Bengaluru: ಮೈದುನನ ತಿಂಗಳ ಕಾರ್ಯಕ್ಕೆ ಅಡುಗೆ ತಯಾರಿ: ಗ್ಯಾಸ್‌ ಬೆಂಕಿ ತಗುಲಿ ಸಾವನ್ನಪ್ಪಿದ ಅತ್ತಿಗೆ

Published : Feb 07, 2023, 05:48 PM IST
Bengaluru: ಮೈದುನನ ತಿಂಗಳ ಕಾರ್ಯಕ್ಕೆ ಅಡುಗೆ ತಯಾರಿ: ಗ್ಯಾಸ್‌ ಬೆಂಕಿ ತಗುಲಿ ಸಾವನ್ನಪ್ಪಿದ ಅತ್ತಿಗೆ

ಸಾರಾಂಶ

ಮೈದುನನ ತಿಂಗಳ ತಿಥಿಯ ಕಾರ್ಯಕ್ಕೆ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್‌ ಸ್ಟೌವ್‌ನಿಂದ ಅಡುಗೆ ಮಾಡುವ ಮಹಿಳೆಯ ಬಟ್ಟೆಗೆ ಬೆಂಕಿ ತಗುಲಿದ್ದು, ಅಲ್ಲಿಂದ ಹೊರಬರಲಾಗದೇ ಬೆಂಕಿಯಲ್ಲಿ ಸುಟ್ಟುಕೊಂಡು ಸಾವನ್ನಪ್ಪಿದ್ದಾಳೆ.

ಬೆಂಗಳೂರು (ಫೆ.07): ಕಳೆದೊಂದು ತಿಂಗಳ ಹಿಂದೆ ಮೈದುನನ್ನು ಕಳೆದುಕೊಂಡು ಆತನ ತಿಂಗಳ ತಿಥಿಯ ಕಾರ್ಯಕ್ಕೆ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್‌ ಸ್ಟೌವ್‌ನಲ್ಲಿ ಬಟ್ಟೆಗೆ ಬೆಂಕಿ ತಗುಲಿದ್ದು, ಅಲ್ಲಿಂದ ಹೊರ ಬರುವಾಗ ಸಿಲಿಂಡರ್‌ ಗ್ಯಾಸ್‌ ಪೈಪ್‌ ಹಾಗೂ ಇತರೆ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಅಲ್ಲಿಂದ ಹೊರಬರಲಾಗದೇ ಅಡುಗೆ ಮಾಡುತ್ತಿದ್ದ ಮಹಿಳೆ ಬೆಂಕಿಯಲ್ಲಿ ಸುಟ್ಟುಕೊಂಡು ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ಮಲ್ಲೇಶ್ವರದ ಮಂತ್ರಿಮಾಲ್‌ ಹಿಂಭಾಗದಲ್ಲಿನ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಬೀಳುತ್ತಿದ್ದಂತೆ ಸ್ಥಳೀಯರ ಹಾಗೂ ಮನೆಯ ಇತರೆ ಸದಸ್ಯರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ವಾಹನ ಬೆಂಕಿಯನ್ನು ನಂದಿಸಿ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ದೇಹದ ಬಹುತೇಕ ಭಾಗಗಳು ಸುಟ್ಟು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ವಿಕ್ಟೋರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ದೇಹದ ಬಹುಭಾಗ ಸುಟ್ಟಿದ್ದರಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಅಡುಗೆ ಮಾಡಲು ಸಹಾಯಕಳಾಗಿದ್ದ ನೆರೆಮನೆಯ ಮಹಿಳೆಗೆ ಕೂಡ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ , ಗರ್ಭಿಣಿ ಸೇರಿ ಇಬ್ಬರೂ ಸಜೀವ ದಹನ

ಬೆಂಕಿಯನ್ನು ಆರಿಸಲು ಪ್ರಯತ್ನಬೆಂಕಿ ಆಕಸ್ಮಿಕ ಘಟನೆಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ಮೇರಿ (55) ಎಂದು ಗುರುತಿಸಲಾಗಿದೆ. ಅಡುಗೆ ಮಾಡುವಾಗ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದೆ. ಸಂಪಿಗೆ ರಸ್ತೆಯಿಂದ ರಾಜಾಜಿನಗರ ಕಡೆ ಹೋಗುವ ರಸ್ತೆಯಲ್ಲಿ ಮನೆಯಿದ್ದು, ತಕ್ಷಣವೇ ಸಾರ್ವಜನಿಕರ ಗಮನಕ್ಕೆ ಬಂದಿದೆ. ಇನ್ನು ಬೆಂಕಿಯನ್ನು ಆರಿಸಲು ಪ್ರಯತ್ನ ಮಾಡಿದರೂ ಬೆಂಕಿಯ ಜ್ವಾಲೆ ಜೋರಾಗಿ ಹರಡಿಕೊಂಡಿದೆ. ಈ ಘಟನೆಯ ವೇಳೆ ಮನೆಯಲ್ಲಿಯೇ ಇದ್ದ ಮೇರಿ ಮೃತರಾಗಿದ್ದಾರೆ. ಇದೇ ವೇಳೆ ಮೇರಿಯ ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಮೃತ ಮೇರಿ ಮಗಳು ಕರ್ಪುಗಂ ಪಾರು: ಮನೆಯಲ್ಲಿ ಬೆಂಕಿ ಪ್ರಕರಣದ ಅನಾಹುತದ ಬಳಿಕ ಸ್ಥಳೀಯ ಮಲ್ಲೇಶ್ವರ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಬೆಂಕಿಯಿಂದ ಸಣ್ಣಪುಟ್ಟ ಸುಟ್ಟಗಾಯಗಳಿಂದ ಬಳಲುತ್ತಿದ್ದ ಮೇರಿ ಮಗಳು ಕರ್ಪುಗಂ ಅವರನ್ನು ವಿಚಾರಣೆ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಅಡುಗೆ ಮಾಡುವ ವೇಳೆ ಬೆಂಕಿ ಹತ್ತಿಕೊಂಡಿದ್ದಾಗಿ ತಿಳಿಸಿದ್ದಾರೆ. ಬೆಂಕಿಯಿಂದಾಗಿ ಮನೆಯಲ್ಲಿದ್ದ ಲ್ಯಾಪ್ ಟಾಪ್, ಬಟ್ಟೆ, ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಮೃತ ಮೇರಿ ಮನೆ ಸಮೀಪ ಸಣ್ಣ ಹೊಟೇಲ್ ನಡೆಸುತ್ತಿದ್ದಳು. ಸದ್ಯ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Bengaluru Rape: ಕಾಶ್ಮೀರದ ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಯತ್ನ: ಪಾರ್ಟಿ ಕೊಡಿಸೋ ನೆಪದಲ್ಲಿ ಕುಕೃತ್ಯ

ಘಟನೆಯ ಸಂಪೂರ್ಣ ವಿವರ: ಇಂದು ಮೃತ ಮೇರಿ ಮೈದುನನ ತಿಂಗಳ ಕಾರ್ಯ ಇತ್ತು. ಅದಕ್ಕೆ ಮನೆಯಲ್ಲಿ ಮೇರಿ ಅಡುಗೆ ಮಾಡುತ್ತಿದ್ದರು. ಅಡುಗೆ ವೇಲೆ ತಕ್ಷಣ ಸ್ಟವ್ ನಲ್ಲಿ ಬೆಂಕಿ ಹೆಚ್ಚಾಗಿದೆ. ಬೆಂಕಿ ಹೆಚ್ಚಾಗಿ ಪಕ್ಕದಲ್ಲೇ ಇಟ್ಟಿದ್ದ ಬಟ್ಟೆಗೆ ಬೆಂಕಿ ಹತ್ತಿಕೊಂಡಿದೆ. ಬಟ್ಟೆಗೆ ಬೆಂಕಿ ತಗಲಿದ ನಂತರ ಗ್ಯಾಸ್ ಪೈಪ್ ಹಾಗೂ ಮನೆಯಲ್ಲಿರುವ ವಸ್ತುಗಳಿಗೆ ಬೆಂಕಿ ಹರಡಿದೆ. ಅಡುಗೆ ಮನೆಯಿಂದ ಹೊರಬರಲು ಯತ್ನಿಸಿದ ಮೇರಿಗೆ ಬೆಂಕಿ ತಗುಲಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಮೇರಿಯನ್ನು ರಕ್ಷಣಾ ಕಾರ್ಯ ಮಾಡಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ, ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೇರಿ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?