ಬೆಂಗಳೂರಿನಲ್ಲಿ ರೌಡಿಶೀಟರ್ ಅಂಡ್ ಗ್ಯಾಂಗ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಆರ್‌ಟಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೋಡ್ಕೆ ಇಮ್ರಾನ್ ಬಂಧಿತ ಆರೋಪಿ.
ಬೆಂಗಳೂರು (ನ.27): ಬೆಂಗಳೂರಿನಲ್ಲಿ ರೌಡಿಶೀಟರ್ ಅಂಡ್ ಗ್ಯಾಂಗ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಆರ್‌ಟಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ದಾಂಧಲೆ ಪ್ರಕರಣ ಸಂಬಂಧ ರೌಡಿಶೀಟರ್ ಬೋಡ್ಕೆ ಇಮ್ರಾನ್ ಸೇರಿದಂತೆ ನಾಲ್ವರು ಆರೋಪಿಗಳು ಅರೆಸ್ಟ್. ಇಮ್ರಾನ್. ಮಾಜ್. ಮೋಹನ್ ಸೇರಿ ನಾಲ್ವರು ಅರೆಸ್ಟ್. ಈ ಹಿಂದೆ ಹಲವಾರು ಕೇಸ್ ನಲ್ಲಿ ಭಾಗಿಯಾಗಿದ್ದ ಆರೋಪಿಗಳು. ಕೆಲವು ದಿನಗಳ ಹಿಂದೆ ಡಿಜೆ.ಹಳ್ಳಿ ಠಾಣಾ ವ್ಯಾಪ್ತಿಯ ಮೋದಿ ರೋಡ್‌ನಲ್ಲಿನ ಬಾರ್ ಗೆ ನುಗ್ಗಿ ಲಾಂಗ್ ತೋರಿಸಿ ದಂಧಾಲೆ ನಡೆಸಿದ್ದಇಮ್ರಾನ್ ಅಂಡ್ ಗ್ಯಾಂಗ್. ಬಳಿಕ ಬೀಡಾ ಅಂಗಡಿ ಮಾಲೀಕ ಶಿವಣ್ಣಗೆ ಲಾಂಗ್ ತೋರಿಸಿ 6 ಸಾವಿರ ಕಸಿದು ಪರಾರಿಯಾಗಿದ್ದ ದುಷ್ಟರು. ಅಷ್ಟೇ ಅಲ್ಲದೇ ಮೋದಿ ರೋಡ್‌ನಲ್ಲಿ ನಿಲ್ಲಿಸಿದ್ದ ಸಿಕ್ಕ ಸಿಕ್ಕ ಕಾರು, ಆಟೋಗಳನ್ನು ಹೊಡೆದು ಜಖಂಗೊಳಿಸಿದ್ದ ಕಿಡಿಗೇಡಿ. ದೊಣ್ಣೆ ಬೀಸೋ ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.
undefined
ಸತ್ತೇ ಹೋಗಿದ್ದಾನೆಂದು ಬಿಂಬಿಸಿ 2 ವರ್ಷದಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ರೌಡಿ ಅರೆಸ್ಟ್
ಆರ್‌ಟಿ ನಗರ, ಜೆಸಿ ನಗರ ರೌಡಿಶೀಟರ್ ಆಗಿರುವ ಬೋಡ್ಕೆ ಇಮ್ರಾನ್. ಟ್ಯಾಂಕ್ ಮುಲ್ಲಾ ,ಹುಸೇನಾ ಮಸೀದಿ ,ಪಿಎನ್ ಟಿ ಸರ್ಕಲ್ ನಲ್ಲೂ ಇದೇ ಕೃತ್ಯ ಎಸಗಿದ ಖದೀಮ. ಮೊನ್ನೆ ನಡೆದ ಗಲಾಟೆ ಬಳಿಕ ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು. ಸಿಸಿಟಿವಿ ದೃಶ್ಯ ಪರಿಶೀಲಿಸಿ ಆರೋಪಿ ಇಮ್ರಾನ್ ಬಂಧಿಸಿರುವ ಪೊಲೀಸರು. ಸದ್ಯ ರೌಡಿಶೀಟರ್ ವಿಚಾರಣೆ ಮುಂದುರಿಸಿದ್ದಾರೆ.
ಉಳಿದಿಬ್ಬರು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಾರ್ವಜನಿಕರನ್ನು ಭಯ ಪಡಿಸಿ ಹಣ ವಸೂಲಿ ಇಳಿದಿದ್ದ ಗ್ಯಾಂಗ್. ಬೆಂಗಳೂರಿನಲ್ಲಿ ಪೊಲೀಸರಿಗೂ ಕೇರ್ ಮಾಡದ ರೌಡಿಗಳು. ಪೊಲೀಸರ ಭಯವೇ ಇಲ್ಲದೇ ಕೃತ್ಯ ಎಸಗಿರೋ ಬೋಡ್ಕಾ ಇಮ್ರಾನ್ ಗ್ಯಾಂಗ್
ಸದ್ಯ ಆರೋಪಿಯನ್ನ ಬಂಧಿಸಿರುವ ಅರ್ ಟಿ. ನಗರ ಪೊಲೀಸ್ರು.