ಬೆಂಗಳೂರಿನಲ್ಲಿ ಪೊಲೀಸರ ಕಾರ್ಯಾಚರಣೆ ಜಿಲೆಟಿನ್ ಕಡ್ಡಿಗಳು, ಸ್ಪೋಟಕ ವಸ್ತುಗಳು ಪತ್ತೆ!

By Suvarna NewsFirst Published Mar 19, 2024, 11:47 AM IST
Highlights

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಎಚ್ಚೆತ್ತ ಬೆಂಗಳೂರಿನ ಪೊಲೀಸರು ನಗರದಲ್ಲಿ ಅನೇಕ ಕಡೆ ಶೋಧ ಕಾರ್ಯ ನಡೆಸಿದ್ದು, ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್ ಹಾಗು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ.

ಬೆಂಗಳೂರು (ಮಾ.19): ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಬಳಿಕ ಎಚ್ಚೆತ್ತ ಬೆಂಗಳೂರಿನ ಪೊಲೀಸರು ನಗರದಲ್ಲಿ ಅನೇಕ ಕಡೆ ಶೋಧ ಕಾರ್ಯ ಆರಂಭಿಸಿದ್ದಾರೆ.  ಸ್ಪೋಟಕ ವಸ್ತು ಇಟ್ಟಿದ ಜಾಗದ ಮೇಲೆ ದಾಳಿ ಮಾಡಿದ್ದು, ಹಲವು ಕಡೆ ಜಿಲೆಟಿನ್ ಕಡ್ಡಿಗಳು ಮತ್ತು ಡಿಟೋನೇಟರ್ ಹಾಗು ಸ್ಪೋಟಕ ವಸ್ತುಗಳು ಪತ್ತೆಯಾಗಿದೆ. ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಬೆಂಗಳೂರು: ನಕಲಿ ಡೈಮಂಡ್‌ ಮಾರಲು ಯತ್ನ, ನಾಲ್ವರ ಬಂಧನ

ಬೆಳ್ಳಂದೂರು ಬಳಿಯ ಚಿಕ್ಕನಾಯಕನಹಳ್ಳಿ ದಿಣ್ಣೆಯ ಜಾಗದ ಮೇಲೆ ದಾಳಿ ನಡೆಸಿದ್ದು, ಈ ವೇಳೆ  ಅಕ್ರಮವಾಗಿ ಇಟ್ಟಿದ್ದ ಜಿಲೆಟಿನ್ ಹಾಗೂ ಸ್ಪೋಟಿಸಲು ಇಟ್ಟಿದ್ದ ಮೆಟಿರಿಯಲ್ ವಶಕ್ಕೆ ಪಡೆದಿದ್ದಾರೆ. ಬಂಡೆ ಒಡೆಯಲು ಇಟ್ಟಿದ್ದ ಸ್ಪೋಟಕ ವಸ್ತುಗಳು. ಇವು ಲೆಸೆನ್ಸ್ ಇಲ್ಲದೇ ಅಕ್ರಮವಾಗಿ ಇಟ್ಟಿದ್ದ ಸ್ಫೋಟಕ ವಸ್ತುಗಳಾಗಿದ್ದು, ಸದ್ಯ ಪೊಲೀಸರು ಜಿಲೆಟಿನ್ ಹಾಗೂ ಬ್ಲಾಸ್ಟ್ ಮಾಡಲು ಇಟ್ಟಿದ್ದ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಾಲಕಿ ಮೇಲೆ ಸಂಶಯ ಪಟ್ರಾ ಶಿಕ್ಷಕರು, 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ!

ಪ್ರಕ್ರಿಯಾ ಶಾಲೆ ಮುಂಭಾಗ ಖಾಲಿ ಜಮೀನಿನಲ್ಲಿ ಟ್ರಾಕ್ಟರ್ ಒಂದರಲ್ಲಿ ಈ ವಸ್ತುಗಳನ್ನು ಇಡಲಾಗಿತ್ತು. ಮೆಲ್ನೋಟಕ್ಕೆ ಕಟ್ಟಡ ನಿರ್ಮಾಣ ಮಾಡುವ ಜಾಗದಲ್ಲಿ ಬಂಡೆಗಳ ಸ್ಫೋಟ ಮಾಡಲು ತಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲು  ಮಾಡಲಾಗಿದ್ದು, ಪೊಲೀಸರು ಪರಿಶೀಲನೆ ಹಾಗೂ ತನಿಖೆ ನಡೆಸುತ್ತಿದ್ದಾರೆ. ಇನ್ನು  ಟ್ರ್ಯಾಕ್ಟರ್ ಡ್ರೈವರ್ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

click me!