ಉಂಡು ಹೋದ ಕೊಂಡು ಹೋದ ಖತರ್ನಾಕ್ ಕಳ್ಳ; ಬಾಡೂಟಕ್ಕೆ ಬಂದವ ಚಿನ್ನ ದೊಚಿ ಪರಾರಿ!

By Ravi JanekalFirst Published Dec 29, 2023, 1:20 PM IST
Highlights

ಮನೆಗೆ ಬಾಡೂಟಕ್ಕೆ ಬಂದವ ಹೊಟ್ಟೆಬಿರಿಯುವಂತೆ ತಿಂದು ಹೋಗಿದ್ದಲ್ಲದೇ ಕೇಜಿಗಟ್ಟಲೇ ಚಿನ್ನ ದೋಚಿ ಪರಾರಿಯಾಗಿದ್ದ ಖತರ್ನಾಕ್‌ ಖದೀಮನನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಟ್ಟಿಗೆ ಪಾಳ್ಯ ಪವನ್ ಬಂಧಿತ ಆರೋಪಿ. ರೇವತಿ ಎಂಬುವವರಿಗೆ ಸೇರಿದ್ದ ವಿಲ್ಲಾದಲ್ಲಿ ನಡೆದಿದ್ದ ಕಳ್ಳತನ. 18-20 ಕೆಜಿ ಬೆಳ್ಳಿ 1 ಕೆಜಿ ಗೂ ಹೆಚ್ಚು ಚಿನ್ನಾಭರಣ ದೋಚಿದ್ದ ಖದೀಮ. 

ಬೆಂಗಳೂರು (ಡಿ.29): ಮನೆಗೆ ಬಾಡೂಟಕ್ಕೆ ಬಂದವ ಹೊಟ್ಟೆಬಿರಿಯುವಂತೆ ತಿಂದು ಹೋಗಿದ್ದಲ್ಲದೇ ಕೇಜಿಗಟ್ಟಲೇ ಚಿನ್ನ ದೋಚಿ ಪರಾರಿಯಾಗಿದ್ದ ಖತರ್ನಾಕ್‌ ಖದೀಮನನ್ನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕೊಟ್ಟಿಗೆ ಪಾಳ್ಯ ಪವನ್ ಬಂಧಿತ ಆರೋಪಿ. ರೇವತಿ ಎಂಬುವವರಿಗೆ ಸೇರಿದ್ದ ವಿಲ್ಲಾದಲ್ಲಿ ನಡೆದಿದ್ದ ಕಳ್ಳತನ. 18-20 ಕೆಜಿ ಬೆಳ್ಳಿ 1 ಕೆಜಿ ಗೂ ಹೆಚ್ಚು ಚಿನ್ನಾಭರಣ ದೋಚಿದ್ದ ಖದೀಮ. 

Latest Videos

ಅಂದು ನಡೆದಿದ್ದೇನು?

ಆಗಸ್ಟ್ 28 ರಂದು ಮನೆಯಲ್ಲಿ ಪೂಜೆ ಮಾಡಿಸಿದ್ದ ರೇವತಿ. ದೇವರ ಪೂಜೆ ಮಾಡಿಸಿ ಬಾಡೂಟ ಮಾಡಿಸಿದ್ದಳು. ಬಾಡೂಟಕ್ಕೆ ಸ್ಥಳೀಯರನ್ನು ಕರೆದು ಊಟ ಹಾಕಿಸಿದ್ದಳು. ಈ ವೇಳೆ ಪಕ್ಕದ ಅಪಾರ್ಟ್ಮೆಂಟ್ ಗಳಲ್ಲಿ ಪೈಂಟಿಂಗ್ ಕೆಲಸ ಮಾಡ್ತಿದ್ದ ಆರೋಪಿ ಪವನ್ ಆ ದಿನ ಸ್ಥಳೀಯರೊಂದಿಗೆ ಬೆರೆತು ಬಾಡೂಟಕ್ಕೆ ಬಂದಿದ್ದ. ಈ ವೇಳೆ ಮನೆಯಲ್ಲಿ ಹಾಗೂ ಮೈ ಮೇಲೆ ಹಾಕಿದ್ದ ಚಿನ್ನಾಭರಣ ನೋಡಿ ಕಣ್ಣು ಹಾಕಿದ್ದ ಆರೋಪಿ. ಅಂದಿನಿಂದ ಪ್ರತಿನಿತ್ಯ ಮನೆ ವಾಚ್ ಮಾಡುತ್ತಿದ್ದ. 

ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಕಳೆದೆರಡು ದಿನಗಳಿಂದ ಕ್ಲೋಸ್ ಆಗಿದ್ದ ಮಂತ್ರಿಮಾಲ್ ಇಂದು ಓಪನ್

ಸೆ.6 ನೇ ತಾರೀಖು ಮನೆಯಲ್ಲಿ ಯಾರೂ ಇರಲಿಲ್ಲ. ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ್ದ ಕುಟುಂಬ. ಮನೆಯಲ್ಲಿ ಯಾರೂ ಇಲ್ಲದ ಸಮಯ ಗಮನಿಸಿದ್ದ ಖದೀಮ. ಇದೇ ಸರಿಯಾದ ಸಮಯ ಎಂದುಕೊಂಡು ಮನೆಗೆ ನುಗ್ಗಿ ಗೋಡೆ ಒಡೆದು ಕೇಜಿಗಟ್ಟಲೇ ಬೆಳ್ಳಿ, ಚಿನ್ನ ದೋಚಿ ಪರಾರಿಯಾಗಿದ್ದ.ಸೆ. 7 ನೇ ತಾರೀಕು ಮೈಸೂರಿನಿಂದ ವಾಪಸ್ ಮನೆಗೆ ಬಂದಾಗ ಶಾಕ್ ಆಗಿದ್ದ ಕುಟುಂಬ. ಮನೆ ಗೋಡೆ ಒಡೆದು  ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ. ಕೂಡಲೇ ಕಳ್ಳತನ ಪ್ರಕರಣ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬೆನ್ನು ಹತ್ತಿದ ಪೊಲೀಸರು ಕೊನೆಗೆ ಖತರ್ನಾಕ್ ಖದೀಮನನ್ನು ಬಂಧಿಸಿದ್ದ ಪೊಲೀಸರು. ವಿಚಾರಣೆ ವೇಳೆ ಬಾಡೂಟದ ಅಸಲಿ ಕಥೆ ಬಾಯ್ಬಿಟ್ಟಿದ್ದ ಖದೀಮ.

ಬೆಂಗಳೂರು: ತನ್ನ ತಪ್ಪಿಲ್ಲದಿದ್ದರೂ ಕಾಲೇಜಿಂದ ಸಸ್ಪೆಂಡ್, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

click me!