದ್ದಾನೆ. ಈ ಮೂಲಕ ಸಿನಿಮಾ ಮಾದರಿಯ ಕೊಲೆ ಪ್ರಕರಣವೊಂದಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಮನುಷ್ಯ ತನ್ನ ತಪ್ಪಿನ ಅರಿವಾಗಿ ಬದಲಾಗಬೇಕೆನ್ನುವ ದೃಷ್ಟಿಯಿಂದಲೇ ನ್ಯಾಯಾಲಯ ಜೈಲು ಶಿಕ್ಷೆಗೆ ಒಳಪಡಿಸುತ್ತೆ. ಆದ್ರೆ ಇಲ್ಲೊಬ್ಬ ವಿಚಾರಣಾಧೀನ ಕೈದಿ ಪಶ್ಚಾತಾಪಗೊಂಡು ಬದುಕನ್ನೇ ಕೊನೆಗೊಳಿಸಿದ್ದಾನೆ. ಜೈಲಿನಿಂದ ಹೊರಬರೋದೇ ಡೌಟು ಅಂತ ನೇಣಿಗೆ ಶರಣಾಗಿದ್ದಾನೆ. 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿ ಮುಂಜಾನೆ 5 ಗಂಟೆಗೆ ಪಂಚೆಯಿಂದ ನೇಣಿಗೆ ಶರಣಾಗಿದ್ದಾನೆ. ಮೃತ ಆರೋಪಿಯ ಹೆಸರು ಸದಾನಂದ ಸೇರ್ವೆಗಾರ್. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಆರೋಪಿ ಸದಾನಂದ.

ಈ‌ ಸಾವಿಗೆ ಪಶ್ಚಾತಾಪ ಅಂತ ಗೊತ್ತಾಗಿದ್ದೇ ಈತ ಬರೆದಿರೋ ಡೈರಿಯಿಂದ. ಪ್ರತೀ ನಿತ್ಯ ತಾನು ಮಾಡಿದ ತಪ್ಪು, ತನ್ನ ತಪ್ಪಿನಿಂದ ಪತ್ನಿ ಮಕ್ಕಳು ಅನುಭವಿಸುತ್ತಿರೋ‌ ನೋವು ಹೀಗೆ ಎಲ್ಲಾ ವಿಚಾರದಿಂದ ‌ನೊಂದಿರುವುದು ಡೈರಿಯಲ್ಲಿ ಬರೆದಿರೋ ಬರವಣಿಗೆಯಿಂದ ಗೊತ್ತಾಗುತ್ತೆ. ತಾನು ಕಾರ್ಕಳ ತಾಲೂಕು ಕಚೇರಿಯಲ್ಲಿ ಸರ್ವೇಯರ್ ಆಗಿದ್ದ ವೇಳೆ ಫೋರ್ಜರಿ ಕೇಸಿನಲ್ಲಿ ಸಿಕ್ಕಿಬಿದ್ದಾಗ ತಾನು ಬಚಾವಾಗಲು ಪ್ರೇಯಸಿ ಶಿಲ್ಪಾ‌ ಸಹಾಯದಿಂದ ವ್ಯಕ್ತಿಯೊಬ್ಬನನ್ನು ಕೊಲ್ಲಿಸಿದ್ದ. 

ಹತ್ಯೆಯಾದ ಹುಡುಗಿ 7 ವರ್ಷದ ಬಳಿಕ ಜೀವಂತವಾಗಿ ಪತ್ತೆ, ಕೊಲೆ ಆರೋಪಿಗೆ ಮುಗಿದಿಲ್ಲ ಜೈಲು ಶಿಕ್ಷೆ!

ಆನಂದ ಎಂಬ ಅಮಾಯಕನನ್ನ ಹನಿಟ್ರ್ಯಾಪ್ ಮೂಲಕ ವಯಾಗ್ರ ಎಂದು ನಿದ್ದೆ ಮಾತ್ರೆ ನೀಡಿ ಬೈಂದೂರು ತಾಲೂಕಿನ ಹೆನ್ಬೇರು ಎಂಬ ನಿರ್ಜನ ಪ್ರದೇಶದಲ್ಲಿ ಜುಲೈ 12 ರಂದು ಕಾರು‌ ಸಮೇತ ಸುಟ್ಟು ಹಾಕಿದ್ದ. ಈ‌ಮೂಲಕ  ತಾನೇ ಮೃತಪಟ್ಟಂತೆ ಬಿಂಬಿಸಲು ಹೋಗಿ ಸಿಕ್ಕಿ ಬಿದ್ದಿದ್ದ. 

Shivamogga: ಕೈದಿ ಬಳಿ ಗಾಂಜಾ ಪತ್ತೆ, ಪೊಲೀಸರಿಗೆ ಹುಟ್ಟಿತು ಹಲವು ಅನುಮಾನ

ಕೊಲೆ ಮಾಡುವ ಮೊದಲೇ ಆಲೋಚನೆ ಮಾಡಿದ್ರೆ ಪತ್ನಿ ಮಕ್ಕಳೊಂದಿಗೆ ಹೇಗೋ ಜೀವನ ಮಾಡಬಹುದಿತ್ತು.‌ ಜೊತೆಗೆ ಒಂದು ಅಮಾಯಕ ಜೀವವೂ ಉಳಿಯುತ್ತಿತ್ತು. ಇಲ್ಲಿ ಸದಾನಂದ ಒಂದು ವೇಳೆ ಜೈಲಿನಲ್ಲೇ ಮೃತಪಟ್ಟಿದ್ರೆ ಪೊಲೀಸ್ ಸಿಬ್ಬಂದಿಗಳು ಶಿಕ್ಷೆಗೆ ಒಳಪಡಬೇಕಿತ್ತು. ತಪ್ಪು ಮಾಡುವ ಹಾಗೂ ನಡೆಯುವ ಮೊದಲು ಎಲ್ಲರೂ ಜಾಗೃತೆಯಾಗಿರಲೇ ಬೇಕು ಅಲ್ವಾ!

click me!