ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಯೊಂದಿಗೆ ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮೃತರ ಕುಟುಂಬಸ್ಥರು ಪತ್ನಿ ಮತ್ತು ಮಾಜಿ ಉಪಕುಲಪತಿ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳೂರು (ಡಿ.23): ಮದುವೆಯಾದ ಮೇಲೆ ಹೆಂಡತಿಯನ್ನು ಕಾಲೇಜಿಗೆ ಕಳಿಸಿ ಡಿಗ್ರಿ ಮಾಡಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿಸಿದರೆ, ಅಲ್ಲಿದ್ದ ಮಾಜಿ ರಿಜಿಸ್ಟ್ರಾರ್ ತನ್ನ ಹೆಂಡತಿಗೆ ಹಣದಾಸೆ ತೋರಿಸಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಎಷ್ಟೇ ಹೇಳಿದರೂ ಅಕ್ರಮ ಸಂಬಂಧ ಬಿಡದ ಹಿನ್ನೆಲೆಯಲ್ಲಿ ಇದೀಗ ಗಂಡನೇ ಜೀವ ಬಿಟ್ಟಿದ್ದಾನೆ.
ಹೌದು, ಸಿಲಿಕಾನ್ ಸಿಟಿ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಹೆಂಡತಿ ಅನೈತಿಕ ಸಂಬಕ್ಕೆ ಬೇಸತ್ತು ಲಾರಿ ಮಾಲೀಕ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತರನ್ನು ಸ್ವಾಮಿ @ ಸೋಮಶೇಖರ್ (45) ಎನ್ನುವವರಾಗಿದ್ದಾರೆ. ಈ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ ತಡರಾತ್ರಿ 02 ಗಂಟೆ ಸುಮಾರಿಗೆ ಸಾವಿಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.
undefined
ಈ ಬಗ್ಗೆ ಮಾತನಾಡಿದ ಮೃತ ಸೋಮಶೇಖರ್ ಸಂಬಂಧಿಕ ನಾಗರಾಜು ಅವರು, ಸೋಮಶೇಖರ್ ಅವರ ತಂಗಿಯ ಗಂಡ (ಭಾವ) ನಾನು. ಸೋಮಶೇಖರ್ ಹೆಂಡತಿಯ ಸಂಬಂಧದ ಬಗ್ಗೆ ಮನನೊಂದು ಹೀಗೆ ಮಾಡಿಕೊಂಡಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲದ ಉಪಕುಲಪತಿ ಮೈಲಾರಪ್ಪ ಜೊತೆ ಆಕೆಗೆ ಸಂಬಂಧ ಇತ್ತು. ಇದೇ ವಿಚಾರವಾಗಿ ಆಗಾಗ ಮಾತುಕತೆ ಆಗುತ್ತಿತ್ತು. ಮಾಜಿ ಉಪಕುಲಪತಿ ಅವರ ಪತ್ನಿಗೆ ನನ್ನ ಬಾಮೈದ ವಿಚಾರ ಹೇಳಿದ್ದನು. ಆಗಾಗ ಈ ಬಗ್ಗೆ ಮಾತುಕತೆ ಕೂಡ ನಡೆದಿತ್ತು. ಆದರೂ ಅವರು ಅನೈತಿಕ ಸಂಬಂದವನ್ನು ಬಿಡಲಿಲ್ಲ.
ಇಷ್ಟಾದರೂ ಮೈಲಾರಪ್ಪ ಪವಿತ್ರಾ ಅವರಿಗೆ ನೀನು ಸೋಮಶೇಖರ್ ಜೊತೆ ಇರಬೇಡ, ನನ್ನ ಜೊತೆ ಬಂದುಬಿಡು ಅಂತಾ ಹೇಳಿದ್ದನು. ಅದರ ಆಡಿಯೋ ಕೂಡ ನಮ್ಮ ಬಳಿ ಇದೆ. ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳಿರುವ ಹೆಂಡತಿಯನ್ನು ಹಾಗೂ ಸಂಸಾರವನ್ನು ಹಾಳು ಮಾಡಿದ ಮೈಲಾರಪ್ಪನೇ ನನ್ನ ಬಾಮೈದ ಸಾವಿಗೆ ಶರಣಾಗುವಂತೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಅವರು ಪ್ರಕರಣವನ್ನೇ ದಾಖಲಿಸಿಕೊಳ್ಳುತ್ತಿಲ್ಲ. ಮಾಜಿ ಉಪಕುಲಪತಿ ಮೈಲಾರಪ್ಪ ಹಾಗೂ ಪವಿತ್ರಾ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಸೋಮಶೇಖರ್ ಅವರ ಭಾವ ನಾಗರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ಗೇಮ್ ಸಾಲ ತೀರಿಸಲು ದರೋಡೆ; ಮರ ಕತ್ತರಿಸುವ ಯಂತ್ರದಿಂದ ಅಡ್ಡ ಬಂದವರನ್ನು ಕತ್ತರಿಸಿದ ಇಬ್ರಾಹಿಂ!
ಸೋಮಶೇಖರ್ 2005-06ರಲ್ಲಿ ಪವಿತ್ರಾಳನ್ನ ಮದುವೆಯಾಗಿದ್ದನು. ಆಗ ತಾನೆ ಪಿಯುಸಿ ಮಗಿಸಿದ್ದ ಪವಿತ್ರಾಳನ್ನ ಮದುವೆಯಾಗಿದ್ದ ಸೋಮಶೇಖರ್, ನಂತರ ಹೆಂಡತಿಯನ್ನ ಕಾಲೇಜಿಗೆ ಸೇರಿಸಿ ಬಿ.ಕಾಂ ಓದಿಸಿದ್ದನು. ಮದುವೆಯಾದ ಮೇಲೆ ಪತ್ನಿಯನ್ನ ವಿದ್ಯಾವಂತಳನ್ನಾಗಿ ಮಾಡಿದ ನಂತರ ಆಕೆ ಮನೆಯಲ್ಲಿದ್ದರೆ ಓದಿದ್ದಕ್ಕೆ ಏನು ಸಾರ್ಥಕವೆಂದು ಬೆಂಗಳೂರು ವಿ.ವಿ.ಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಈ ವೇಳೆ ಬೆಂಗಳೂರು ವಿವಿ ಉಪಕುಲಪತಿ (ರಿಜಿಸ್ಟ್ರಾರ್) ಆಗಿದ್ದ ಮೈಲಾರಪ್ಪ ಪವಿತ್ರಾಳಿಗೆ ಹಣದಾಸೆ ತೋರಿಸಿ ಬುಟ್ಟಿಗೆ ಬೀಳಿಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇದಾದ ನಂತರ ಇಬ್ಬರ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿ ಸೋಮಶೇಖರ್ ತನ್ನ ಹೆಂಡತಿ ಪವಿತ್ರಾಗೆ ಹಲವು ಬಾರಿ ಮಾತುಕತೆ ಮೂಲಕ ಬುದ್ಧಿಯನ್ನೂ ಹೇಳಿದ್ದನು. ಜೊತೆಗೆ, ಮೈಲಾರಪ್ಪ ಹಾಗೂ ಪವಿತ್ರಾ ಇಬ್ಬರನ್ನೂ ಕೂರಿಸಿ ಇಬ್ಬರಿಗೂ ಪ್ರತ್ಯೇಕ ಸಂಸಾರ ಹಾಗೂ ಮಕ್ಕಳಿದ್ದು, ಅನೈತಿಕ ಸಂಬಂಧ ಬಿಟ್ಟುಬಿಡುವಂತೆ ಮಾತುಕತೆಯನ್ನೂ ಮಾಡಿದ್ದನು. ಈ ವಿಚಾರವನ್ನು ಮೈಲಾರಪ್ಪನ ಹೆಂಡತಿಗೆ ಹೇಳಿ ನಿಮ್ಮ ಗಂಡನನ್ನು ಬಿಗಿಯಾಗಿ ಇಟ್ಟುಕೊಳ್ಳುವಂತೆ ಸೋಮಶೇಖರ್ ಹೇಳಿದ್ದನು. ಇದಾದ ನಂತರವೂ ಸಂಬಂಧ ಮುಂದುವರೆಸಿದ್ದಕ್ಕೆ ಮೈಲಾರಪ್ಪನ ಪತ್ನಿಯೇ ಪವಿತ್ರಾಳ ಮನೆಗೆ ಬೈದು ಬುದ್ಧಿ ಹೇಳಿ ಹೋಗೊದ್ದಳು. ಇದಕ್ಕೂ ಕೇಳದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕುಟುಂಬದ ಪ್ರೀತಿ ಪರಿಶೀಲಿಸಲು ತನ್ನದೇ ಕಿಡ್ನಾಪ್ ನಾಟಕ, ಮುಂದೇ ನಡೆದಿದ್ದೇ ರೋಚಕ!
ಸದ್ಯ ಪತ್ನಿ ಪವಿತ್ರಾ ಹಾಗೂ ಮಾಜಿ ಉಪ ಕುಲಪತಿ ಮೈಲಾರಪ್ಪ ವಿರುದ್ದ ಮೃತ ಸೋಮಶೇಖರ್ ಕುಟುಂಬಸ್ಥರು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಆದರೆ, ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಠಾಣೆ ಮುಂದೆ ಸೋಮಶೇಖರ್ ಕುಟುಂಬದ 30ಕ್ಕೂ ಅಧಿಕ ಜನರು ಜಮಾಯಿಸಿ ಪ್ರತಿಭಟನೆ ಆರಂಭಿಸಿದ್ದಾರೆ. ಪವಿತ್ರಾ ಹಾಗೂ ಮೈಲಾರಪ್ಪನನ್ನ ಅರೆಸ್ಟ್ ಮಾಡಿಲ್ಲವೆಂದರೆ ಧರಣಿ ಮಾಡುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇದಾದ ನಂತರ ಮಹಾಲಕ್ಷ್ಮಿ ಠಾಣೆ ಪೊಲೀಸರು ಪ್ರಕರಣ ಬಗ್ಗೆ ಪರಿಶೀಲನೆ ಆರಂಭಿಸಿದ್ದಾರೆ.