* ಮಲ್ಲೇಶ್ವರಂ ಪೊಲೀಸ್ರ ಭರ್ಜರಿ ಕಾರ್ಯಾಚರಣೆ
* ತಿಮಿಂಗಲ ವಾಂತಿ ಅಂಬರ್ ಗ್ರಿಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ
* ಪುನೀತ್ ಕುಮಾರ್ , ಮಧುಕುಮಾರ್ , ನಂದೀಶ್, ಯೋಗೇಶ್ , ಹಾಗೂ ಗೋಪಾಲ್ ಬಂಧಿತ ಆರೋಪಿಗಳು
* ಬಂಧಿತ ಆರೋಪಿಗಳಿಂದ ಬರೊಬ್ಬರಿ 17 ಕೋಟಿ ಬೆಲೆಬಾಳುವ ಅಂಬರ್ ಗ್ರೀಸ್ ವಶಕ್ಕೆ
ಬೆಂಗಳೂರು(ಅ. 21) ಮಲ್ಲೇಶ್ವರದ ಪೊಲೀಸರು (Bengaluru Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದು ತಿಮಿಂಗಲದ ವಾಂತಿ ಅಂಬರ್ ಗ್ರೀಸ್ (Ambergris)ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪುನೀತ್ ಕುಮಾರ್ , ಮಧುಕುಮಾರ್ , ನಂದೀಶ್, ಯೋಗೇಶ್ , ಹಾಗೂ ಗೋಪಾಲ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ 17 ಕೋಟಿ ರೂ. ಬೆಲೆಬಾಳುವ ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಐವರು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಪ್ರಸನ್ನ ಅಲಿಯಾಸ್ ರ್ಯಾಬಿಟ್ ಎಸ್ಕೇಪ್ ಆಗಿದ್ದಾನೆ.
ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!
undefined
ಇತ್ತೀಚೆಗೆ ಡ್ರಗ್ಸ್(ಧರುಗಸ) ಜತೆ ಈ ಅಂಬರ್ ಗ್ರೀಸ್ ಮಾರಾಟದ ಪ್ರಕರಣಗಳು ಒಂದಾದ ಮೇಲೆ ಒಂದು ದಾಖಲಾಗುತ್ತಿದೆ. ಪೊಲೀಸರ ಗಾಳಕ್ಕೆ ಆರೋಪಿಗಳು ಸೆರೆ ಸಿಕ್ಕುತ್ತಿದ್ದಾರೆ.
ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 1.7 ಕೋಟಿ ರೂ. ಮೌಲ್ಯವಿದೆ ಎನ್ನುವುದು ಲೆಕ್ಕಾಚಾರ.
ಸತ್ತ ತಿಮಿಂಗಲಿದೊಳಗಿತ್ತು ಕೋಟಿಗಟ್ಟಲೇ ನಿಧಿ
ಒಂದಿಷ್ಟು ಮಾಹಿತಿ; ಹಲವು ದೇಶಗಳು ಅಂಬರ್ ಗ್ರೀಸ್ ಅಥವಾ ಗ್ರೇ ಆಂಬರ್ ಕಾನೂನು ಬಾಹಿರ ಚಟುವಟಿಗೆ ಎಂದು ಘೋಷಣೆ ಮಾಡಿದವು. ಅಂಬರ್ ಗ್ರೀಸ್ ಹಿಡಿದುಕೊಂಡು ನಡೆದರೆ ಪ್ಲೇಗ್ ಬರುವುದಿಲ್ಲ ಎಂಬ ನಂಬಿಕೆಯೂ ಒಂದು ಕಾಲದಲ್ಲಿತ್ತು. ತಲೆನೋವು, ಒತ್ತಡ ನಿವಾರಣೆಗೆ ಇದನ್ನು ಔಷಧ ಎಂದು ಸುದ್ದಿ ಹಬ್ಬಿಸಿದ್ದರೂ ಇದೆ. ಹಾಲಿವುಡ್ (Hollywood)ನಲ್ಲಿ ಇದೇ ಅಂಬರ್ ಗ್ರೀಸ್ ಕತೆ ಇಟ್ಟುಕೊಂಡು ಸಿನಿಮಾಗಳು ಆಗಿವೆ. ಅಳವಿನ ಅಂಚಿನಲ್ಲಿರುವ ತಿಮಿಂಗಿಲ ರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ನಡುವೆ ಮಾತುಕತೆಯೂ ಆಗಿದೆ.
ವೀರ್ಯ ತಿಮಿಂಗಿಲದ ಪಿತ್ತರಸ ನಾಳದ ಸ್ರವಿಸುವಿಕೆಯಿಂದ ಆ್ಯಂಬರ್ ಗ್ರಿಸ್ ರೂಪುಗೊಳ್ಳುತ್ತದೆ. ಇದು ಸಾಮಾನ್ಯವಾಗಿ ದೈತ್ಯ ಸ್ಕ್ವಿಡ್‌ಗಳು ಅಥವಾ ಕಟಲ್‌ಫಿಶ್‌ನ ತ್ಯಾಜ್ಯವಾಗಿರುತ್ತದೆ. ತಿಮಿಂಗಿಲವು ಅದನ್ನು ವಾಂತಿ ಅಥವಾ ಮಲ ವಸ್ತುವಾಗಿ ಕಳುಹಿಸುತ್ತದೆ. ಸಮುದ್ರದಲ್ಲಿ ತೇಲುತ್ತಿರುವಂತೆ ಕಂಡುಬರುತ್ತದೆ.
ಆ್ಯಂಬರ್ ಗ್ರೀಸ್ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಪಾನ್, ಆಸ್ಟ್ರೇಲಿಯಾ ಮತ್ತು ಮೊಲುಕನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಹಲವಾರು ವರ್ಷಗಳ ನಂತರ ತೂಕದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ.