
ಬೆಂಗಳೂರು (ಫೆ.07): ಗಂಡ- ಹೆಂಡತಿ ಇಬ್ಬರ ಸಂಬಂಧ ಸರಿಯಾಗಿರದ ಹಿನ್ನೆಲೆಯಲ್ಲಿ ಇಬ್ಬರೂ ಪರಸ್ಪರ ಒಪ್ಪಿಕೊಂಡು ಡಿವೋರ್ಸ್ ಪಡೆದಿದ್ದಾರೆ. ಆದರೆ, ನನಗೆ ಮನೆ ಬಾಡಿಗೆ ಕಟ್ಟಲು ಹೊರೆಯಾಗುತ್ತದೆ ಇಬ್ಬರೂ ಜೊತೆಯಲ್ಲಿದ್ದುಕೊಂಡು ಹೋಗೋಣವೆಂದು ಪುಸಲಾಯಿಸಿದ್ದ ವ್ಯಕ್ತಿ, ಪತ್ನಿಯನ್ನು ಕೊಂದು ಮಗುವಿನೊಂದಿಗೆ ಪರಾರಿ ಆಗಿದ್ದಾನೆ.
ಪತಿ ಪತ್ನಿ ಸಂಬಂಧಗಳು ಸರಿಯಾಗಿ ಇಲ್ಲದಿದ್ದರೆ ಇಬ್ಬರೂ ಬೇರೆ ಬೇರೆಯಾಗಿ ಜೀವನ ಮಾಡಬೇಕು ಎನ್ನುವ ಉದ್ದೇಶದಿಂದಲೇ ವಿವಾಹ ವಿಚ್ಛೇದನವನ್ನೂ ಪಡೆದುಕೊಂಡು ದೂರವಾಗಿದ್ದಾರೆ. ಆದರೆ, ಕೋರ್ಟ್‌ನಲ್ಲಿ ಚಿಕ್ಕ ಮಗುವನ್ನು ಪತ್ನಿಯ ಬಳಿಯೇ ಉಳಿದುಕೊಳ್ಳಲು ನ್ಯಾಯಾಲಯ ಆದೇಶ ನೀಡಿದೆ. ಆದರೆ, ಮಗುವನ್ನು ತಾನು ಹೇಗಾದರೂ ಮಾಡಿ ತಾನು ಪಡೆಯಬೇಕು ಎಂಬ ಉದ್ದೇಶದಿಂದ ಕುತಂತ್ರವನ್ನು ಮಾಡಿದ ಪತಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಕಟ್ಟುವುದು ಒಬ್ಬನಿಗೆ ಹೊರೆ ಆಗುತ್ತಿದೆ. ಇಬ್ಬರೂ ಒಂದೇ ಮನೆಯಲ್ಲಿದ್ದು ಮಗುವನ್ನು ಪೋಷಣೆ ಮಾಡುತ್ತಾ ಶೇರಿಂಗ್ ಮಾದರಿಯಲ್ಲಿ ಬಾಡಿಗೆ ಕಟ್ಟಿಕೊಳ್ಳೋಣ ಎಂದು ಜೊತೆಯಲ್ಲಿರುವಂತೆ ಪುಸಲಾಯಿಸಿದ್ದಾನೆ. ನಂತರ ಪತ್ನಿಯನ್ನೇ ಕೊಂದಿದ್ದಾನೆ.
ನಾನು ಮತ್ತೊಬ್ಬ ಸುಶಾಂತ್ ಸಿಂಗ್ ಆಗಲ್ಲ; ಪತ್ನಿ ರಾಖಿ ಸಾವಂತ್ ಆರೋಪಗಳಿಗೆ ಸಿಡಿದೆದ್ದ ಆದಿಲ್ ಖಾನ್
ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ: ಪತ್ನಿಯನ್ನೇ ಕೊಲೆ ಮಾಡಿದ ಆರೋಪಿಯನ್ನು ಮಜೀದ್ (40) ಎಂದು ಗುರುತಿಸಲಾಗಿದೆ. ಇನ್ನು ಕೊಲೆಯಾದ ಮೃತ ದುರ್ದೈವಿಯನ್ನು ಮೋನಿಷಾ (30) ಎಂದು ಗುರುತಿಸಲಾಗಿದೆ. ಮೂರುದಿನಗಳ ಹಿಂದೆಯೇ ಪತ್ನಿಯನ್ನ ಕೊಲೆ ಮಾಡಿದ್ದಾರೆ. ಆದರೆ, ಮನೆಯ ಮಾಲೀಕ ಯಾರೋ ಇಲ್ಲದ್ದನ್ನು ನೋಡಿ ಮನೆಯ ಇನ್ನೊಂದು ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಆದರೆ, ಕೊಲೆ ಆರೋಪಿ ಪತಿ ಮಜೀದ್ ಮೋನಿಷಾಳನ್ನ ಎರಡನೇ ಮದುವೆಯಾಗಿದ್ದನು.
ಏಳು ವರ್ಷದ ಹಿಂದೆ ಮದುವೆ: ಮಜೀದ್ - ಮೋನಿಷಾಳೊಂದಿಗೆ ಮದುವೆಯಾಗಿ ಏಳು ವರ್ಷವಾಗಿತ್ತು. ಕಳೆದ 15 ದಿನಗಳ ಹಿಂದೆ ಗಂಡ ಹೆಂಡತಿಗೆ ಡಿವೋರ್ಸ್ ಅಗಿತ್ತು. ಈ ಡಿವೋರ್ಸ್ ವಿಚಾರವನ್ನ ಮೋನಿಷಾ ಪಕ್ಕದ ಮನೆಯವರಿಗೆ ಹೇಳಿದ್ದಳು. ಆದರೆ, ಡಿವೋರ್ಸ್ ಅಗಿದ್ರೂ ಕೂಡ ಒಂದೇ ಮನೆಯಲ್ಲೇ ಇರೋಣಾ ಎಂದು ಮಜೀದ್ ಹೇಳಿದ್ದನು. ಮನೆ ಬಾಡಿಗೆ ನನಗೂ ಹೊರೆಯಾಗುತ್ತೆ ಇಬ್ಬರು ಇದ್ದರೆ ಹಂಚಿಕೊಳ್ಳ ಬಹುದು ಎಂದಿದ್ದನು. ಆದರೆ, ಮತ್ತೆ ಇಬ್ಬರ ನಡುವೆ ಮೂರು ದಿನದ ಹಿಂದೆ ಜಗಳವಾಗಿತ್ತು. ಜಗಳ ತಾರಕಕ್ಕೇರಿ ಮೋನಿಷಾಳನ್ನ ಮಜೀದ್ ಸಾಯಿಸಿದ್ದಾನೆ ಎಂದು ನೆರೆಹೊರೆಯವರು ಆರೋಪಿಸಿದ್ದಾರೆ.
Hindu Tradition: ಈ ಆಚರಣೆ ಪೂರ್ಣವಾಗದೆ, ವಧು ಪತ್ನಿಯಾಗೋಲ್ಲ!
ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ: ಪತ್ನಿಯನ್ನು ಕೊಂದ ಬಳಿಕ ಮಜೀದ್ ಮನೆ ಲಾಕ್ ಮಾಡಿಕೊಂಡು ಮಗುವಿನೊಂದಿಗೆ ಎಸ್ಕೇಪ್ ಅಗಿದ್ದನು. ವರ್ತೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಆಗಿದೆ. ತಲೆ ಮರೆಸಿಕೊಂಡಿರುವ ಪತಿ ಮಜೀದ್ ಗಾಗಿ ವರ್ತೂರು ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಮೊದಲ ಪತ್ನಿಯ ಜೊತೆಗೆ ಹೊಂದಾಣಿಕೆ ಜೀವನ ಮಾಡದೇ ಎರಡನೇ ಮದುವೆ ಆಗಿದ್ದನು. ಈಗ ಎರಡನೇ ಹೆಂಡತಿಯೊಂದಿಗೂ ಹೊಂದಾಣಿಕೆಯಿಮದ ಜೀವನ ಮಾಡಲಾಗದೇ ವಿಚ್ಛೇದನವನ್ನೂ ಪಡೆದಿದ್ದನು. ಈಗ ಪತ್ನಿಯನ್ನು ಕೊಂದು ಪರಾರಿ ಆಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ